‘ಹಳೆ ತಲೆಮಾರಿನವರು ನಿವೃತ್ತಿಯಾಗಿ ಹೊಸಬರು ಅಧಿಕಾರ ವಹಿಸಿಕೊಳ್ಳಲ್ಲಿ’
'The older generation will retire and new ones will take over'
ನಾಗ್ಪುರ: ‘ಹೊಸ ಪೀಳಿಗೆಯವರು ಅಧಿಕಾರ ವಹಿಸಿಕೊಳ್ಳಬೇಕು. ಎಲ್ಲವೂ ಸುಗಮವಾಗಿ ಸಾಗುವ ಹಂತದಲ್ಲಿ ಹಳೆ ತಲೆಮಾರಿನವರು ನಿವೃತ್ತಿಯಾಗಬೇಕು’ ಎಂದು ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ವಿದರ್ಭ–ಖಸ್ಡರ್ ಔದ್ಯೋಕ್ ಮಹೋತ್ಸವ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಅವರು, ‘ಹಂತ ಹಂತವಾಗಿ ತಲೆಮಾರುಗಳು ಬದಲಾಗಬೇಕು. ನಾವೂ ನಿವೃತ್ತಿ ಪಡೆದು, ಹೊಸ ತಲೆಮಾರಿಗೆ ಜಾಗ ಮಾಡಿಕೊಡಬೇಕು. ಎಲ್ಲವೂ ಸುಗಮವಾಗಿ ಸಾಗುವ ಹಂತದಲ್ಲಿ ನಾವು ಅಲ್ಲಿಂದ ಹೊರಬಂದು, ಹೊಸತೇನಾದರೂ ಮಾಡಬೇಕು’ ಎಂದು ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ಫೆ. 6ರಿಂದ 8ರವರೆಗೆ ನಡೆಯಲಿರುವ ವಿದರ್ಭ ಎಕ್ಸ್ಪೊಗೆ ಸಂಬಂಧಿಸಿದಂತೆ ಗಡ್ಕರಿ ಮಾತನಾಡಿದ್ದಾರೆ. ಇದನ್ನು ಆಯೋಜಿಸುತ್ತಿರುವ ಕೈಗಾರಿಕಾ ಅಭಿವೃದ್ಧಿ ಒಕ್ಕೂಟ(AID)ದ
ಮುಖ್ಯ ಮಾರ್ಗದರ್ಶಕರಾಗಿ ಗಡ್ಕರಿ ಕೆಲಸ ಮಾಡುತ್ತಿದ್ದಾರೆ.
‘ವಿದರ್ಭ ಪ್ರಾಂತ್ಯದಲ್ಲಿ ಬಹಳಷ್ಟು ಉತ್ತಮ ಕೈಗಾರಿಕೋದ್ಯಮಿಗಳು ಇದ್ದಾರೆ. ಈ ಮೂರು ದಿನಗಳ ಮೇಳದಲ್ಲಿ ವಿದರ್ಭವನ್ನು ದೇಶದ ಪ್ರಮುಖ ಕೈಗಾರಿಕಾ ಕ್ಷೇತ್ರವನ್ನಾಗಿ ಮಾಡುವ ಉದ್ದೇಶ ಹೊಂದಲಾಗಿದೆ. ಕೃಷಿ ಆಧಾರಿತ ಕೈಗಾರಿಕೆಗಳು ಮತ್ತು ಸೇವಾ ವಲಯದ ಉದ್ಯಮಗಳು ಯಾವುದೇ ಪ್ರಾಂತ್ಯದ ಅಭಿವೃದ್ಧಿಗೆ ಪೂರಕ ಕ್ಷೇತ್ರಗಳು’ ಎಂದು ಗಡ್ಕರಿ ಹೇಳಿದ್ದಾರೆ.
ವಿದರ್ಭ ಎಕ್ಸ್ಪೊನಲ್ಲಿ ಜವಳಿ, ಪ್ಲಾಸ್ಟಿಕ್, ಖನಿಜ, ಕಲ್ಲಿದ್ದಲ್ಲು, ವಿಮಾನಯಾನ, ಸರಕು ಸಾಗಣೆ, ಐಟಿ, ಆರೋಗ್ಯ ಕ್ಷೇತ್ರ, ಔಷಧ ಕ್ಷೇತ್ರ, ರಕ್ಷಣೆ, ರಿಯಲ್ ಎಸ್ಟೇಟ್, ನವೀಕರಣ ಇಂಧನ ಮತ್ತು ಸ್ಟಾರ್ಟ್ಅಪ್ಗಳು ಸೇರಿವೆ.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 