ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕನ 100ನೇ ವಾರ್ಷಿಕ ಮಹಾಸಭೆ

ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕನ 100ನೇ ವಾರ್ಷಿಕ ಮಹಾಸಭೆ   100th Annual General Meeting of The Bailahongala Urban Co-op Bank

ದಿ ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕನ 100ನೇ ವಾರ್ಷಿಕ ಮಹಾಸಭೆ   

ಬೈಲಹೊಂಗಲ 16:  ದಿ. ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕಿನ 100ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಪಟ್ಟಣದ ಬಿ.ಬಿ. ಗಣಾಚಾರಿ ಕಲ್ಯಾಣ ಮಂಟಪ  ಜರುಗಿತು. 

ಬ್ಯಾಂಕಿನ ಅಧ್ಯಕ್ಷರಾದ ಡಾ. ಬಿ.ಎಚ್‌. ಮೆಟಗುಡ್ಡ ಮಾತನಾಡಿ, 1925ರಿಂದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವ  ದಿ. ಬೈಲಹೊಂಗಲ ಅರ್ಬನ್ ಕೋ-ಆಪ್ ಬ್ಯಾಂಕ ಲಿ.,ಇದು 2024-25ನೇ ಸಾಲಿನಲ್ಲಿ 7 ಕೋಟಿ 30 ಲಕ್ಷ ಒಟ್ಟು ಲಾಭಗಳಿಸಿ ಎಲ್ಲ ಪ್ರಾವೀಜನ್ ಮತ್ತು ಆದಾಯ ತೆರಿಗೆ ಪಾವತಿಸಿದ ನಂತರ ರೂ. 1 ಕೋಟಿ 80 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದರು. ಬ್ಯಾಂಕಿನ ಠೇವು ರೂ. 419.94 ಕೋಟಿ ಸಾಲ-ಮುಂಗಡಗಳು ರೂ. 278.76 ಕೋಟಿಗಳಿಗೆ ತಲುಪಿದೆ  ಶೇರು ಭಂಡವಾಳ ಮತ್ತು ಸ್ವಂತ ನಿಧಿಗಳು  ರೂ. 48.00  ಕೋಟಿ ಮತ್ತು ದುಡಿಯುವ ಬಂಡವಾಳ ರೂ. 476.75  ಕೋಟಿಗಳಾಗಿರುತ್ತದೆ, ನಿವ್ವಳ ಎನ್‌.ಪಿ.ಎ ಶೇ. 0 ಇರುತ್ತದೆ. ಹಾಗೂ ಬ್ಯಾಂಕಿನ ಒಟ್ಟು ವ್ಯವಹಾರ 700 ಕೋಟಿಗೆ ಸಮೀಪಿಸಿರುತ್ತದೆ. ಸಾಲ-ಮುಂಗಡಗಳನ್ನು ನೀಡಲು ಹೆಚ್ಚಿನ ಸಂಪನ್ಮೂಲವನ್ನು ಹೊಂದಿದ್ದು, ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಬ್ಯಾಂಕಿನ ಶರತ್ತುಗಳಿಗೆ ಒಳಪಟ್ಟು ಪ್ರತಿ ಗ್ರಾಂ ಬಂಗಾರಕ್ಕೆ ಗರಿಷ್ಠ ರೂ. 6000/- ಬಂಗಾರ ಆಭರಣಗಳ ಮೇಲೆ ಸಾಲವನ್ನು 9.75ಅ ಬಡ್ಡಿದರಗಳಲ್ಲಿ ಯಾವುದೇ ತರಹದ ಶುಲ್ಕ ಇಲ್ಲದೆ ನೀಡುತ್ತಿವೆ ಎಂದರು.  

ವಾರ್ಷಿಕ ಸರ್ವಸಾಧರಣಾ ಸಭೆಯ ಅಧ್ಯಕ್ಷತೆಯನ್ನು ಡಾ. ಬಿ.ಎಸ್‌. ಮಹಾಂತಶೆಟ್ಟಿ ವಹಿಸಿದ್ದರು. ಸಭೆಯಲ್ಲಿ  ಉಪಾಧ್ಯಕ್ಷರಾದ  ಎಮ್‌.ಆರ್‌. ಬೋಳನ್ನವರ ಹಾಗೂ ನಿರ್ದೇಶಕರಗಳಾದ,  ಎಮ್‌.ಎಮ್‌.ಮೆಟಗುಡ್ಡ,  ಎ.ಎಸ್‌.ಮೆಟಗುಡ್ಡ,  ಎಸ್‌.ಬಿ.ಪತ್ತೆನ್ನವರ,  ಆರ್‌.ಎಮ್‌.ಮೆಟಗುಡ್ಡ, ಬಿ.ವಿ.ಸಾಲಿಮಠ,  ಸಿ.ವಿ.ಹೊಸೂರ, ಎಮ್‌.ಎ.ನಾಯಕ,  ವಿ.ಎಸ್‌.ಮೆಟಗುಡ್ಡ,  ಜಿ.ಸಿ.ಮೆಟಗುಡ್ಡ, ವಿ.ಎಸ್‌.ಬೆಳವಡಿ, ಬಿ.ಬಿ.ಮಡಿವಾಳರ, ಬಿ.ವಾಯ್‌.ಬೆಟಗೇರಿ, ಎ.ಮ್‌.ಮೆಟಗುಡ್ಡ,  ಎಸ್‌.ಬಿ.ಮೆಟಗುಡ್ಡ, ಆರ್‌.ಎಸ್‌.ಬಿಳ್ಳೂರ, ಕೆ.ಎಮ್‌.ಹೊಸೂರ,  ಎಸ್‌.ಜಿ.ಬೂದಯ್ಯನವರಮಠರವರು,  ಎಸ್‌.ಎಸ್‌. ಭಾವಿಹಾಳ ಹಾಗೂ ಎಲ್ಲ ಶಾಖೆಗಳ ಸಲಹಾ ಸಮಿತಿ ಸದಸ್ಯರು, ಬ್ಯಾಂಕಿನ ಮುಖ್ಯಕಾರ್ಯನಿರ್ವಾಹಕರಾದ  ಎಸ್‌.ಬಿ. ಗೀರನವರ ಮಾಜಿ ಶಾಸಕರಾದ  ಜಗದೀಶ ಮೆಟಗುಡ್ಡ, ಖ್ಯಾತ ಉದ್ದೀಮೆದಾರ ವಿಜಯ  ಮೆಟಗುಡ್ಡ, ಬ್ಯಾಂಕಿನ ಎಲ್ಲ ಸದಸ್ಯರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.