ಹವಾಮಾನ ಇಲಾಖೆಯ 150 ನೇ ವರ್ಷಾಚರಣೆ
150th Anniversary of Meteorological Department
ಹವಾಮಾನ ಇಲಾಖೆಯ 150 ನೇ ವರ್ಷಾಚರಣೆ
ಗದಗ 15 : ಭಾರತ ಹವಾಮಾನ ಇಲಾಖೆಯ (1875-2025), 150 ನೇ ವರ್ಷದ ಸಂಸ್ಥಾಪನಾ ದಿನವನ್ನು ನಗರದ ಹವಾಮಾನ ಇಲಾಖೆಯಲ್ಲಿ ಬುಧವಾರ ಆಚರಿಸಲಾಯಿತು.
ನಿವೃತ್ತ ಹವಾಮಾನ ತಜ್ಞ ನಟರಾಜ ಸವಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಹವಾಮಾನ ಇಲಾಖೆಯ ಪ್ರಬಾರಿ ಅಧಿಕಾರಿ ಶ್ರೀಮತಿ ತಿಪ್ಪಲಕ್ಷ್ಮಿ ಕೆ.ಎಲ್. ಅವರು ಹವಾಮಾನದ ಇಲಾಖೆಯ ಇತಿಹಾಸ ಹಾಗೂ ಕಾರ್ಯನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಕಚೇರಿಯ ವೈಜ್ಞಾನಿಕ ಸಹಾಯಕರಾದ ಅಮಿತ್ ಕುಮಾರ, ಹೃಷಿಕೇಶ ತಿವಾರಿ, ಪ್ರತೀಕ ದುಬೆ, ಪ್ರದೀಪ, ಸಂಗ್ರಾಮಸಿಂಗ್ ತಾರಾಡೆ, ಎಚ್.ಸಿ.ಕಟ್ಟಿಮನಿ ಅವರು ಹವಾಮಾನ ಇಲಾಖೆಯ ಕೆಲಸದ ಸ್ವರೂಪ ಮತ್ತು ಪ್ರಾಮುಖ್ಯತೆಯ ಬಗ್ಗೆ ವಿವರವಾಗಿ ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಎಸ್‌ವಿಟಿ ನರ್ಸಿಂಗ್ ಮತ್ತು ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ಆಗಮಿಸಿದ್ದರು. ಇದೇ ಸಂದರ್ಭದಲ್ಲಿ
ಸಿಬ್ಬಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು ನಂತರ ಸಂದರ್ಶಕರೊಂದಿಗೆ ಸಂವಾದ ನಡೆಯಿತು.
ಈಜಲು ಹೊಂಡಕ್ಕೆ ಹೋದ ಇಬ್ಬರು ಅಪ್ರಾಪ್ತ ಬಾಲಕರು ನೀರುಪಾಲು : ಬೆಳಗಾವಿಯಲ್ಲಿ ಘೋರ ಘಟನೆ
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್ 