ಬಗರನಾಳದಲ್ಲಿ ಇಂದು ‘ಗ್ರಾಮ ಸಂಸ್ಕೃತಿ ಉತ್ಸವ’

ಬಗರನಾಳದಲ್ಲಿ  ಇಂದು ‘ಗ್ರಾಮ ಸಂಸ್ಕೃತಿ ಉತ್ಸವ’  'Village Culture Festival' at Bagaranala Today

ಲೋಕದರ್ಶನ ವರದಿ 

500ಕ್ಕೂ ಅಧಿಕ ಬೈಕ್ಗಳ ರ್ಯಾಲಿ; 101 ಎತ್ತಿನ ಚಕ್ಕಡಿಗಳ ಮೆರವಣಿಗೆ  

ಬಗರನಾಳ: ನಮ್ಮ ಮಣ್ಣು, ಕೃಷಿ, ಭಕ್ತಿ ಹಾಗೂ ಗ್ರಾಮೀಣ ಸಂಸ್ಕೃತಿಯ ವೈಭವವನ್ನು ಪರಿಚಯಿಸುವ ಉದ್ದೇಶದಿಂದ ‘ಗ್ರಾಮ ಸಂಸ್ಕೃತಿ ಉತ್ಸವ’ವನ್ನು ಸೆ. 4ರಂದು ಬಗರನಾಳ ಗ್ರಾಮದಲ್ಲಿ ಅದ್ದೂರಿಯಾಗಿ ಆಯೋಜಿಸಲಾಗಿದೆ.  

ಕೃಷಿ ಋಷಿ, ಹಿಂದೂ ಹೃದಯ ಸಾಮ್ರಾಟ್ ಹಾಗೂ ರಾಷ್ಟ್ರೀಯ ಸಂತ ಶ್ರೀ ಸಿದ್ದಗಿರಿ ಕನ್ನೇರಿ ಮಠದ ಪರಮಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಉತ್ಸವ ನಡೆಯಲಿದೆ.

ಹುಣಶ್ಯಾಳ ಪಿ.ಜಿ.ಯ ಶ್ರೀ ಸಿದ್ದಲಿಂಗ ಕೈವಲ್ಯಾಶ್ರಮದ ಪರಮಪೂಜ್ಯ ಶ್ರೀ ನಿಜಗುಣದೇವ ಮಹಾಸ್ವಾಮಿಗಳು ಅಧ್ಯಕ್ಷತೆ ವಹಿಸಲಿದ್ದಾರೆ.  ಅರಭಾವಿ ಕ್ಷೇತ್ರದ ಶಾಸಕ ಬಾಲಚಂದ್ರ ಲ. ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.  

500ಕ್ಕೂ ಅಧಿಕ ಬೈಕ್ಗಳ ರ್ಯಾಲಿ: ವಡೇರಹಟ್ಟಿ ಗ್ರಾಮದ ಕ್ರಾಂತೀವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಗೆ ಗೌರವ ಸಲ್ಲಿಸಿದ ಬಳಿಕ 500ಕ್ಕೂ ಅಧಿಕ ದ್ವಿಚಕ್ರ ವಾಹನಗಳ ಭವ್ಯ ರ್ಯಾಲಿ ಬಗರನಾಳದತ್ತ ಸಾಗಲಿದೆ.  

ಇದೇ ವೇಳೆ ಶ್ರೀ ಬಾಕುಬಾಯಿ ದೇವಸ್ಥಾನದಿಂದ ಶ್ರೀ ರಾಮಲಿಂಗೇಶ್ವರ ದೇವಸ್ಥಾನದವರೆಗೆ 101 ಎತ್ತಿನ ಚಕ್ಕಡಿಗಳ ಮೆರವಣಿಗೆ ನಡೆಯಲಿದೆ. ಕುಂಭ-ಕಳಶ, ಆರತಿ, ಮಹಿಳೆಯರ ಡೊಳ್ಳು ಕುಣಿತ, ಕರಡಿ ಮಜಲು, ಭಜನಾ ತಂಡಗಳು ಹಾಗೂ ವಿವಿಧ ಸಮುದಾಯಗಳ ಗುರುಗಳ ಭಾವಚಿತ್ರಗಳು ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿವೆ.  

ಗ್ರಾಮೀಣ ಬದುಕಿನ ಅನಾವರಣ: ಶ್ರೀ ರಾಮಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಒನಕೆ, ಹಳೆಯ ಕೃಷಿ ಪರಿಕರಗಳು, ಸಾಂಪ್ರದಾಯಿಕ ಕುಲಕಸುಬುಗಳು ಹಾಗೂ ಹಿಂದಿನ ಕಾಲದ ಗ್ರಾಮೀಣ ಬದುಕಿನ ಚಿತ್ರಣವನ್ನು ವಿದ್ಯಾರ್ಥಿಗಳು ಪ್ರದರ್ಶಿಸಲಿದ್ದಾರೆ. ಕೃಷಿ ಪರಂಪರೆ, ಗ್ರಾಮೀಣ ಜೀವನಶೈಲಿ ಮತ್ತು ಸಾಂಪ್ರದಾಯಿಕ ಕಲೆ-ಕಸುಬುಗಳನ್ನು ಪರಿಚಯಿಸುವುದು ಇದರ ಉದ್ದೇಶವಾಗಿದೆ.  

ಉತ್ಸವದ ಅಂಗವಾಗಿ ಶ್ರೀ ರಾಮಲಿಂಗೇಶ್ವರ ದೇವರ ದರ್ಶನ, ಪೂಜೆ ಹಾಗೂ ಪೂಜ್ಯರ ಆಶೀರ್ವಚನ ಕಾರ್ಯಕ್ರಮವೂ ನಡೆಯಲಿದೆ.  ‘ನಮ್ಮ ್ಕ್ಲಾ್ದಾಹಿ್ಕ್ಲ್ಕೂ ಹೆಮ್ಮೆ, ನಮ್ಮ ್ನ್ಟ್ತೂಹಿ್ಕ್ಲ್ಕೂ ಬದುಕು, ನಮ್ಮ ್ಠದ್ಠ್ಲಿ್ನೂ್ತಿಹಿ್ಕ್ಲ್ಕೂ ಗುರುತು’ ಎಂಬ ಸಂದೇಶ ಸಾರುವ ಉತ್ಸವಕ್ಕೆ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಶ್ರೀ ರಾಮಲಿಂಗೇಶ್ವರ ಪ್ರವಚನ ಸಮಿತಿ ಮನವಿ ಮಾಡಿದೆ.