10 ಕೋಟಿ ವೆಚ್ಚದ ರಾಜ್ ಕಾಲುವೆ ಕಾಮಗಾರಿ, ಶಿವಣ್ಣನವರ ಗುದ್ದಲಿ ಪೂಜೆ

10 crore Raj canal work, Shivanna's Guddali Puja

10 ಕೋಟಿ ವೆಚ್ಚದ ರಾಜ್ ಕಾಲುವೆ ಕಾಮಗಾರಿ, ಶಿವಣ್ಣನವರ ಗುದ್ದಲಿ ಪೂಜೆ  

ಬ್ಯಾಡಗಿ  11: ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಎಲ್ಲರೂ ಕೈಜೋಡಿಸುವುದರ ಜೊತೆಯಲ್ಲಿ ಗುಣಮಟ್ಟದ ಕಾಮಗಾರಿಗಳು ನಡೆಯುವಂತೆ ನೋಡಿಕೊಳ್ಳಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಜನತೆಗೆ ಸಲಹೆ ನೀಡಿದರು.ಅವರು ಪಟ್ಟಣದಲ್ಲಿ ಮಂಗಳವಾರ 10 ಕೋಟಿ ರೂ.ಗಳ ವೆಚ್ಚದಲ್ಲಿ ರಾಜ ಕಾಲುವೆಯ ಚರಂಡಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಪಟ್ಟಣದ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಅನುದಾನ ನೀಡಬೇಕು ಎಂಬುದು ಬಹುದಿನಗಳ ಬೇಡಿಕೆಯಾಗಿತ್ತು. ಜನತೆಯ ಹಾರೈಕೆಯಿಂದ  ಇಂದು ನಾನು ವಿವಿಧ ಕಾಮಗಾರಿಗಳನ್ನು ಪ್ರಾರಂಭಿಸಿದ್ದೇನೆ ಎಂದರು. ಸ್ಥಳೀಯ ಸಂಸ್ಥೆಗಳು ಹಾಗೂ ಸಾರ್ವಜನಿಕರು ಅಭಿವೃದ್ಧಿ ಕೆಲಸಗಳಿಗೆ ಮುಕ್ತ ಮನಸ್ಸಿನಿಂದ ಸಹಕಾರ ನೀಡಿದರೆ ಮಾತ್ರ ಅಭಿವೃದ್ಧಿ ಕೆಲಸ ಕಾರ್ಯಗಳು ನಡೆಯಲು ಸಾಧ್ಯ, ಪ್ರಸ್ತುತ ದಿನಮಾನದಲ್ಲಿ ಪಟ್ಟಣದಲ್ಲಿ  ರಾಜ ಕಾಲುವೆಯ ಅವಶ್ಯಕತೆ  ಬಹಳ ಅಗತ್ಯವಿದೆ.  

ಸಣ್ಣ ನೀರಾವರಿ  ಇಲಾಖೆಯಿಂದ  ಮಂಜೂರಾಗಿರುವ ಕಾಮಗಾರಿಯುನಿಗದಿತ ಅವಧಿಯೊಳಗೆ ಕಾಮಗಾರಿ ಪೂರ್ಣಗೊಂಡು ಜನರಿಗೆ ಅನುಕೂಲವಾಗಲಿದೆ ಎಂದರು.ಈ ಸಂದರ್ಭದಲ್ಲಿ ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಸ್ಥಾಯಿ ಸಮಿತಿ ಅಧ್ಯಕ್ಷ ಚಂದ್ರಣ್ಣ ಶೆಟ್ಟರ, ಮುಖ್ಯಾಧಿಕಾರಿ ವಿನಯಕುಮಾರ ಹೊಳೆಪ್ಪಗೋಳ, ಇಂಜೀನೀಯರ ರುದ್ರ​‍್ಪ, ಧುರೀಣರಾದ ಬಸಣ್ಣ ಚತ್ರದ, ಫಕ್ಕಿರಮ್ಮ ಚಲವಾದಿ, ಕವಿತಾ ಸೊಪ್ಪಿನಮಠ, ಲಲೀತಾ ಪಾಟೀಲ, ಅಬ್ದುಲ್ ಮುನಾಫ್ ಎರೇಸಿಮಿ, ನಾಗರಾಜ ಆನ್ವೇರಿ, ಪುಟ್ಟನಗೌಡ ಪಾಟೀಲ, ಶಿವಪುತ್ರ​‍್ಪ ಅಗಡಿ, ಸತೀಶ ಪಾಟೀಲ, ರಮೇಶ ಸುತ್ತಕೋಟಿ, ರಾಜೇಸಾಬ ಕಳ್ಯಾಳ, ಶಿವಕುಮಾರ ಪಾಟೀಲ, ಡಿ.ಎಚ್‌. ಬುಡ್ಡನಗೌಡ್ರ, ಗೀರೀಶ ಇಂಡಿಮಠ, ಮಂಜೂರಲಿ ಹಕಿಂ, ಡಾ.ಎ.ಎಂ.ಸೌದಾಗಾರ ಜಾವೀದ ಮುಲ್ಲಾ ಸೇರಿದಂತೆ ಇತರರಿದ್ದರು.