ಕಾದಂಬರಿ ಪಿತಾಮಹ ಗಳಗನಾಥರ 152ನೇ ಜನ್ಮ ದಿನೋತ್ಸವ
152nd birth anniversary of the father of novels, Galaganatha
ಹಾವೇರಿ:ಜ.05: ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಯು ತಮ್ಮ ಜೀವನದಲ್ಲಿ ದೊಡ್ಡದಾದ ಗುರಿಯೊಂದಿಗೆ ಕನಸು ಕಾಣಬೇಕು. ಆ ಕನಸು ನಿರಂತರ ಅಧ್ಯಯನ ಹಾಗೂ ಕಠಿಣ ಪರಿಶ್ರಮದಿಂದ ನನಸು ಮಾಡಿಕೊಳ್ಳಬೇಕೆಂದು ಗಳಗನಾಥ ಮತ್ತು ನಾ. ರಾಜಪುರೋಹಿತ ಪ್ರತಿಷ್ಠಾನದ ಅಧ್ಯಕ್ಷ ಡಾಕ್ಟರ್ ಕೆ.ಆರ್ ಕಮಲೇಶ್ ಹೇಳಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಗಳಗನಾಥ ಮತ್ತು ನಾ. ರಾಜಪುರೋಹಿತ ಪ್ರತಿಷ್ಠಾನ ಹಾಗೂ ಟಿ ಎಂ ಎ ಇ ಎಸ್ ಶಿಕ್ಷಣ ಮಹಾವಿದ್ಯಾಲಯ ಆಶ್ರಯದಲ್ಲಿ ಸೋಮವಾರ ಜರುಗಿದ ಗಳಗನಾಥರ 152ನೇ ಜನ್ಮದಿನೋತ್ಸವದ ಅಂಗವಾಗಿ ಬಿ.ಎಡ್ ಪ್ರಶಿಕ್ಷಣಾರ್ಥಿಗಳಿಗೆ ಹಾವೇರಿ ಜಿಲ್ಲಾಮಟ್ಟದ ಕರ್ನಾಟಕ ದರ್ಶನ ರಸಪ್ರಶ್ನೆ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು
‘ಕನ್ನಡ ಸಾಹಿತ್ಯದ ಅರಣೋದಯ ಕಾಲದಲ್ಲಿ ಗಳಗನಾಥರ ಬರವಣಿಗೆಯಿಂದ ಅನೇಕ ಸಾಹಿತಿಗಳು ಪ್ರಭಾವಿತರಾಗಿದ್ದರು. ಕನ್ನಡ ದಯನೀಯ ಸ್ಥಿತಿಯಲ್ಲಿದ್ದಾಗ, ಮರಾಠಿ ಪ್ರಭಾವಕ್ಕೆ ಒಳಗಾಗಿದ್ದ ಧಾರವಾಡ ಶಿಕ್ಷಕರ ತರಬೇತಿ ಸಂಸ್ಥೆಯು ಗಳಗನಾಥರ ಬರವಣಿಗೆಗೆ ಪ್ರೇರಣೆಯಾಯಿತು’ ಗಳಗನಾಥರು ತಮ್ಮ ಸಾಲ ತೀರಿಸಲೆಂದೇ ಪುಸ್ತಕಗಳನ್ನು ಬರೆದು, ತಲೆ ಮೇಲೆ ಹೊತ್ತು ಮಾರಾಟ ಮಾಡಬೇಕಾದ ಅನಿವಾರ್ಯತೆ ಬಂದೊದಗಿತ್ತು. ಹೀಗಾಗಿ ಅವರನ್ನು ಆಧುನಿಕ ಪೀಳಿಗೆಗೆ ಪರಿಚಯಿಸುವ ಕೆಲಸ ಆಗಬೇಕಾಗಿದೆ ಭಾವಿ ಶಿಕ್ಷಕರಾಗಿರುವ ತಾವುಗಳು ಮುಂದೆ ಶಿಕ್ಷಕ ವೃತ್ತಿಯನ್ನು ಗೌರವಿಸುವ ನಿಟ್ಟಿನಲ್ಲಿ ಸಾಗಬೇಕು. ಅಂತಹ ಅರ್ಹತೆಗಳನ್ನು ತಾವು ಹೊಂದಬೇಕು. ಶಿಕ್ಷಕ ವೃತ್ತಿಗೆ ನಮ್ಮದೇಶದಲ್ಲಿ ಒಂದು ಅತ್ಯುನ್ನತ ಸ್ಥಾನವಿದೆ. ಆ ಸ್ಥಾನವನ್ನು ನಿಭಾಯಿಸುವ ದಿಸೆಯಲ್ಲಿ ಸಾಗಿ ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿ ಮಾತು ಹೇಳಿದರು. ಟಿ ಎಂ ಎ ಇ ಎಸ್ ಶಿಕ್ಷಣ ಮಹಾವಿದ್ಯಾಲಯ ಪ್ರಾಚಾರ್ಯ ಡಾ ಎಸ್ ಕೆ ಪ್ರಸಾದಮಠ ಅಧ್ಯಕ್ಷತೆ ವಹಿಸಿದ್ದರು. ಪ್ರತಿಷ್ಠಾನದ ಸದಸ್ಯ ವೆಂಕಟೇಶ್ ಗಳಗನಾಥ ಹನುಮಂತಗೌಡ ಗೊಲ್ಲರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯ ಸಹಾಯಕ ನಿರ್ದೇಶಕ ವೀರಯ್ಯ ಹಿರೇಮಠ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 