‘ಉದ್ಯೋಗ ಸೃಷ್ಠಿ ಮಾಡುವ ನಿಟ್ಟಿನಲ್ಲಿ ನರೇಗಾ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು’

‘ಉದ್ಯೋಗ ಸೃಷ್ಠಿ ಮಾಡುವ ನಿಟ್ಟಿನಲ್ಲಿ ನರೇಗಾ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು’ 'The NREGA scheme was implemented with the aim of creating jobs'


 ಬೀಳಗಿ 10: ರಾಷ್ಟ್ರದ ಬಡ ಜನತೆಗೆ ಉದ್ಯೋಗ ಸೃಷ್ಠಿ ಮಾಡುವ ನಿಟ್ಟಿನಲ್ಲಿ ನರೇಗಾ ಯೋಜನೆ ಅನುಷ್ಠಾನಕ್ಕೆ ತರಲಾಗಿತ್ತು. ಇಂದು ಕೇಂದ್ರ ಬಿಜೆಪಿ ಸರಕಾರ ಅದರಲ್ಲಿರುವ ನರೇಗಾದಲ್ಲಿನ ಮಹಾತ್ಮಾ ಗಾಂಧಿ ಹೆಸರು ಬದಲಿಸಿ ಜಿ ರಾಮ್ ಜಿ ಮಸೂದೆ ತರುವ ಮೂಲಕ ಅವರಲ್ಲಿರುವ ಕೆಟ್ಟ ಮನಸ್ಥಿತಿಯನ್ನು ತೋರಿಸುತ್ತಿದೆ ಎಂದು ಹಟ್ಟಿ ಚಿನ್ನದ ಗಣಿ ನಿಗಮ ಅಧ್ಯಕ್ಷ ಹಾಗೂ ಶಾಸಕ ಜೆ.ಟಿ. ಪಾಟೀಲ್ ಆರೋಪಿಸಿದರು.  ಇಲ್ಲಿಯ ಕೊರ್ತಿ ಆರ್‌.ಸಿ ಯಲ್ಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಲಯದಲ್ಲಿ ಶನಿವಾರ ತಾಲೂಕಾ ಬ್ಲಾಕ್ ಕಾಂಗ್ರೆಸ್ ಸಮಿತಿ ನರೇಗಾ ಬಚಾವೋ ಸಂಗ್ರಾಮದ ಪ್ರತಿಭಟನೆಯ ಅಂಗವಾಗಿ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನುದ್ಧೇಶಿಸಿ ಅವರು ಮಾತನಾಡಿದರು. 

  ಅಂದು ನಾಥುರಾಮ ಘೋಡ್ಸೆ ದೈಹಿಕವಾಗಿ ಹತ್ಯ ಮಾಡಿದ್ದರು. ಇಂದು ಪ್ರಧಾನಿ ನರೇಂದ್ರ ಮೋದಿಯವರು, ಕೇಂದ್ರದ ಬಿಜೆಪಿ ಸರಕಾರ ಎರಡನೇ ಬಾರಿ ಹತ್ಯ ಮಾಡಿದ್ದಾರೆ ಎಂದು ಹರಿಹಾಯ್ದರು. ದೇಶದ ಹಳ್ಳಿಗಳು ಬಲಿಷ್ಠವಾಗದಿದ್ದರೆ ರಾಷ್ಟ್ರವೂ ಎಂದು ಬಲಿಷ್ಠವಾಗುವುದಿಲ್ಲ. ನರೇಗಾ ಯೋಜನೆಯಲ್ಲಿ ಗ್ರಾಪಂಯಲ್ಲಿ ನಿರ್ಣಯವಾಗುತ್ತಿತ್ತು. ಕೇಂದ್ರ ಸರಕಾರ ಈಗ ಅದನ್ನು ಕಸೆದು ಕೊಂಡಿದೆ. ನರೇಗಾ ಯೋಜನೆಯಿಂದ ಬಡ ಕುಟುಂಬದ ರೈತರಿಗೆ 100ದಿನಗಳ ವೇತನದ ಕೌಶ್ಯಲ್ಯ ರಹಿತ ಕೂಲಿ ಕೆಲಸದ ಭರವಸೆ ನೀಡುವ ಮೂಲಕ ಜೀವನೋಪಾಯದ ಭದ್ರತೆಯನ್ನು ಹೆಚ್ಚಿಸಲು ರೂಪಿಸಲಾದ ಭಾರತೀಯ ಕಾನೂನು.

