ಗಾಂಧಿನಗರ ಬಾಲಭಾರತೀ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತಿ, ಕರಾಟೆ ಮಕ್ಕಳಿಗೆ ಬೆಲ್ಟ್ ವಿತರಣಾ ಕಾರ್ಯಕ್ರಮ
163rd birth anniversary of Swami Vivekananda, belt distribution program for karate children at Bala
ಬಳ್ಳಾರಿ 01: ಗಾಂಧಿನಗರ ಬಾಲಭಾರತೀ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತಿ, ಕರಾಟೆ ಮಕ್ಕಳಿಗೆ ಬೆಲ್ಟ್ ವಿತರಣಾ ಕಾರ್ಯಕ್ರಮವನ್ನು ಏರಿ್ಡಸಲಾಗಿತ್ತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಬಿ.ಕೆ.ಬಿ.ಎನ್.ಮೂರ್ತಿ ರವರು ವಹಿಸಿದರು. ಇವರು ಮಾತನಾಡಿ ಸ್ವಾಮಿ ವಿವೇಕಾನಂದರು ಜಗತ್ತು ಕಂಡ ಅದ್ಬುತ ವೀರ ಸನ್ಯಾಸಿ ಅಂತಹ ಮಹನ್ ವ್ಯಕ್ತಿಯನ್ನು ನೆನಸುವುದೆ ಪುಣ್ಯದ ಕೆಲಸ ಮತ್ತು ಕರಾಟೆಯಿಂದ ದೈಹಿಕ ಮತ್ತು ಮಾನಸಿಕ ಶಕ್ತಿ ಹೆಚ್ಚಾಗುತ್ತದೆ. ಪ್ರತಿಯೊಬ್ಬ ಮಕ್ಕಳು ಶ್ರದ್ಧೆಯಿಂದ ಕರಾಟೆಯನ್ನು ಕಲಿಯಬೇಕು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಸ್ವಾಮಿ ವಿವೇಕಾಂದರ ಭಾವಚಿತ್ರಕ್ಕೆ ಪುಷ್ರೆ್ಪಣಯನ್ನು ಮಾಡುವುದರ ಮೂಲಕ ಶ್ರೀ ದಂಡಿನ ಶಿವಾನಂದ ನವರು, ರಾಜ್ಯಾಧ್ಯಕ್ಷರು ಅಖಿಲ ಭಾರತ ವೀರಶೈವ ಮಹಾಸಭಾ ಆಂಧ್ರ ಪ್ರದೇಶ, ಇವರು ಉದ್ಘಾಟಿಸಿದರು. ಇವರು ಮಾತನಾಡಿ ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಆದರ್ಶ ವ್ಯಕ್ತಿಗಳಾಗಬೇಕು ಎಂದು ತಿಳಿಸಿದರು. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳಿಗೆ ಕರಾಟೆ, ಯೋಗ, ಧ್ಯಾನ, ಕಲಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಕುಮಾರಿ ಮನೋಜ್ಞಾ ಪ್ರಾರ್ಥನೆ ಗೀತೆ ಹಾಡಿದಳು. ಕರಾಟೆ ಮಕ್ಕಳಿಂದ ಕರಾಟೆ ಪ್ರದರ್ಶನ ನಡೆಯಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಕೋರಿ ವಿರುಪಾಕ್ಷಪ್ಪನವರು, ಶ್ರೀಮಾನ್ ಕಟ್ಟೆಗೌಡರು, ಶ್ರೀ ಮುರಳಿಯವರು, ಶ್ರೀ ಸುರೇಶ, ಕಾರ್ಯನಿರ್ವಹಕ ಅಭಿಯಂತರರು, ಶ್ರೀ ಗಂಗಾವತಿ ವಿರೇಶ್, ಪ್ರಧಾನ ಕಾರ್ಯದರ್ಶಿಗಳು, ಅ.ಭಾ.ವೀ.ಮ.ಸಭಾ, ಬಳ್ಳಾರಿ, ಆನಂದ ಗಾಜುಲು ಮುಂತಾದವರು ಭಾಗವಹಿಸಿದರು. ಪ್ರಾಸ್ತವಿಕವಾಗಿ ಟ್ರಸ್ಟ್‌ನ ಅಧ್ಯಕ್ಷರಾದ ಬಂಡ್ರಾಳ್ ಎಂ.ಮೃತ್ಯುಂಜಯಸ್ವಾಮಿ ಮಾತನಾಡಿದರು, ಕಾರ್ಯಕ್ರಮದ ವಂದನಾರೆ್ಣಯನ್ನು ಶ್ರೀ ವಾಸುದೇವರಾಜುಲು ಇವರು ನಿರ್ವಹಿಸಿದರು.
ಸುಪ್ರೀಂನಲ್ಲಿರುವ ಬೆಳಗಾವಿ ಜಿಲ್ಲೆಯ 350 ಪ್ರಕರಣಗಳಿಗೆ ರಾಜಿ ಸಂಧಾನದಿಂದ ಇತೇರ್ಥಕ್ಕೆ ಪ್ರಯತ್ನ : ನ್ಯಾ. ಮಂಜುನಾಥ ನಾಯಕ
ಇರಾನ್ ಸಂಘರ್ಷದ ಮೇಲೆ ಅಧ್ಯಕ್ಷರ ಯುದ್ಧಾಧಿಕಾರಗಳನ್ನು ನಿಯಂತ್ರಿಸಲು ಅಮೆರಿಕ ಸೆನೆಟ್ ಮತದಾನ; ಪಕ್ಷೀಯ ವಿಭಜನೆ ಬಹಿರಂಗ
ಸಚಿವ ಸತೀಶ್ ಜಾರಕಿಹೊಳಿ ಅಳಿಯನಿಗೆ ಇಡಿ ಶಾಕ್ ; ಮನೆ, ಕಚೇರಿ ಸೇರಿ 6 ಕಡೆ ದಾಳಿ
ಆತ್ಮನಿರ್ಭರ ಭಾರತ, ಮೇಕ್ ಇನ್ ಇಂಡಿಯಾ, ಇಂಧನ ಭದ್ರತೆ ರಾಷ್ಟ್ರದ ಪ್ರಮುಖ ಆದ್ಯತೆಗಳು: ಪ್ರಧಾನಿ ಮೋದಿ
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ 