12 ನೇ ಶತಮಾನದ ಕವಯಿತ್ರಿ ಅಕ್ಕ ಮಹಾದೇವಿಯನ್ನು ಮತ್ತು ಶರಣರನ್ನು ಸ್ಮರಿಸಬೇಕು: ಡಾ. ಮೈತ್ರೇಯಿಣಿ
12th century poetess Akka Mahadevi and Sharan should be remembered: Dr. Maitreyini
ಲೋಕದರ್ಶನ ವರದಿ
ಯರಗಟ್ಟಿ 03 : ಪಟ್ಟಣ ಮಹಾಂತ ದುರದುಡೀಶ್ವರ ಶ್ರೀಮಠದಲ್ಲಿ ಶಿವಶರಣೆ ಅಕ್ಕಮಹಾದೇವಿ ಜಯಂತಿಯನ್ನು ಅಕ್ಕನ ಬಳಗದಿಂದ ಆಚರಿಸಲಾಯಿತ್ತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ “ಅಕ್ಕ ಮಹಾದೇವಿ ಅನ್ಯಾಯದ ವಿರುದ್ಧ ಎದ್ದು ನಿಂತಿದ್ದರಿಂದ ಮಹಿಳೆಯರಿಗೆ ಮಾದರಿಯಾಗಿದ್ದಾರೆ. ವಚನಕಾರರಲ್ಲಿ ಬಸವಣ್ಣನವರಂತೆ ಮಹಿಳಾ ವಚನಕಾರ್ತಿಯಾಗಿ ಅಕ್ಕಮಹಾದೇವಿ, ತಮ್ಮ ವಚನಗಳಲ್ಲಿ ಬದುಕಿನ ಮೌಲ್ಯಗಳನ್ನು ಸಾರಿದ್ದಾರೆ. ಆಡಂಬರದ ಜೀವನಕ್ಕೆ ಆಸೆ ಬೀಳದೆ ಸಮಾಜ ಮುಖಿಯಾಗಿ ಬದುಕು ನಡೆಸಿ ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಕಾರ್ಯ ಮಾಡಿದ್ದಾರೆ ಎಂದು ಹೇಳಿದರು.
ಅವರು ತಮ್ಮ ಗುರಿಯ ಬಗ್ಗೆ ಸ್ಪಷ್ಟವಾಗಿದ್ದರು ಮತ್ತು ಏಕಾಂಗಿಯಾಗಿ ಹೋರಾಡಿದರು, ”ಎಂದು ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ ಹೇಳಿದರು. ನಮ್ಮ ಬಳಿ ಧೈರ್ಯವಿತ್ತು ಅಂದರೆ ಅಕ್ಕ ಮಹಾದೇವಿ ಅದಕ್ಕೆ ಸ್ಫೂರ್ತಿಯಾಗಿದ್ದರು ಎಂದು ಅವರು ಹೇಳಿದರು. ತಮ್ಮ ಮಕ್ಕಳಿಗೆ 'ವಚನ'ಗಳನ್ನು ಕಲಿಸುವಂತೆ ಅವರು ತಾಯಂದಿರಿಗೆ ಮನವಿ ಮಾಡಿದರು. ಮಕ್ಕಳು ಈಗ ಅರ್ಥಮಾಡಿಕೊಳ್ಳದಿದ್ದರೂ, ಭವಿಷ್ಯದಲ್ಲಿ 'ವಚನಗಳು' ಅವರಿಗೆ ಸಹಾಯ ಮಾಡುತ್ತವೆ ಆದರಿಂದ ಇಂದು ರಾಜ್ಯ ಸರಕಾರ ಅಕ್ಕಮಹಾದೇವಿಯನ್ನು ಸ್ಪೂರ್ತಿಯಾಗಿಸಿಕೊಂಡು ಇವತ್ತು ರಾಜ್ಯದಲ್ಲಿ ನಮ್ಮ ಬೆಳಗಾವಿಯಿಂದಲೆ ಪೊಲೀಸ್ ಇಲಾಖೆಯಲ್ಲಿ ಅಕ್ಕ ಪಡೆ ಎಂಬ ಒಂದು ತಂಡವನ್ನು ಮಾಡಿದ್ದಾರೆ ಎಂದು ಹೇಳಿದರು. ನಂತರ ಮಾತನಾಡಿದ ಬಿಜೆಪಿ ಮುಖಂಡ ಮಡಿವಾಳಪ್ಪ ಬಿದರಗಡ್ಡಿ ಮಾತನಾಡಿ, ಅಕ್ಕ ಮಹಾದೇವಿ ವಚನಗಳ ಮೂಲಕ ಬದುಕಿನ ಮೌಲ್ಯ ಪ್ರತಿಪಾದಿಸಿದರು. ಅವರ ವಚನಗಳ ವಿಚಾರಧಾರೆ ಪ್ರಚಾರವಾಗಬೇಕು. ಉತ್ತಮಸಮಾಜ ನಿರ್ಮಾಣಕ್ಕೆ ಅಡಿಪಾಯವಾಗಬೇಕಿದೆ ಎಂದು ಹೇಳಿದರು.
