ಮಾ.27ರಂದು ಥಿಯೇಟರ್ ನಲ್ಲಿ ಫೀಲ್-ಗುಡ್ ಚಿತ್ರ ’ಯಾವ ಮೋಹನ ಮುರಳಿ ಕರೆಯಿತು’
ಪ್ರಕೃತಿ ಪ್ರೊಡಕ್ಷನ್ ಬ್ಯಾನರ್‌ನಡಿ ಶರಣಪ್ಪ ಗೌರಮ್ಮ ನಿರ್ಮಾಣ ಮಾಡಿರುವ ’ಯಾವ ಮೋಹನ ಮುರಳಿ ಕರೆಯಿತು’ ಸಿನಿಮಾ ಇಂದು (ಮಾ.27) ರಾಜ್ಯಾದ್ಯಂತ ವಿಜಯ್ ಸಿನಿಮಾಸ್ ಮೂಲಕ ಬಿಡುಗಡೆ ಆಗುತ್ತಿದೆ.
ಈಗಾಗಲೇ ಟ್ರೇಲರ್ ಮುಖೇನ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿರುವ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ ವಿಶ್ವಾಸ್ ಕೃಷ್ಣ. ಇದು ವೀಲ್‌ಚೇರ್‌ನಲ್ಲಿರುವ ಹುಡುಗಿ ಮತ್ತು ಶ್ವಾನದ ನಡುವಿನ ಭಾವುಕ ಬಂಧವನ್ನು ಸಾರುವ ’ಫೀಲ್-ಗುಡ್’ ಚಿತ್ರವಾಗಿದ್ದು, ಪ್ರಕೃತಿ, ಮಾಧವ ಹಾಗೂ ಸ್ವಪ್ನ ಶೆಟ್ಟಿಗಾರ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಸಿನಿಮಾ ಕುರಿತು ಮಾಹಿತಿ ನೀಡಿರುವ ನಿರ್ದೇಶಕರು, ’ನನ್ನ ನಿರ್ದೇಶನದ ಮೊದಲ ಚಿತ್ರವಿದು. ಇದೊಂದು ಭಾವನಾತ್ಮಕ ಪಯಣದ ಕಥೆ. ಶ್ವಾನ ಪ್ರೇಮಿಗಳಿಗೆ ಬಹಳ ಇಷ್ಟವಾಗಲಿದೆ. ಚಿತ್ರದ ಮುಖ್ಯ ಪಾತ್ರದಲ್ಲಿ ನಿರ್ಮಾಪಕರ ಮಗಳು ಪ್ರಕೃತಿ ಅಭಿನಯಿಸಿದ್ದಾರೆ. ತಂದೆಯ ಪಾತ್ರದಲ್ಲಿ ಮಾಧವ, ತಾಯಿಯಾಗಿ ಸ್ವಪ್ನ ಶೆಟ್ಟಿಗಾರ ಬಣ್ಣಹಚ್ಚಿದ್ದಾರೆ. ರಾಣಾ ಹಾಗೂ ರಾಕಿ ಎಂಬ ಶ್ವಾನ ಸಿನಿಮಾದಲ್ಲಿ ಕಾಣಿಸಿಕೊಂಡಿವೆ’ ಎಂದರು.
