ಉಳವಿ ಚೆನ್ನ ಬಸವೇಶ್ವರ ರಥೋತ್ಸವಕ್ಕೆ ಹರಿದು ಬಂದ ಜನಸ್ಥೋಮ

   ಉಳವಿ ಚೆನ್ನ ಬಸವೇಶ್ವರ ರಥೋತ್ಸವಕ್ಕೆ ಹರಿದು ಬಂದ ಜನಸ್ಥೋಮ Crowds flock to the Basaveshwara Chariot Festival in Ulavi Chenna

ಲೋಕದರ್ಶನ ವರದಿ 

  ಉಳವಿ ಚೆನ್ನ ಬಸವೇಶ್ವರ ರಥೋತ್ಸವಕ್ಕೆ ಹರಿದು ಬಂದ ಜನಸ್ಥೋಮ 

     ದಾಂಡೇಲಿ  04: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಚೆನ್ನ ಬಸವೇಶ್ವರ ರಥೋತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂತು. ಉತ್ತರ ಕರ್ನಾಟಕದಲ್ಲಿ ಅತೀ ದೊಡ್ಡ ಮಟ್ಟ-್ದಲ್ಲಿ ನಡೆಯುವ ಜಾತ್ರೆಗೆ ಚಕ್ಕಡಿ, ಟ್ಯ್ರಾಕ್ಟರ್ ಹಾಗೂ ಇನ್ನಿತರ ವಾಹನಗಳಲ್ಲಿ ಲಕ್ಷಾಂತರ ಭಕ್ತರು ಜಾತ್ರೆಗೆ ಆಗಮಿಸಿದ್ದರು.  

ಇಂದು ಭರತ ಹುಣ್ನಿಮೆಯ ಮಘಾ ನಕ್ಷತ್ರದ ಪಾಡ್ಯದ ಶುಭಗಳಿಗೆಯಲ್ಲಿ ಮಧ್ಯಾಹ್ನ 4 ಘಂಟೆಗೆ ನಡೆದ ರಥೋತ್ಸವಕ್ಕೆ ಲಕ್ಷಾಂತರ ಜನರು ಸಾಕ್ಷಿಯಾದರು. ಭಕ್ತರ ಜಯಘೋಷಗಳು ಮೊಳಗಿದವು. ಜನವರಿ-25 ರಂದು ಪ್ರಾರಂಭಗೊಂಡ ಜಾತ್ರೆ ಭರತ ಹುಣ್ನೀಮೆ ದಿನವಾದ ಇಂದು ರತೋತ್ಸವ ನಡೆದರೂ ಇನ್ನು 2 ದಿನಗಳ ಕಾಲ ಜಾತ್ರೆ ನಡೆಯಲಿದ್ದು ಧಾರ್ಮಿಕ ಕಾರ್ಯ, ವಿಧಿ ವಿಧಾನಗಳು ನಡೆಯಲಿದೆ. ನಂತರ ಜಾತ್ರೆ ಸಂಪನ್ನಗೊಳ್ಳಲಿದೆ. ರಥಬೀದಿಯಲ್ಲಿ ತೇರನ್ನು ಭಕ್ತರು ಜಯಘೋಷದೊಂದಿಗೆ ಎಳೆಯುವದನ್ನು ಭಕ್ರತು ಕಣ್ಣತುಂಬಿಕೊಂಡು ಪ್ರಸನ್ನರಾಗಿ ಪೂಜೆ ಪುನಸ್ಕಾರ ಹರಕೆಗಳನ್ನು ಅರ​‍್ಿಸುತ್ತಿದ್ದ ದ್ರಶ್ಯ ಸಾಮನ್ಯವಾಗಿತ್ತು ಜಾತ್ರೆಗೆ ಸಾಮಾನ್ಯವಾಗಿ ವಿಜಯಪುರ,ಬಾಗಲಕೋಟೆ, ನವಲಗುಂದ ಜಮಖಂಡಿ, ಹಾವೇರಿ ಬೆಳಗಾವಿ, ಕೊಪ್ಪಳ, ಹುಬ್ಬಳಿ ಧಾರವಾಡ, ಗೋವಾ ಮಹಾರಾಷ್ಟ್ರಗಳಿಂದಲೂ ಭಕ್ತರು ಆಗಮಿಸಿ ಪೂಜೆ ಸಲ್ಲಿಸಿದರು.  

ಈ ಬಾರಿ ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಜಾತ್ರಾ ಮೂಲಭೂತಸೌಕರ್ಯಗಳಿಗೆ ಹೆಚ್ಚಿನ ಒತ್ತು ನೀಡಿದ್ದು ಗಮನ ಸೆಳೆಯಿತು. ಟ್ಯ್ರಾಫಿಕ್ ಸಮಸ್ಯೆ ಕಿರಿಕಿರಿನ್ನುಂಟು ಮಾಡಿದರೂ ಡಿ.ವಾಯ್‌.ಎಸ್‌.ಪಿ ಶಿವಾನಂದ ಮದರಕಂಡಿ ಸ್ಥಳದಲ್ಲೇ ಉಪಸ್ಥಿತರಿದ್ದು ಮಾರ್ಗದರ್ಶನ ನೀಡಿ ಪೋಲಿಸರು ಸಂಯಮದಿಂದ ವರ್ತಿಸಿ, ನಿಯಂತ್ರಿಸಿ ಶಾಂತಿ ಸುವ್ಯವಸ್ಥೆ ಕಾಪಾಡಿದರು.  

ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಉಳವಿ ಕಮೀಟಿ ಅಧ್ಯಕ್ಷ ಸಂಜಯ ಕಿತ್ತೂರು, ಪ್ರಕಾಶ ಕಿತ್ತೂರು, ಉಳವಿ ಗ್ರಾಮ ಪಂಚಾಯತ ಅಧ್ಯಕ್ಷ ಮಂಜುನಾಥ ಮೊಕಾಶಿ, ವಿರೇಶ ಕಂಬಳಿ, ಅಶ್ವಿನ್ ಕೊತಂಬರಿ ಪ್ರಧಾನ ಅರ್ಚಕ ಕಲ್ಟಟ ಶಾಸ್ತ್ರಿ ಮತ್ತು ಪದಾಧಿಕಾರಿಗಳು ಭಕ್ತಾದಿಗಳಿಗೆ ಉತ್ತಮ ವ್ಯವಸ್ಥೆ ಕಲ್ಪಿಸಿದ್ದರು.