ಕುಕನೂರು ಶಾದಿ ಮಹಲ್ ಕಟ್ಟಡಕ್ಕೆ 1 ಕೋಟಿ ರೂಪಾಯಿ : ಬಸವರಾಜ ರಾಯರೆಡ್ಡಿ
1 crore rupees for the building of Kukanur Shadi Mahal: Basavaraja Rayareddy
ಕುಕನೂರ 08 : ತಾಲ್ಲೂಕಿನ ಮುಸ್ಲಿಂ ರ ಪ್ರಾಮಾಣಿಕತೆಯಿಂದ ಸರ್ಕಾರದ ಹಣ ಸದುಪಯೋಗ ಆಗುತ್ತಿದೆಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ನುಡಿದರು. ಸ್ಥಳೀಯ ಜಾಮಿಯಾ ಮಸೀದಿಯಲ್ಲಿ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ನಾನು ಕಳೆದ ಬಾರಿ ಶಾದಿ ಮಹಲ್ ಕಟ್ಟಡಕ್ಕೆ ಮೊದಲ ಬಾರಿಗೆ 50 ಲಕ್ಷ ರೂಪಾಯಿ, ಹಾಗೂ ಎರಡನೇ ಬಾರಿ ಗೆ 25 ಲಕ್ಷ ರೂಪಾಯಿ ಸರ್ಕಾರದಿಂದ ಮಂಜೂರು ಮಾಡಿಸಿದ್ದೆನು. ಈಗ ಮಸೀದಿ ಕಟ್ಟಡಕ್ಕೆ ನಾನು ಕೊಟ್ಟ ಅನುದಾನಕ್ಕಿಂತಲೂ ನಾಲ್ಕೈದು ಪಟ್ಟು ಹೆಚ್ಚು ಕೆಲಸವಾಗಿದೆ. ಸ್ವತಃ ದುಡ್ಡು ಖರ್ಚು ಮಾಡಿ ಶೃದ್ಧೆಯಿಂದ ಕೆಲಸ ಮಾಡಿದ ನಿಮ್ಮ ನಿಸ್ವಾರ್ಥ ಕಾರ್ಯಕ್ಕೆ ಅಲ್ಹಾ ಮೆಚ್ಚುತ್ತಾನೆ ಎಂದರು.ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಕುಕನೂರು ಮುಸ್ಲಿಂ ಬಾಂಧವರು.ಎಲ್ಲ ಜಾತಿ ಧರ್ಮ ದ ಜನರಲ್ಲೂ ಕೆಟ್ಟವರೂ ಇರುತ್ತಾರೆ, ಒಳ್ಳೆಯವರೂ ಇರುತ್ತಾರೆ ಹಾಗಂತ ಎಲ್ಲಾ ಜಾತಿ ಧರ್ಮ ಕೆಟ್ಟದ್ದು ಅಂತ ಹೇಳುವದಕ್ಕಾಗುವದಿಲ್ಲ.ನಮ್ಮಲ್ಲಿ ಹಿಂದೂ ಮುಸ್ಲಿಂ ಎನ್ನುವ ಯಾವುದೇ ಬೇಧ ಭಾವವಿಲ್ಲ, ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆಯ ಸಂಕೇತವಾಗಿದೆ ಎಂದರು.ಕರ್ನಾಟಕ ಸರ್ಕಾರ ವಕ್ಫ್ ಮಂಡಳಿಗೆ ಹಣ ಕೊಡುತ್ತದೆ, ಅದನ್ನೇ ಜನಪ್ರತಿನಿಧಿಗಳಾದ ನಾವು ಮಸೀದಿ, ಶಾದಿ ಮಹಲ್ ನಂಥ ಜನೋಪಯೋಗಿ ಕಾರ್ಯಕ್ರಮಕ್ಕೆ ಮಂಜೂರು ಮಾಡುತ್ತೇವೆ ಎಂದರು.
