ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 12ನೇ ರಾಜ್ಯ ಸಮ್ಮೇಳನ
12th State Conference of All India Democratic Women's Organization
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 12ನೇ ರಾಜ್ಯ ಸಮ್ಮೇಳನ
ವಿಜಯಪುರ : ದೇಶದ ಮುಂಚೂಣಿ ಮಹಿಳಾ ಸಂಘಟನೆಯಾಗಿರುವ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆಯ 12 ನೇ ರಾಜ್ಯ ಸಮ್ಮೇಳನ ರಾಯಚೂರು ಜಿಲ್ಲೆಯ ಸಿಂಧನೂರಿನಲ್ಲಿ 30-08-2025 ನಡೆಯುತ್ತಿದೆ.
ಎಐಡಿಯುಡಬ್ಲ್ಯೂ ರಾಷ್ಟ್ರೀಯ ಅಧ್ಯಕ್ಷರಾದ ಪಿ.ಕೆ. ಟೀಚರ್ ಉದ್ಘಾಟಿಸಲಿದ್ದಾರೆ. ಡಾ. ಮೀನಾಕ್ಷಿ ಬಾಳಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.
ಘನತೆಯ ಬದುಕು ನಮ್ಮ ಹಕ್ಕು ಎಂಬ ಘೋಷಣೆಯಡಿಯಲ್ಲಿ ನಡೆಯುತ್ತಿರುವ ಈ ರಾಜ್ಯ ಸಮ್ಮೇಳನವು ಮಹಿಳೆಯರ ವಿರುದ್ಧದ ಎಲ್ಲ ದೌರ್ಜನ್ಯಗಳ ನಿರ್ಮೂಲನೆ ಒತ್ತಾಯಿಸುತ್ತದೆ
ಈ ಸಂದರ್ಭದಲ್ಲಿ ದೌರ್ಜನ್ಯಗಳಿಗೆ ತುತ್ತಾದ ಈ ಮಣ್ಣಿನ ಎಲ್ಲ ಹೆಣ್ಣು ಮಕ್ಕಳಿಗೆ ನ್ಯಾಯಕ್ಕಾಗಿ ಒತ್ತಾಯಿಸುತ್ತ ಸಾಂಕೇತಿಕವಾಗಿ ಬಿಜಾಪುರದಿಂದ ದಾನಮ್ಮ, ಬೆಳ್ತಂಗಡಿ ಯಿಂದ ಪದ್ಮಲತಾ, ವೇದವಲ್ಲಿ, ಯಮುನಾ,ಸೌಜನ್ಯ ಮತ್ತಿತರ ಹತ್ಯೆಗೊಳಗಾಗಿ ಅಸಹಜ ಸಾವಿನ ಹಣೆಪಟ್ಟಿ ಕಟ್ಟಿ ಹೂತು ಹಾಕಿದ ಮಹಿಳೆಯರ ನೆನಪಿನಲ್ಲಿ ಸಂಘರ್ಷದ ಮೂಲಕ ಕೃಷಿ ಭೂಮಿಯನ್ನು ಉಳಿಸಿಕೊಂಡು ಪ್ರಾಮಾಣಿಕ ಹೋರಾಟದಿಂದ ಗಳಿಸುವ ಯಶಸ್ಸಿನ ಸಂಕೇತವಾಗಿ ತಿಡಗುಂದಿ ಗ್ರಾಮದಿಂದ ಹಾಗೂ ಎಲ್ಲ ಕಡೆಯ ಹಿಡಿಮಣ್ಣು ಸಂಘರ್ಷದ ಸಂದೇಶ ಹೊತ್ತು ಸಿಂದನೂರು ತಲುಪಲಿದೆ. ಇಡೀ ರಾಜ್ಯಕ್ಕೆ ತಲುಪುವ ಈ ಸಂದೇಶ ಎಲ್ಲ ರೀತಿಯ ದೌರ್ಜನ್ಯ ಗಳ ವಿರುದ್ಧ ದಣಿವರಿಯದ ಹೋರಾಟ ನಡೆಸಲು ಕರೆ ನೀಡುತ್ತದೆ. ತಿಡಗುಂದಿಯಲ್ಲಿ ರೈತ ಹೋರಾಟ ಸಮಿತಿ ಪ್ರತಿಭಟನೆ ನಡೆಸುತ್ತಿದ್ದು, ಅವರಿಗೆ ನಮ್ಮ ಸಂಘಟನೆಯಿಂದ ಬೆಂಬಲವಿದೆ.
ಈ ಕಾರ್ಯಕ್ರಮಕ್ಕೆ ವಿಜಯಪುರ ಜಿಲ್ಲೆಯ ಜಿಲ್ಲಾಧ್ಯಕ್ಷೆಯಾದ ಅನಸೂಯ ಹಜೇರಿ ಅವರ ನೇತೃತ್ವದಲ್ಲಿ ಪ್ರತಿನಿಧಿಯಾಗಿ ಪಾಲ್ಗೊಳ್ಳಲಿದ್ದಾರೆ. ವಿಜಯಪುರದ ಸುರೇಖಾ ರಜಪೂತ, ಸಂಗೀತಾ ಜೋಗಣ್ಣವರ, ಸುನಂದ ನಾಯಿಕ, ಸುವರ್ಣ ಹಲಗಣಿ ಮುಂತಾದವರು ಪಾಲ್ಗೊಳ್ಳಲಿದ್ದಾರೆ.
ವಂದನೆಗಳೊಂದಿಗೆ,
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 