ಅಬಕಾರಿ ಇಲಾಖೆ ದಾಳಿಯಲ್ಲಿ 17.280 ಲೀಟರ್ ಮಧ್ಯ ವಶ

ಅಬಕಾರಿ ಇಲಾಖೆ ದಾಳಿಯಲ್ಲಿ 17.280 ಲೀಟರ್ ಮಧ್ಯ ವಶ 17,280 liters of liquor seized in Excise Department raid


ಲೋಕದರ್ಶನ ವರದಿ  

ಇಂಡಿ 07 : ಹೋಳಿ ಹಬ್ಬದ ನಿಮಿತ್ಯ ವಿಜಯಪುರ ಜಿಲ್ಲ್ಯಧ್ಯಾಂತ ಮದ್ಯ ಮಾರಾಟ ನಿಷೇದಾಜ್ಞೆ ಜಾರಿಯಲ್ಲಿ ಇರುವುದರಿಂದ ದಿನಾಂಕ-07/03/2026 ರಂದು ಮಧ್ಯಾಹ್ನ 2.40 ಗಂಟೆಗೆ ಇಂಡಿ ತಾಲ್ಲೂಕಿನ ನಾದ ಕೆಡಿಗ್ರಾಮದಿಂದ -ಆಲಮೇಲ ಹೋಗುವ ರಸ್ತೆಯಲ್ಲಿ ಇರುವ ಆರ್ ಪಿ ಗಾರ್ಡನ್ ಮತ್ತು ಫ್ಯಾಮಿಲಿ ರೆಸ್ಟೋರೆಂಟ್  ಮೇಲೆ ಅಬಕಾರಿ ಇಲಾಖೆ ದಾಳಿ ಮಾಡಿ ಒಟ್ಟ 17.280 ಲೀಟರ್ ಮಧ್ಯ  ಹಾಗೂ 15.6 ಲೀಟರ್ ಬಿಯರ್ ಜಪ್ತಿ ಮಾಡಿ ವಶಪಡಿಸಿಕೊಂಡಿದ್ದಾರೆ.  

ಆರೋಪಿ ಮಂಜುನಾಥ ಚಂದ್ರಕಾಂತ್ ಕುಂಬಾರ ಸಾ.ನಾದಕೆಡಿ ತಾ.ಇಂಡಿ ಸದರಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಮತ್ತು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತ್ತು . ರಾಹುಲ್ ಎಸ್ ನಾಯಕ ಅಬಕಾರಿ ನೀರೀಕ್ಷಕರು ಇಂಡಿ  ಇವರನೇತೃತ್ವದಲ್ಲಿ ದಾಳಿ ಮಾಡಲಾಯಿತು.ಈ ದಾಳಿಯಲ್ಲಿ ಎಸ್ ಜಿ ಅಂಗಡಿ ಅಬಕಾರಿ ಉಪ ನೀರೀಕ್ಷಕರು-2 ಇಂಡಿ ವಲಯ ಇವರು ಪ್ರಕರಣವನ್ನು ದಾಖಲಿಸಿಕೊಂಡರು ಈ ದಾಳಿಯಲ್ಲಿ ಸಿಬ್ಬಂದಿಗಳಾದ  ಶಿವಶಂಕರ ಗೋಟ್ಯಾಳಯ ಸುಭಾಷ್ ಅಥರ್ಗಾ , ಸಂಜುಕುಮಾರಹೂವಿನವರ , ಮಲ್ಲಪ್ಪ  ಬಿರಾದಾರ, ದಾಳಿಯಲ್ಲಿ ಪಾಲ್ಗೊಂಡಿದ್ದರು ಎಂದು ರಾಹುಲ್ ನಾಯಕಅಬಕಾರಿ ನೀರೀಕ್ಷಕರು ಇಂಡಿ ಅವರು ತಿಳಿಸಿದ್ದಾರೆ.