ನಮ್ಮ ದೇಶದಲ್ಲಿ 14 ಪರ್ಸೆಂಟ್ ಜನ ಅಲ್ಪಸಂಖ್ಯಾತರು, ಹಾಗೂ ಇನ್ನುಳಿದ 75 ಪರ್ಸೆಂಟ್ ಅಧಿಕ ಜನ ಹಿಂದೂಗಳಿದ್ದಾರೆ ಎಂದರು. 56 ರಾಷ್ಟ್ರಗಳಲ್ಲಿ ಮುಸ್ಲಿಂರಿದ್ದಾರೆ. ಮುಸ್ಲಿಂ ರು ಹರಾಮ್ ಅನ್ನು ಅನಧಿಕೃತ ಎಂತಲೂ, ಹಲಾಲ್ ಎನ್ನುವದನ್ನು ಅಧಿಕೃತ ಎಂತಲೂ ಮತ್ತು ಹರಮ್ ಎಂದರೆ ಸಭ್ಯಸ್ಥ ಎಂತಲೂ ಕರೆಯುತ್ತಾರೆ.ಆದರೆ ಯಾವುದೇ ಧರ್ಮವೂ ಕೂಡ ಕೆಟ್ಟದನ್ನು ಮಾಡಿರಿ ಹಾಗಂತ ಎಲ್ಲಿಯೂ ಹೇಳಿಲ್ಲ.ಖುರಾನ್ ನಲ್ಲಿ ಬಹುಪತ್ನಿತ್ವದ ಬಗ್ಗೆ ಉಲ್ಲೇಖವಿದೆಯಾದರೂ ಅದು ಯಾವ ಸಂದರ್ಭದಲ್ಲಿ ಮದುವೆ ಆಗಬೇಕು ಎನ್ನುವದರ ಕುರಿತು ಸ್ಪಷ್ಟ ಸಂದೇಶವಿದೆ ಎಂದರು.ಅಲ್ಪ ಸಂಖ್ಯಾತರೆಂದರೆ ಮುಸ್ಲಿಂ ಜನಾಂಗದವರು ಮಾತ್ರ ಎಂದು ಬಿಂಬಿಸುತ್ತಿದ್ದಾರೆ. ಜೈನ್, ಸಿಖ್, ಬುದ್ಧಿಜಂ, ಕ್ರೈಸ್ತ್ ರು ಮುಸ್ಲಿಂ ರು ಎಲ್ಲರೂ ಇದ್ದಾರೆ. ಆದರೆ ಮುಸ್ಲಿಂ ಧರ್ಮದ ಬಗ್ಗೆ ಓಟ್ ರಾಜಕಾರಣಕ್ಕಾಗಿ ಕೆಲವು ರಾಜಕಾರಣಿಗಳು ಸುಳ್ಳು ಸುದ್ದಿ ಹಬ್ಬಿಸುತ್ತಾರೆ ಅಂಥವರ ಮಾತನ್ನು ಯಾರೂ ನಂಬಬೇಡಿ ಎಂದರು. ಕುಕನೂರು ಶಾದಿ ಮಹಲ್ ಕಟ್ಟಡಕ್ಕೆ 1 ಕೋಟಿ ರೂಪಾಯಿ, ತಳಕಲ್ ಶಾದಿ ಮಹಲ್ ಕಟ್ಟಡಕ್ಕೆ 1 ಕೋಟಿ ರೂಪಾಯಿ ಸಂಕನೂರ ಶಾದಿ ಮಹಲ್ ಕಟ್ಟಡಕ್ಕೆ 1 ಕೋಟಿ ರೂಪಾಯಿ, ಮುಧೋಳ ಶಾದಿ ಮಹಲ್ ಕಟ್ಟಡಕ್ಕೆ 50 ಲಕ್ಷ ರೂಪಾಯಿ ನೀಡಿ ಈಗಾಗಲೇ ಕಟ್ಟಡವಾಗಿದೆ.
