140ನೇ ಕಾಂಗ್ರೇಸ್ ಸಂಸ್ಥಾಪನಾ ದಿನದ ಆಚರಣೆ
140th Congress Foundation Day Celebrations
ಕೊಪ್ಪಳ 28: ನಗರದ ಜಿಲ್ಲಾ ಕಾಂಗ್ರೇಸ್ ಕಾರ್ಯಾಲಯದಲ್ಲಿ ದಿ. 28ರ ಬೆಳಿಗ್ಗೆ 10:30 ಗಂಟೆಗೆ ಜಿಲ್ಲಾ ಅಧ್ಯಕ್ಷರಾದ ಅಮರೇಗೌಡ ಬಯ್ಯಾಪುರರವರ ನೇತೃತ್ವದಲ್ಲಿ ಕಾಂಗ್ರೇಸ್ ಪಕ್ಷದ 140ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಂಸದ ಕೆ.ರಾಜಶೇಖರ್ ಹಿಟ್ನಾಳ್ ರವರು ಗಾಂಧೀಜಿಯವರು ಕಂಡ ಕನಸಿನ ಆಧಾರದ ಮೇಲೆ ಕಾಂಗ್ರೇಸ್ ಪಕ್ಷವು ಸಮಪಾಲು ಸಮಬಾಳು ತತ್ವದ ಅಡಿಯಲ್ಲಿ 1880 ರಲ್ಲಿ ಸ್ಥಾಪನೆಯಾಯಿತು. ಸ್ವತಂತ್ರ ಸಂಗ್ರಾಮದ ಮುಂಚಣಿ ವಹಿಸಿದ ಕಾಂಗ್ರೇಸ್ ನಾಯಕರು. ದೇಶದಿಂದ ಬ್ರಿಟಿಷರನ್ನು ಹೊರದಬ್ಬಿಸಿ 1947 ರಲ್ಲಿ ನಮ್ಮ ದೇಶಕ್ಕೆ ಸ್ವತಂತ್ರ ತಂದು ಕೊಟ್ಟರು.
ಸರಿಸುಮಾರು 70 ವರ್ಷ ಅಧಿಕಾರ ಮಾಡಿದ ಕಾಂಗ್ರೇಸ್ ಪಕ್ಷವು ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅನೇಕ ಯೋಜನೆಗಳನ್ನು ತಂದು ದೀನ ದಲಿತರ, ಬಡವರ, ಅಲ್ಪಸಂಖ್ಯಾತರ ಶ್ರೇಯಸ್ಸಿಗೆ ಅಭಿವೃದ್ಧಿಪರ ಯೋಜನೆಗಳನ್ನು ರಾಷ್ಟ್ರಕ್ಕೆ ನೀಡಿ ಬಲಿಷ್ಠ ಭಾರತ ನಿರ್ಮಾಣ ಮಾಡಿದ್ದು ಕಾಂಗ್ರೇಸ್ ಪಕ್ಷದ ಶ್ರೇಯಸ್ಸು. ಇಂದು ಅಧಿಕಾರದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರು ದೇಶವನ್ನು ಅದೋಗತಿಗೆ ಒಯ್ಯುತ್ತಿದ್ದು. ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮ ಗಾಂಧಿ ನರೇಗಾ ಯೋಜನೆಯನ್ನು ಸಂಪೂರ್ಣ ದಿವಾಳಿ ಮಾಡಿದ್ದು. ಬಡಜನರ ಹಕ್ಕನ್ನು ಕಸಿದು ಕೊಂಡಿದ್ದಾರೆಂದು ಹೇಳಿ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ ಕಿಡಿ ಕಾರಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾದ ಅಮರೇಗೌಡ ಬಯ್ಯಾಪುರರವರು ಗಾಂಧಿಜಿಯವರ ಸರ್ವೋದಯ ಕನಸು ನನಸು ಮಾಡಿದ ಹೆಗ್ಗಳಿಕೆ ಕಾಂಗ್ರೇಸ್ ಪಕ್ಷಕ್ಕೆ ಸಲ್ಲುತ್ತದೆ. ನೀರಾವರಿ , ಕೈಗಾರಿಕೆ, ಓದ್ಯೋಗಿಕರಣ ಜನತೆಗೆ ಉದ್ಯೋಗ ನೆಮ್ಮದಿ ಬದುಕನ್ನು ಕಟ್ಟಿಕೊಳ್ಳುವಲ್ಲಿ ಕಾಂಗ್ರೇಸ್ ಪಕ್ಷವು ಮಹತ್ವದ ಪಾತ್ರ ವಹಿಸಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಯೂ ಆರ್ಥಿಕವಾಗಿ ಸಬಲರಾಗಲು ಕಾಂಗ್ರೇಸ್ ಪಕ್ಷವೇ ಕಾರಣವೆಂದು ಹೇಳಿ ರಾಜ್ಯ ಸರ್ಕಾರದ ಐದು ಗ್ಯಾರೆಂಟಿಯೋಜನೆಗಳ ಬಗ್ಗೆ ನಮ್ಮ ಸರ್ಕಾರ ಕೊಟ್ಟಿರುವ ಯೋಜನೆಗಳು ಜನರ ಬದುಕನ್ನು ಹಸನ ಮಾಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಮಹಿಳಾ ಕಾಂಗ್ರೇಸ್ ಅಧ್ಯಕ್ಷಿಣಿ ಜ್ಯೋತಿ ಗೊಂಡಬಾಳ , ಬ್ಲಾಕ್ ಅಧ್ಯಕ್ಷರಾದ ಕಾಟನ್ ಪಾಷಾ, ಹಿರಿಯ ಮುಖಂಡರುಗಳಾದ ಹೆಚ್. ಎಲ್ ಹೀರೆಗೌಡ್ರು, ಮತ್ತು ಕೆ.ಎಂ ಸಯ್ಯದ್ , ಸಲೀಂ ಅಳವಂಡಿ, ಬಸವರೆಡ್ಡೆಪ್ಪಹಳ್ಳಿಕೇರಿ, ಇಂದಿರಾ ಭಾವಿಕಟ್ಟಿ, ಸಾವಿತ್ರಿ ಮುಜುಮದಾರ, ನವೋದಯ ವೀರುಪಣ್ಣ ಪದ್ಮಾವತಿ ಕಂಬಳಿ, ನಾಸೀರುದ್ದೀನ್ ಹುಸೇನಿ ಪ್ರಧಾನ ಕಾರ್ಯದರ್ಶಿಗಳಾದ ಅಕ್ಬರ್ ಪಾಷಾ ಪಲ್ಟನ್, ಇಬ್ರಾಹಿಂ ಅಡ್ಡೆವಾಲೆ, ಮಲ್ಲು ಪೂಜಾರ್ ಕಾರ್ಯಕ್ರಮದ ನಿರೂಪಿಸಿದರು. ಸುರೇಶ್ ದಾಸರೆಡ್ಡಿರವರು ವಂದನಾರೆ್ಣ ಸಲ್ಲಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 