ಇದರಿಂದ ನಿರುದ್ಯೋಗ, ಮಹಿಳೆಯರ ಸಬಲೀಕರಣ ಹಾಗೂ ಆರ್ಥಿಕತೆಯನ್ನು ಸುಧಾರಿಸುವ ಗುರಿ ಹೊಂದಿತ್ತು. ಈ ಯೋಜನೆಯಿಂದ ಕೃಷಿಹೊಂಡ, ಬಾವಿ ನಿರ್ಮಾಣ, ಗ್ರಾಮೀಣ ಮೂಲಸೌಕರ‌್ಯಗಳಾದ ರಸ್ತೆ, ನೀರು ಕೊಯ್ಲೂ, ಸೇರಿದಂತೆ ವಿವಿಧ ಅನುಕೂಲಗಳನ್ನು ಗ್ರಾಮ ಸಭೆಗಳಿಗೆ ಕೊಟ್ಟಿರುವಂತ ಅಧಿಕಾರವನ್ನು ಇನ್ನೂ ಮುಂದೆ ಜಿ ರಾಮ್ ಜೀ ಯೋಜನೆಯಲ್ಲಿ ಕೇಂದ್ರ ಸರಕಾರ ನಿರ್ಣಯ ತೆಗೆದುಕೊಳ್ಳುವುದು. ದೇಶದಲ್ಲಿ ಇಂತಾ ಪರಿಸ್ಥಿತಿಯನ್ನು ನಿರ್ಮಾಣ ಮಾಡಿದ್ದಾರೆ. ಇದರಿಂದಾಗಿ ಬಡ ಕುಟುಂಬಗಳ ಉದ್ಯೋಗ ಕಸೆದುಕೊಂಡಿದೆ. ನರೇಗಾ ಯೋಜನೆ ಹೆಸರು ಮೊದಲಿನಂತೆ ಮುಂದುವರೆಯುವರೆಗೂ ಹೋರಾಟ ನಿಲ್ಲದು.

ಮುಂಬರುವ ಗ್ರಾಪಂ, ಪಪಂ, ತಾಪಂ, ಜಿಪಂ ಚುನಾವಣೆಗಳಲ್ಲಿ ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು. ನರೇಗಾ ಯೋಜನೆಯ ಕುರಿತು ಸಾಮಾನ್ಯರಲ್ಲಿ ಜಾಗೃತಿ ಮುಡಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಕೇಂದ್ರ ಬಿಜೆಪಿ ಸರಕಾರ ಯಾವುದೇ ಹೊಸ ಯೋಜನೆಗಳನ್ನು ತಂದಿಲ್ಲ, ಕಾಂಗ್ರೆಸ್ ಸರಕಾರದ ಯೋಜನೆಗಳನ್ನೇ ಹೆಸರು ಬದಲಿಸಿಕೊಂಡು ಸರಕಾರ ಮಾಡುತ್ತಿದ್ದಾರೆಂದು ಹೇಳಿದ ಶಾಸಕರು ಮೊದಲಿನಂತೆ ನರೇಗಾ ಯೋಜನೆಯ ಹೆಸರು ಬದಲಿಸುವರೆಗೂ ನಮ್ಮ ಹೋರಾಟ ರಾಷ್ಟ್ರವ್ಯಾಪ್ತಿ ಮಾಡಲಾಗುತ್ತದೆ ಎಂದರು. 

 ಕಾಂಗ್ರೆಸ್ ಪಕ್ಷದ ಜಿಲ್ಲಾ ಉಪಾಧ್ಯಕ್ಷ ಎಂ.ಎಲ್‌.ಕೆಂಪಲಿಂಗಣ್ಣವರ ಮಾತನಾಡಿ, ನರೇಗಾ ಯೊಜನೆಯ ಎಲ್ಲಾ ಅಧಿಕಾರ ಗ್ರಾಮ ಸಭೆಗಳನ್ನು ನಡೆಸಿ ತೀರ್ಮಾಣ ತೆಗೆದುಕೊಳ್ಳುವದು ಗ್ರಾಮಸ್ಥರಿಗೆ ಇತ್ತು. ಈಗ ಕೇಂದ್ರ ಸರಕಾರ ಆದೇಶ ಬರುವರೆಗೂ ಕಾಯುವಂತಾಗುತ್ತದೆ ಎಂದರು. ಬ್ಲಾಕ್ ಕಾಂಗ್ರೆಸ್ ಪಕ್ಷದ ತಾಲೂಕಾಧ್ಯಕ್ಷ ಹಣಮಂತ ಕಾಖಂಡಕಿ, ಮಹಿಳಾ ಘಟಕ ಅಧ್ಯಕ್ಷೆ ಆಶಾ ಬೀಳಗಿ, ಗ್ಯಾರಂಟಿ ಯೋಜನೆ ಸಮಿತಿ ತಾಲೂಕಾ ಅಧ್ಯಕ್ಷ ಅಣವೀರಯ್ಯ ಪ್ಯಾಟೀಮಠ, ಮಹಾದೇವ ಹಾದಿಮನಿ, ಮಲ್ಲಪ್ಪ ಕಾಳಗಿ, ಮಲ್ಲಯ್ಯ ಕಂಬಿ, ಯಮನಪ್ಪ ರೊಳ್ಳಿ, ಶ್ರೀಶೈಲ್ ಸೂಳಿಕೇರಿ, ಸಿದ್ದು ಸಾರಾವರಿ, ಬಸವರಾಜ್ ಹಳ್ಳದಮನಿ, ಜಿ.ಆರ್‌.ಪಾಟೀಲ್, ನವೀನ ಢವಳೇಶ್ವರ ಇತರರು ಇದ್ದರು.