ರಷ್ಯಾದಲ್ಲಿ ನಡೆದ ಇಂಟರ್ ನ್ಯಾಶನಲ್ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಮೆಡಲ್ ಪಡೆದಿರುವ ಶರಣಪ್ಪ ಅವರು ವೃತ್ತಿಯಲ್ಲಿ ವಕೀಲರು. ರಿಯಲ್ ಎಸ್ಟೇಟ್ ಉದ್ಯಮಿಗಳು ಆಗಿದ್ದು, ಈಗ ಚಿತ್ರ ನಿರ್ಮಾಣ ಮಾಡಿದ್ದಾರೆ. ’ಕಥೆ ಚನ್ನಾಗಿ ಇರುವುದರಿಂದ ಈ ಚಿತ್ರವನ್ನು ಮಗಳಿಗಾಗಿ ನಿರ್ಮಿಸಿದ್ದೇನೆ. ಈ ಸಿನಿಮಾ ಲೇಟ್ ಆಗಲು ಕಾರಣ, 10 ದಿನ ಶೂಟಿಂಗ್ ಬಾಕಿ ಇರುವಾಗ ಚಿತ್ರದಲ್ಲಿ ನಟಿಸಿರುವ ರಾಕಿ ಎಂಬ ನಾಯಿ ಆಕಸ್ಮಿಕವಾಗಿ ನಡೆದ ಆಕ್ಸಿಡೆಂಟ್ ನಲ್ಲಿ ನಿಧನವಾಯಿತು. ಚಿಕ್ಕವನಾಗಿದ್ದ ರಾಣಾ ನಾಯಿ ದೊಡ್ಡದು ಆಗುವ ವರೇಗೆ ಕಾದು ಕ್ಲೈಮ್ಯಾಕ್ಸ್ ಶೂಟ್ ಮಾಡಿದ್ವಿ ಹಾಗಾಗಿ ಸಿನಿಮಾ ಲೇಟ್ ಆಗಿದೆ. ಸೆಂಟಿಮೆಂಟ್, ಸಸ್ಪೆನ್ಸ್, ಥ್ರಿಲ್ಲರ್ ಹಾಗೂ ಫ್ಯಾಮಿಲಿ ಕಥೆಯ ಸಿನಿಮಾವಿದು.
ಮುಂದಿನ ದಿನಗಳಲ್ಲಿ ಕಿಕ್ ಬಾಕ್ಸಿಂಗ್ ಕುರಿತಾದ ಸಿನಿಮಾ ಮಾಡುವ ಪ್ಲ್ಯಾನ್ ಇದ್ದು, ಹೊಸಬರಿಗೆ ಸಿನಿಮಾ ಮಾಡಲು ರೆಡಿಯಾಗಿದ್ದೇನೆ. ಈಗಾಗಲೇ ಇನ್ನೆರಡು ಸಿನಿಮಾಗಳ ಕೆಲಸ ಮುಗಿದಿದ್ದು ಸದ್ಯದಲ್ಲೇ ಆಪ್ ಡೇಟ್ ಕೊಡುತ್ತೇನೆ’ ಎಂದು ಹೇಳಿದರು. ಚಿತ್ರಕ್ಕೆ ಅನಿಲ್ ಸಿ.ಜೆ ಸಂಗೀತ ಹಾಗೂ ಕೀರ್ತನ್ ಪೂಜಾರಿ ಛಾಯಾಗ್ರಹಣವಿದೆ.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಜೋರಾದ ಮುಸುಕಿನ ಗುದ್ದಾಟ: ಕೆಪಿಸಿಸಿ ಅಧ್ಯಕ್ಷರ ಮುಂದೆ ಲಾಬಿ
ಒಬ್ಬರ ಆಸ್ತಿ ಇನ್ನೊಬ್ಬರಿಗೆ ಮಾರಾಟ: ನೋಂದಣಿ ಕಚೇರಿಯಲ್ಲಿ ನಕಲಿ ಮಾಲೀಕನಾಗಿ ವಂಚಿಸಿದ ಆರೋಪಿ ಬಂಧನ
ಮಾಡಿಗುಂಜಿ ಗ್ರಾಮದಲ್ಲಿ ಚಿರತೆ ಪ್ರತ್ಯಕ್ಷ; ಗ್ರಾಮಸ್ಥರಲ್ಲಿ ಆತಂಕ, ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನ್ ಅಳವಡಿಕೆ
ಗಾಂಜಾ ಮಾರಾಟ : ಕೊಲೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಆರೋಪಿತನ ಬಂಧನ
ಪತ್ರಕರ್ತರ ಸೋಗಿನಲ್ಲಿ ವ್ಯಕ್ತಿಯಿಂದ 1.60 ಲಕ್ಷ ಹಣ ಸುಲಿಗೆ: ನಾಲ್ವರು ಯೂಟ್ಯೂಬರ್ಗಳ ಬಂಧನ
ಸದಲಗಾ ಪೊಲೀಸರ ಕಾರ್ಯಾಚರಣೆ: ಅಂತರರಾಜ್ಯ ಬೈಕ್ ಕಳ್ಳರ ಬಂಧನ, 5 ದ್ವಿಚಕ್ರವಾಹನಗಳ ವಶ 