ಶಿವಯೋಗಿಗಳ 158 ನೇ ಜಯಂತಿ : ಸದ್ಭಾವನಾ ಯಾತ್ರೆ

ಶಿವಯೋಗಿಗಳ 158 ನೇ ಜಯಂತಿ :    ಸದ್ಭಾವನಾ ಯಾತ್ರೆ  158th birth anniversary of Shivayogi: Sadbhavana Yatra

ಶಿವಯೋಗಿಗಳ 158 ನೇ ಜಯಂತಿ :    ಸದ್ಭಾವನಾ ಯಾತ್ರೆ  

ಗಂಗಾವತಿ  15: ತಾಲೂಕು ವೀರಶೈವ-ಲಿಂಗಾಯತ ಮಹಾ ಸಭಾ ಘಟಕದಿಂದ ಹಮ್ಮಿಕೊಳ್ಳಲಾಗಿರುವ ಹಾನಗಲ್ ಕುಮಾರ ಮಹಾ ಶಿವಯೋಗಿಗಳ 158 ನೇ ಜಯಂತಿ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಸದ್ಭಾವನಾ ಯಾತ್ರೆ ರವಿವಾರ ಬೆಳಿಗ್ಗೆ ನಗರದಲ್ಲಿ ಅದ್ದೂರಿಯಾಗಿ ನಡೆಯಿತು.ಬಡಾವಣೆಯ ಎಲ್ಲಾ ರಸ್ತೆಗಳಲ್ಲಿ ಶ್ರೀಗಳು ಪಾದಯಾತ್ರೆ ನಡೆಸಿದರು.ಎಲ್ಲಾ ಬಡವಾಣೆಗಳಲ್ಲಿ ಅಲ್ಲಿಯ ನಿವಾಸಿಗಳು ಸಕ್ರೀಯವಾಗಿ ಭಾಗವಸಿದ್ದರು. ತಳಿರು ತೋರಣ,ರಂಗೋಲೆಯಿಂದ ಎಲ್ಲಾ ರಸ್ತೆಗಳನ್ನು ಸಿಂಗರಿಸಲಾಗಿತ್ತು.ಮಹಾ ಸಭೆಯ ತಾಲೂಕು ಅಧ್ಯಕ್ಷ ಗಿರೇಗೌಡ ಹೊಸ್ಕೇರಾ,ಉಪಾಧ್ಯಕ್ಷ ಶರಣೇಗೌಡ ಮಾಲಿ ಪಾಟೀಲ್, ಮುಷ್ಟಿ ವಿರುಪಾಕ್ಷಪ್ಪ ,ಪ್ರಧಾನ ಕಾರ್ಯದರ್ಶಿ ಮನೋಹರ ಸ್ವಾಮಿ ಹಿರೇಮಠ, ಜಂಟಿ ಕಾರ್ಯದರ್ಶಿ ಸಂಧ್ಯಾ ಅಶೋಕಸ್ವಾಮಿ ಹೇರೂರ, ಸದಸ್ಯರಾದ ಕರಬಸಪ್ಪ ಬೂದಗುಂಪಿ,ಪ್ರಮುಖರಾದ ಪರಣ್ಣ ಮುನವಳ್ಳಿ, ಶಶಿಧರಸ್ವಾಮಿ ಮುದೇನೂರು ಹಿರೇಮಠ,ವಿರುಪಾಕ್ಷಪ್ಪ ಸಿಂಗನಾಳ, ಸಿದ್ಧರಾಮಯ್ಯ ಸ್ವಾಮಿ ಸಂಗಾಪೂರ, ನ್ಯಾಯವಾದಿಗಳಾದ ತಿಪ್ಪೆರುದ್ರಸ್ವಾಮಿ,ಕವಿತಾ ಗುರುಮೂರ್ತಿ,ವಿರೇಶಪ್ಪ ಕಮಲಾಪೂರ,ವಿರೇಶಪ್ಪ ಬಾದನಟ್ಟಿ, ಶ್ಯಾಮ ಮೂರ್ತಿ ಐಲಿ,ಅಮರೇಗೌಡ, ಮಹಾಲಿಂಗಪ್ಪ ಬನ್ನಿಕೊಪ್ಪ, ಶಾಂತಮಲ್ಲಯ್ಯ,ಸಂಗಯ್ಯ ಸಂಶಿಮಠ,ರಂಗಣ್ಣ ದರೋಜಿ,ಜೋಗದ ನಾರಾಯಣಪ್ಪ ,ವೀರಭದ್ರ​‍್ಪ ನಾಯಕ ಸೇರಿದಂತೆ ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.ಮಹಿಳಾ ಘಟಕದ ಅಧ್ಯಕ್ಷೆ ನಂದಿನಿ ಮುದಗಲ್,ಪ್ರಧಾನ ಕಾರ್ಯದರ್ಶಿ ಶಿಲ್ಪಾ ಶ್ರೀನಿವಾಸ,ಮಂಜುಳಾ ಗಾಳಿ, ಸುಮಾ ಮಸ್ಕಿ ,ವಿಮಲಾದೇವಿ ಹಿರೇ ಜಂತಕಲ್,ಪ್ರತಿಭಾ ಸಿಂಗನಾಳ,ಚಂದ್ರಕಲಾ ಮುಂತಾದವರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು.ಮಧ್ಯಾಹ್ನ ವಡ್ಡರಹಟ್ಟಿ ಮತ್ತು ಆರ್ಹಾಳ ಗ್ರಾಮಗಳಲ್ಲಿಯೂ ಶ್ರೀಗಳ ಪಾದಯಾತ್ರೆಯನ್ನು  ಊರಿನ ಹಿರಿಯರು,ಯುವಕರು ಮತ್ತು ಮಹಿಳೆಯರು ಪಾಲ್ಗೊಂಡು ಸಧ್ಬಾವನಾ ಯಾತ್ರೆಯನ್ನು ಅದ್ಧೂರಿಯಿಂದ ಸ್ವಾಗತಿಸಿದರು.