‘ಮನುಷ್ಯ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಜೀವನದ ಸಾರ್ಥಕತೆ ಸಾಧ್ಯ’

 ‘ಮನುಷ್ಯ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಜೀವನದ ಸಾರ್ಥಕತೆ ಸಾಧ್ಯ’ 'Life is meaningful when human values are embodied'


‘ಮನುಷ್ಯ ಮೌಲ್ಯಗಳನ್ನು ಮೈಗೂಡಿಸಿಕೊಂಡಾಗ ಜೀವನದ ಸಾರ್ಥಕತೆ ಸಾಧ್ಯ’ 

ಉಳ್ಳಾಗಡ್ಡಿ-ಖಾನಾಪೂರ, 01 ; ಮನುಷ್ಯ ಜೀವನದಲ್ಲಿ ಎತ್ತರಕ್ಕೆ ಬೆಳೆದಾಗ ಸಾಧನೆಗಳಲ್ಲಿ ಯಾರ ಪಾಲೂ ಇಲ್ಲಾ ಸಾಧನೆಗಳೆಲ್ಲಾ ವಯಕ್ತಿಕ ಎಂಬ "ಅಹಂ ಭಾವ" ಬರುವುದು ಸಹಜ, ಆದರೆ ಈ ಸಾಧನೆಗಳ ಮೇಟ್ಟಿಲೆರಲು ಪ್ರತಿಯೋಬ್ಬರ ಪರಿಶ್ರಮ ನಮ್ಮೊಂದಿಗಿದೆ ಎಂಬುದು ವಿಶೇಷ ಆ ದಿಸೆಯಲ್ಲಿ ಇಂದು ಮಾನವನ ಜೀವಿತದ ಸಾರ್ಥಕತೆ ಕೇವಲ ವೈಯಕ್ತಿಕ ಸಾಧನೆಗಳಲ್ಲಿ ಅಡಗಿರುವದಿಲ್ಲ ಬಡವ ಹಾಗೂ ಅನಾಥರಿಗೆ ಆಶ್ರಯ ಸಾಮಾಜಿಕ ಮೌಲ್ಯಗಳನ್ನು ಮೈಗುಡಿಸಿಕೊಳ್ಳುವುದು ನಮ್ಮ ಬದುಕಿನ ಸಾರ್ಥಕತೆಯನ್ನು ಹೆಚ್ಚಿಸುತ್ತದೆ ಎಂದು ಡಾಽಽ ಆನಂದ ಮಹಾರಾಜ ಗೋಸಾವಿ, ಹೇಳಿದರು, 

         ಅವರು ಬುಧವಾರ ದಿ. 30 ರಂದು ಶ್ರಿ ಹತ್ತರಗಿ ಹರಿಮಂದಿರ ಸಭಾಭವನದಲ್ಲಿ, ಶ್ರೀ ಹರಿಕಾಕಾ ಗೋಸಾವಿ ಋಗ್ವೇದಿ ಭಾಗವತ(ವೈಷ್ಣವ) ಮಠ ಹತ್ತರಗಿ- ಯಮನಮರಡಿ ಮತ್ತು ದಿ. ಯಮಕನಮರಡಿ ಲಕ್ಷ್ಮೀ ಅರ್ಬನ ಕೋ. ಆಪ್ ಕ್ರೇಡಿಟ್ ಸೌಹರ್ದ ಸಹಕಾರಿಯ ನಿ, ಯಮಕನಮರಡಿ ಇವುಗಳ ಆಶ್ರಯದಲ್ಲಿ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಸಾನಿಧ್ಯವಾಹಿಸಿ ಮಾತನಾಡಿ 

ಮನುಷ್ಯ ಸಮಾಜಮುಖಿಯಾಗಿ ಬೆಳೆಯಬೇಕು ಅಂದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಸಾಧ್ಯ ಎಂದರು,  

    ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಹಿಡಕಲ್ ಡ್ಯಾಮ್ ಸಂತ ಮಿಖಾಯಲ್ ಚರ್ಚ ಫಾದರ ಲೂರ್ದಸ್ವಾಮಿ ಮಾತನಾಡಿ ಸಮಾಜಸೇವೆ ಮಾಡುವ ಮೂಲಕ ದೇವರ ಪ್ರೀತಿಗೆಪಾತ್ರರಾಗಬಹುದು ಆಧುನಿಕ ಯುಗದಲ್ಲಿ ಮನುಷ್ಯ ಮಾನವೀಯ ಮೌಲಗಳನ್ನು ಕಳೆದುಕೊಳ್ಳತ್ತಿರುವದು ವಿಷಾದನೀಯ ಸಮಾಜ ಸುಧಾರಕ ರವಿ ಜಿಂಡ್ರಾಳಿಯವರ ಹಾಗೂ ಜಾವೇದ ಮುಷಾಪುರಿ, ಅವರ ಕಾರ್ಯ ಶ್ಲಾಘನೀಯ,ಸಾಮಾಜಿಕ ಸೇವೆ ಶ್ವಾಘನೀಯ. ಪ್ರಶಸ್ತಿ, ಪಾಶ್ಚಿಮಾತ್ಯ ಸಂಸ್ಕೃತಿಯ ದಾಸರಾಗಿ ಯುವಜನತೆ ಅನೇಕ ದುಶ್ಚಟಗಳಿಗೆ ಬಲಿಯಾಗಿ ಸಾಮಾಜಿಕ ವಿಘಟಣೆಯಾಗುತ್ತಿದೆ ಕುಟುಂಬದಲ್ಲಿ ಪಾಲಕರು ಮತ್ತು ಗ್ರಾಮಗಳ ಹಿರಿಯರು ಇಂದಿನ ಮಕ್ಕಳಲ್ಲಿ ಉತ್ತಮ ಸಂಸ್ಕಾರ ಸಂಸ್ಕೃತಿಯನ್ನು ಬಿಂಬಿಸುವ ಕೆಲಸ ಮಾಡಬೆಕೆಂದರು,  

ವೇದಿಕೆಯಲ್ಲಿ ಯರಗಟ್ಟಿ ಸರಕಾರಿ ಪೂರ್ವ ಕಾಲೇಜಿನ ಪ್ರಾಚಾರ್ಯ ಕಿರಣ ಚೌಗಲಾ, ಯುವಧುರೀಣ ರವಿ ಜಿಂಡ್ರಾಳಿ, ಸಿ,ಪಿ,ಆಯ್, ಜಾವೇದ ಮುಷಾಪುರಿ, ಶ್ರೀಮತಿ ನಮೃತಾ ಮಿಲಿಂದ ದೇಸಾಯಿ, ಹತ್ತರಗಿ ಗ್ರಾ.ಪಂ. ಪಿ,ಡಿ,ಓ, ಆನಂದ ಹೊಳೆನ್ನವರ ಮಾತನಾಡಿದರು,  

        . ಕಾರ್ಯಕ್ರಮದಲ್ಲಿ ಹತ್ತರಗಿ ಗ್ರಾ.ಪಂ. ಅಧ್ಯಕ್ಷ ಸಮೀಪ ಬೇಪಾರಿ, ಹುಕ್ಕೇರಿ ತಾ.ಪಂ. ಮಾಜಿ ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ಪತ್ರಕರ್ತ ಸುರೇಶ ನೇರ್ಲಿ, ಕುಽಽಸಾಕ್ಷಿ ಸುರೇಶ ನೇರ್ಲಿ, ನಿವೃತ್ತ ಗ್ರಾ,ಪಂ,ಸಿಬ್ಬಂದಿ ಸಿದ್ದು ಶಿಂಧೆ,ಕುಽಽ ಸಮರ್ಥ ಜಿಂಡ್ರಾಳಿ, ದೀಪಕ ನಾಡಗೌಡ, ಗೋಪಾಲ ಚಿಪಣಿ, ಗೀರೀಶ ಕರೋಶಿ, ರವಿಂದ್ರ ಮಾಳಗಿ, ರವೀಂದ್ರ ಮಲಾಜಿ, ಓಂಕಾರ ಭೂವಿ, ರಾಜು ವಾಕುಡೆ, ಎ,ಎಮ್,ಕರ್ನಾಚಿ, ಪ್ರಭುಲಿಂಗ ಖೋತ, ಉಪಸ್ಥಿತರಿದ್ದರು, ಆರಂಭದಲ್ಲಿ ಪತ್ರಕರ್ತ ಸುನೀಲ ದೇಸಾಯಿ ಸ್ವಾಗತಿಸಿದರು. ಎಸ್‌.ಆರ್‌.ತಬರಿ ಕಾರ್ಯಕ್ರಮ ನಿರೂಪಿಸಿ ಕೊನೆಯಲ್ಲಿ ವಂದಿಸಿದರು