ಇನ್ನೂ ಕುದರಿಮೋತಿ ಶಾದಿ ಮಹಲ್ ಕಟ್ಟಡಕ್ಕೆ ಹಣ ಮಂಜೂರು ಮಾಡಬೇಕಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ಇಲಾಖೆಗೆ 4 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಕುಕನೂರು ಮದೀನಾ ಮಸೀದಿ ಗೆ30 ಲಕ್ಷ ರೂಪಾಯಿ ಮಂಜೂರು ಮಾಡಿಸುವದಾಗಿ ನುಡಿದರು.ವೇದಿಕೆಯ ಮೇಲೆ ಮುಖಂಡರಾದ ಕಾಸೀಮಸಾಬ ತಳಕಲ್,ಅಬ್ದುಲ್ ರಹಮಾನ್ ಸಾಬ ತಳಕಲ್, ಸತ್ಯನಾರಾಯಣ ಹರಪನಹಳ್ಳಿ, ಮಂಜುನಾಥ ಕಡೇಮನಿ, ಚಂದ್ರಶೇಖರಯ್ಯ ಹಿರೇಮಠ, ದಸ್ತಗೀರಸಾಬ ಗದ್ವಾಲ್, ಗೂಡುಸಾಬ ಮಕಾನದಾರ, ದಸ್ತಗೀರಸಾಬ ರಾಜೂರ, ಸಿದ್ದಯ್ಯ ಕಳ್ಳಿಮಠ, ಪಟ್ಟಣ ಪಂಚಾಯಿತಿ ಸದಸ್ಯ ರಹಮಾನ್ ಸಾಬ ಮಕ್ಕಪ್ಪನವರ್,ಶರಣಪ್ಪ ಗಾಂಜಿ, ಶಫೀಸಾಬ ಗುಂಡಿಹಿಂದಲ್, ಜಾಮಿಯಾ ಮಸೀದಿಯ ಸದರ್ ಸಾಬ ರಷೀದ್ ಅಹ್ಮದ್ ಉಮಚಗಿ ಮುಂತಾದವರು ಉಪಸ್ಥಿತರಿದ್ದರು.ಹಾಫೀಜ್ ಸಾಬ್ ಖುರಾನ್ ಶರೀಫ್ ಪಠಿಸಿದರು, ಅದರ ಭಾವಾರ್ಥವನ್ನು ಅಲ್ಲಾವುದ್ದೀನ ಯಮ್ಮಿ ಓದಿ ಹೇಳಿದರು. ಪಟ್ಟಣ ಪಂಚಾಯಿತಿ ಸದಸ್ಯ ರಫೀಸಾಬ ಹಿರೆಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಿಕ್ಷಕರಾದ ಮೆಹಬೂಬ ಸಾಬ ಗುಂಡಿಹಿಂದಲ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು ನಮ್ಮಲ್ಲಿ ಹಿಂದೂ ಮುಸ್ಲಿಂ ಎನ್ನುವ ಯಾವುದೇ ಬೇಧ ಭಾವವಿಲ್ಲ. ಪ್ರಾಮಾಣಿಕತೆಗೆ ಇನ್ನೊಂದು ಹೆಸರೇ ಕುಕನೂರು ಮುಸ್ಲಿಂ ಬಾಂಧವರು. ಎಲ್ಲ ಜಾತಿ ಧರ್ಮ ದ ಜನರಲ್ಲೂ ಕೆಟ್ಟವರೂ ಇರುತ್ತಾರೆ, ಒಳ್ಳೆಯವರೂ ಇರುತ್ತಾರೆ ಹಾಗಂತ ಎಲ್ಲಾ ಜಾತಿ ಧರ್ಮ ಕೆಟ್ಟದ್ದು ಅಂತ ಹೇಳುವದಕ್ಕಾಗುವದಿಲ್ಲ. ನಮ್ಮಲ್ಲಿ ಹಿಂದೂ ಮುಸ್ಲಿಂ ಎನ್ನುವ ಯಾವುದೇ ಬೇಧ ಭಾವವಿಲ್ಲ, ನಾವೆಲ್ಲರೂ ಒಂದೇ ಎನ್ನುವ ಭಾವೈಕ್ಯತೆಯ ಸಂಕೇತವಾಗಿದೆಬಸವರಾಜ ರಾಯರೆಡ್ಡಿಸಿ ಎಂ ಆರ್ಥಿಕ ಸಲಹೆಗಾರರು
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 