‘ಯುವಕರ ಸಮರಾ್ಣ ಭಾವವೇ ವಿಕಸಿತ ಭಾರತದ ಬಹುದೊಡ್ಡ ಶಕ್ತಿ’
'The fighting spirit of the youth is the greatest strength of a developed India'
ನವದೆಹಲಿ: ದೇಶದ ಯುವಜನರ ಸಮರಾ್ಣ ಭಾವವೇ ’ವಿಕಸಿತ ಭಾರತ’ದ ಅತಿದೊಡ್ಡ ಶಕ್ತಿ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ’ಮನದ ಮಾತು’ (ಮನ್ ಕಿ ಬಾತ್) ಮಾಸಿಕ ರೆಡಿಯೊ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಬಾಹ್ಯಾಕಾಶದಿಂದ ಕೃಷಿ ಕ್ಷೇತ್ರದವರೆಗೆ ನವೆಂಬರ್ ತಿಂಗಳಲ್ಲಿ ನಡೆದ ಮಹತ್ವದ ಬೆಳವಣಿಗೆಗಳನ್ನು ಉಲ್ಲೇಖಿಸಿದ್ದಾರೆ.
’ಕಳೆದವಾರವಷ್ಟೇ ಉದ್ಘಾಟನೆಯಾಗಿರುವ ’ಸ್ಕೈರೂಟ್’ ಸ್ಟಾರ್ಟಅಪ್ ಸಂಸ್ಥೆಯ ಇನ್ಫಿನಿಟಿ ಕ್ಯಾಂಪಸ್ ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಉತ್ತೇಜನ ನೀಡಿದೆ. ಇದು ಭಾರತದ ಹೊಸ ಮಾದರಿಯ ಆಲೋಚನೆ, ಅನ್ವೇಷಣೆ ಮತ್ತು ಯುವ ಶಕ್ತಿಯ ಪ್ರತಿರೂಪವಾಗಿದೆ’ ಎಂದು ಹೇಳಿದ್ದಾರೆ.
ಇದು ಮೋದಿ ಅವರು ನಡೆಸಿಕೊಟ್ಟ 128ನೇ ’ಮನದ ಮಾತು’ ಕಾರ್ಯಕ್ರಮವಾಗಿದ್ದು, ಇಸ್ರೋ ಇತ್ತೀಚೆಗೆ ಆಯೋಜಿಸಿದ್ದ ವಿಶೇಷ ಡ್ರೋನ್ ಸ್ಪರ್ಧೆಗೆ ಸಂಬಂಧಿಸಿದಂತೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ವಿಡಿಯೊ ಕುರಿತಾಗಿಯೂ ಪ್ರಸ್ತಾಪಿಸಿದ್ದಾರೆ.
’ದೇಶದ ಯುವಕರು, ಅದರಲ್ಲೂ ಹ್ಪ್ಲೂಹಿಹ್ತಿ ಸಮುದಾಯ ಮಂಗಳ ಗ್ರಹವನ್ನು ಹೋಲುವ ಸನ್ನಿವೇಶದಲ್ಲಿ ಡ್ರೋನ್ಗಳನ್ನು ಹಾರಿಸಲು ಪ್ರಯತ್ನಿಸಿರುವುದು ಆ ವಿಡಿಯೊದಲ್ಲಿದೆ’ ಎಂದಿರುವ ಮೋದಿ, ಆರಂಭದಲ್ಲಿ ವೈಫಲ್ಯ ಅನುಭವಿಸಿದರೂ ಯುವಕರು ಪ್ರಯತ್ನ ಮುಂದುವರಿಸಿ, ಯಶಸ್ಸು ಸಾಧಿಸಿದ್ದಾರೆ ಎಂದು ಶ್ಲಾಘಿಸಿದ್ದಾರೆ.
ಯೋಜನೆ ವಿಫಲವಾದಾಗ ಇಸ್ರೊ ವಿಜ್ಞಾನಿಗಳೂ ಬೇಸರಗೊಂಡಿದ್ದರು. ಆದಾದ ನಂತರ ಯಶಸ್ಸು ಸಾಧಿಸಿದ್ದರು. ಆಗ ವಿಜ್ಞಾನಿಗಳ ಕಣ್ಣಲ್ಲಿ ಕಂಡಂತಹ ಹೊಳಪನ್ನು, ಡ್ರೋನ್ ಹಾರಿಸುವಲ್ಲಿ ಯಶಸ್ವಿಯಾದ ಯುವಕರ ಕಣ್ಣಲ್ಲಿಯೂ ಕಾಣಬಹುದಾಗಿದೆ ಎಂದಿದ್ದಾರೆ.
’ಯುವಜನರ ಸಮರಾ್ಣ ಭಾವ, ವಿಜ್ಞಾನಿಗಳ ಬದ್ಧತೆಯನ್ನು ಕಂಡಾಗಲೆಲ್ಲ ನನ್ನ ಹೃದಯ ತುಂಬಿ ಬರುತ್ತದೆ. ಯುವಕರ ಈ ಸಮರಾ್ಣ ಭಾವವೇ ವಿಕಸಿತ ಭಾರತದ ಬಹುದೊಡ್ಡ ಶಕ್ತಿಗಳಲ್ಲಿ ಒಂದಾಗಿದೆ’ ಎಂದು ಪ್ರತಿಪಾದಿಸಿದ್ದಾರೆ.
’ವಂದೇ ಮಾತರಂ’ ಗೀತೆಯ 150ನೇ ವರ್ಷಾಚರಣೆ, ಸಂವಿಧಾನ ದಿನಾಚರಣೆ, ಅಯೋಧ್ಯೆಯ ರಾಮ ಮಂದಿರದ ಮೇಲೆ ಹಾರಿಸಿದ ಧರ್ಮಧ್ವಜದ ಕುರಿತಾಗಿ ಸ್ಫೂರ್ತಿದಾಯಕ ಮಾತುಗಳನ್ನಾಡಿರುವ ಮೋದಿ, ಜೇನು ಕೃಷಿಗೆ ಸಂಬಂಧಿಸಿದಂತೆ ದೇಶದಾದ್ಯಂತ ಕೈಗೊಂಡಿರುವ ಉಪಕ್ರಮಗಳು, ಕ್ರೀಡಾ ಕ್ಷೇತ್ರದಲ್ಲಿನ ಸಾಧನೆಗಳು, 2030ರಕ್ಕೆ ಕಾಮನ್ವೆಲ್ತ್ ಗೇಮ್ಸ್ ಆತಿಥ್ಯ ವಹಿಸಲು ಬಿಡ್ನಲ್ಲಿ ಯಶಸ್ವಿಯಾಗಿರುವುದೂ ಸೇರಿದಂತೆ ಹಲವು ವಿಚಾರಗಳ ಬಗ್ಗೆಯೂ ಮಾತನಾಡಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 