ಮಕರ ಸಂಕ್ರಾಂತಿಗೆ ‘ಉತ್ಸವ’ಸಜ್ಜು
'Utsava' gear for Makar Sankranti
ಶಿಗ್ಗಾಂವ 14 : ತಾಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್ ಸಂಕ್ರಾಂತಿ ಹಬ್ಬಕ್ಕೆ ಪ್ರವಾಸಿಗರನ್ನು ಆಹ್ವಾನಿಸಲು ಸಜ್ಜಾಗಿದೆ. ಸಂಕ್ರಾಂತಿ ಎಂದರೆ ಉತ್ತರಾಯಣ ಆರಂಭ.ಉತ್ತರಾಯಣ ಪರ್ವ ಕಾಲದಲ್ಲಿ ನದಿಗಳಲ್ಲಿ ಸ್ನಾನ ಮಾಡಿದರೆ ಪುಣ್ಯ ಪ್ರಾಪ್ತಿ ಆಗುತ್ತದೆ ಎಂಬುದು ವಾಡಿಕೆ.ಇದನ್ನು ಕರಿ ಸ್ನಾನ ಎಂದು ಕರೆಯುತ್ತಾರೆ. ‘ಎಳ್ಳು ಬೆಲ್ಲ ತೊಗೊಂಡು,ಒಳ್ಳೋಳ್ಳೆ ಮಾತಾಡೋಣ’ಎಂಬುದು ಈ ಹಬ್ಬದ ಅಪೂರ್ವವಾದ ಸಂದೇಶ.
ಈ ಹಬ್ಬಕ್ಕೆಂದೆ ಎಳ್ಳು ಬಳಸಿ ಐದು ತರಹದ ಖಾದ್ಯಗಳನ್ನು ಮನೆಯ ಹೆಂಗಳೆಯರು ತಯಾರಿಸಿರುತ್ತಾರೆ.ಹಬ್ಬದ ದಿನ ಬೆಳಗಿನ ಜಾವ ಬುತ್ತಿ ಗಂಟುಗಳೊಂದಿಗೆ ನದಿ ಸ್ನಾನಕ್ಕೆ ಹೊರಟು ಹಿಂದಿರುಗಿ ಬರುವಾಗ ಅನುಕೂಲವಿದ್ದವರೂ ತಮ್ಮ ಹೊಲಗಳು,ತೋಟಗಳಿಳು,ದೇವಸ್ಥಾನಗಳಿಗೆ ಹೋದರೆ, ಉಳಿದವರು ಹತ್ತಿರದ ಪ್ರವಾಸಿ ಕೇಂದ್ರಗಳಿಗೆ ಭೇಟಿ ನೀಡಿ ಸಹ ಭೋಜನದ ಸವಿಯೊಂದಿಗೆ ಸಂಭ್ರಮದಿಂದ ಹಬ್ಬ ಆಚರಿಸುತ್ತಾರೆ.
ರಾಕ್ ಗಾರ್ಡನ್ ಲೋಕಾರೆ್ಣಗೊಂಡಾಗಿನಿಂದ ಸಂಕ್ರಾಂತಿ ಹಬ್ಬ ಆಚರಣೆಗೆ ಪ್ರಶಸ್ತವಾದ ಸ್ಥಳ ಎಂದು ಗುರುತಿಸಲ್ಪಟ್ಟಿದೆ.ಹೀಗಾಗಿ ಸುತ್ತಮುತ್ತಲಿನ ಗ್ರಾಮಗಳಿಂದ,ನಾನಾ ಜಿಲ್ಲೆಗಳಿಂದ ಪ್ರವಾಸಿಗರು ಇಲ್ಲಿಗೆ ಮನೆಮಂದಿ,ಸ್ನೇಹಿತರು,ಸಂಬಂಧಿಕರೊಂದಿಗೆ ಆಗಮಿಸಿ ಹಬ್ಬವನ್ನು ಸ್ಮರಣೀಯಗೊಳಿಸಿ ಕೊಳ್ಳುತ್ತಾರೆ.
ಎಲ್ಲ ಮೂಲಸೌಲಭ್ಯಗಳೊಂದಿಗೆ,ವಿಶಾಲವಾದ ಹಚ್ಚು ಹಸರಿನ ಪ್ರದೇಶದಲ್ಲಿ ಉತ್ಸವ ರಾಕ್ ಗಾರ್ಡನ್ ಮೈತಳೆದಿರುವುದರಿಂದ ಪ್ರವಾಸಿಗರನ್ನು ತುಂಬಾ ಆಕರ್ಷಿಸುತ್ತದೆ. ಸಂಕ್ರಾಂತಿ ಹಬ್ಬದ ಅಂಗವಾಗಿ ಗಾರ್ಡನ್‌ನಲ್ಲಿರುವ ಶ್ರೀ ನಾಗದೇವರ ದೇವಸ್ಥಾನದಲ್ಲಿ ವಿಶೇಷ ಪೂಜೆ,ಖಣದಲ್ಲಿ ಜೋಡೆತ್ತುಗಳ ಜತೆಗೆ ರಾಶಿ ಪೂಜೆ ನಡೆಯುತ್ತದೆ. ಬನ್ನಿ,ಸಂಕ್ರಾಂತಿ ಹಬ್ಬ ಆಚರಣೆಯ ದ್ರಶ್ಯಗಳನ್ನು ಕಣ್ತುಂಬಿ ಕೊಳ್ಳಿ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 