12ನೇ ಶತಮಾನದ ವಚನಕಾರರಲ್ಲಿ ಅಕ್ಕ ಪ್ರಮುಖರು. ಅಧಿಕಾರ, ಸಂಪತ್ತು, ವೈಭವ, ಆಡಂಬರ, ಭೋಗ ಜೀವನವನ್ನು ಸಂಪೂರ್ಣವಾಗಿ ತಿರಸ್ಕರಿಸಿ, ಎಲ್ಲಾ ಬಂಧನಗಳಿಂದ ಬಿಡುಗಡೆ ಪಡೆದು ಸಾಮಾನ್ಯರಲ್ಲಿ ಸಾಮಾನ್ಯಳಂತೆ ಜನ ಜೀವನದಲ್ಲಿ ಬೆರೆತು ಬದುಕಿದರು ಎಂದು ಸ್ಮರಿಸಿದರು. ಈ ವೇಳೆ ಕಟಕೋಳ ವಿರಕ್ತಮಠ ಸಚ್ಚಿದಾನಂದ ಮಹಾಸ್ವಮಿಗಳು ದಿವ್ಯ ಸಾನಿಧ್ಯ ವಹಿಸಿದ್ದು, ಎಮ್. ಬಿ. ವಾಲಿ, ಮಹಾಂತೇಶ ಜಕಾತಿ, ಡಾ. ಶ್ವೇತಾ ಪಟ್ಟಣಶೆಟ್ಟಿ, ಭಾಗ್ಯಜ್ಯೋತಿ ಬಿದರಗಡ್ಡಿ ಶಿವಾನಂದ ಪಟ್ಟಣಶೆಟ್ಟಿ, ರಾಜೇಂದ್ರ ವಾಲಿ, ವಿರೂಪಾಕ್ಷ ಜಕಾತಿ, ಅಶೋಕ ಗಾಣಗಿ, ಬಿ. ಆಯ್. ಚಿನಗುಡಿ, ಎಮ್. ಎಸ್. ಚೆಟ್ಟಿ, ಕುಮಾರ ಹಿರೇಮಠ, ಎಸ್.ಬಿ. ವಾಲಿ, ಉಮಾದೇವಿ ಪೂರ್ವಿಮಠ, ಪ್ರಭಾ ವಾಲಿ, ಜಯಶ್ರೀ ಅನಂತಪೂರ, ಅಶ್ವಿನಿ ಪಟ್ಟಣಶೆಟ್ಟಿ, ದೀಪಾ ಜಕಾತಿ, ಶಿವಲೀಲಾ ದುಗ್ಗಾಣಿ, ಜಯಶ್ರೀ ಕತ್ತಿಶೆಟ್ಟಿ, ಸುರೇಖಾ ಅಂಗಡಿ, ಮಹೇಶ್ವರಿ ರಾಮದುರ್ಗ, ಶಾರದಾ ವಾಲಿ, ಪೂರ್ಣಿಮಾ ಕತ್ತಿಶೆಟ್ಟಿ, ಅಶ್ವಿನಿ ಕತ್ತಿಶೆಟ್ಟಿ, ಉಮಾ ವಾಲಿ ಸೇರಿದಂತೆ ವೀರಶೈವ ಲಿಂಗಾಯತ ಸಮಾಜದ ಗುರು ಹಿರಿಯರು ಹಾಗೂ ಅಕ್ಕನ ಬಳಗದ ಸದಸ್ಯರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 