‘ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ಬರಡಾಗುತ್ತಿದೆ’
'Land is becoming barren due to excessive use of chemical fertilizers'
ರಾಯಬಾಗ 06: ಆಧುನಿಕ ಕೃಷಿ ಪದ್ಧತಿಯಲ್ಲಿ ಅತಿಯಾದ ರಾಸಾಯನಿಕ ಗೊಬ್ಬರ ಬಳಕೆಯಿಂದ ಭೂಮಿ ತನ್ನ ಫಲವತ್ತತೆಯನ್ನು ಕಳೆದುಕೊಂಡು, ಭೂಮಿ ಇಂದು ಬರಡಾಗುತ್ತಿದೆ ಎಂದು ನೀಡಸೋಶಿ ದುರದುಂಡೇಶ್ವರ ಸಿದ್ಧ ಸಂಸ್ಥಾನ ಮಠದ ನಿಜಲಿಂಗೇಶ್ವರ ಸ್ವಾಮೀಜಿ ಹೇಳಿದರು. ಶುಕ್ರವಾರ ತಾಲೂಕಿನ ಭಿರಡಿ ಗ್ರಾಮದ ಮಹಾದೇವ ದೇವಸ್ಥಾನ ಕಾರ್ಯಾಲಯದಲ್ಲಿ ಕೃಷಿ ಇಲಾಖೆ, ನ್ಯಾಷನಲ್ ಫರ್ಟಿಲೈಜರ್ ಹಾಗೂ ವೀರಭದ್ರೇಶ್ವರ ಫರ್ಟಿಲೈಜರ್ ಸಹಯೋಗದಲ್ಲಿ ವಿಶ್ವ ಮಣ್ಣು ದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಮಣ್ಣಿನ ಆರೋಗ್ಯ ಮತ್ತು ಕೃಷಿಯಲ್ಲಿ ಮಹಿಳೆಯರ ಪಾತ್ರದ ಕುರಿತು ಕಾರ್ಯಾಗಾರ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕೃಷಿ ಮಾಡುವ ಪ್ರತಿಯೊಬ್ಬ ರೈತನ ಮನೆಯಲ್ಲಿ ಜಾನುವಾರುಗಳನ್ನು ಸಾಕುವುದು ನಮ್ಮ ದೇಶದ ಕೃಷಿ ಸಂಸ್ಕಾರವಾಗಿದೆ ಎಂದರು.
ಚಿಕ್ಕೋಡಿ ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಮಾತನಾಡಿ, ಪ್ರತಿ ಜೀವಿಗೆ ಅನ್ನ ನೀಡುವ ಮಣ್ಣನ್ನು ರಾಸಾಯನಿಕಗಳಿಂದ ಸಂರಕ್ಷಣೆ ಮಾಡುವ ಕೆಲಸ ಪ್ರತಿಯೊಬ್ಬರು ಮಾಡಬೇಕಾಗಿದೆ. ಮಣ್ಣಿನಲ್ಲಿರುವ 18 ಪೋಷಕಾಂಶಗಳು ಬೆಳೆಗಳಿಗೆ ಹೇರಳವಾಗಿ ದೊರಕುತ್ತವೆ. ಸತ್ವವನ್ನು ಕಳೆದುಕೊಳ್ಳುತ್ತಿರುವ ಮಣ್ಣಿನ ಮಹತ್ವ ಸಾರುವ ಉದ್ದೇಶದಿಂದ ಡಿ.5 ರಂದು ವಿಶ್ವದಾದ್ಯಂತ ಮಣ್ಣು ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.ತುಕ್ಕಾನಟ್ಟಿ ಕೃಷಿ ಕೇಂದ್ರದ ಗೃಹ ವಿಜ್ಞಾನ ತಜ್ಞರಾದ ರೇಖಾ ಕರಬರಿ ಮಾತನಾಡಿ, ಮಹಿಳೆಯರು ಕೃಷಿ ಚಟುವಟಿಕೆಗಳ ಜೊತೆಗೆ ಹೈನುಗಾರಿಕೆ ಮತ್ತು ಮನೆಯಲ್ಲಿ ಇತರೆ ಉಪಕಸುಬಗಳನ್ನು ಮಾಡಿಕೊಂಡು ಆರ್ಥಿಕವಾಗಿ ಸಬಲರಾಗಬೇಕೆಂದರು. ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಬ್ಬಡಿಯಲ್ಲಿ ಸಾಧನೆ ಮಾಡಿದ ಗ್ರಾಮದ ಕ್ರೀಡಾಪಟುಗಳನ್ನು, ಅಗ್ನಿವೀರ ಸೈನ್ಯದಲ್ಲಿ ಆಯ್ಕೆಯಾದ ಯುವಕರನ್ನು ಹಾಗೂ ಅಧಿಕ ಇಳುವರಿ ಕಬ್ಬು ಬೆಳೆದ ರೈತರನ್ನು ಸತ್ಕರಿಸಲಾಯಿತು.
ಇದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ರೈತ ಮಹಿಳೆಯರ ಉಡಿ ತುಂಬುವ ಕಾರ್ಯಕ್ರಮವನ್ನು ಶ್ರೀಗಳು ನೆರವೇರಿಸಿದರು. ತಾಲೂಕು ಸಹಾಯಕ ಕೃಷಿ ನಿರ್ದೇಶಕ ವಿನೋದ ಮಾವರಕರ, ಹೈನುಗಾರಿಕೆ ತಜ್ಞ ಸುರಜ ಕೌಜಲಗಿ, ಸಿ.ಬಿ.ಕೆ.ಎಸ್.ಎಸ್.ಕೆ ಉಪಾಧ್ಯಕ್ಷ ತಾತ್ಯಾಸಾಬ ಕಾಟೆ, ನಿರ್ದೇಶಕ ಭರತೇಶ ಬನವನೆ, ಮಲ್ಲಪ್ಪ ಮೈಶಾಳೆ, ಮಹಾದೇವ ಬೋರಗಾಂವೆ, ಭರತ ಪಾಟೀಲ, ಮಹಾಂತೇಶ ಸಂಕೇಶ್ವರ, ಶಂಕರ ಗಡಕರಿ, ಶಿವಪ್ಪ ಭೆಂಡೆ, ವಿರೂಪಾಕ್ಷ ಗಳತಗೆ, ಬಾಬಾಜೀ ಬೋರಗಾಂವೆ, ಕೆಂಪಣ್ಣ ಮೈಶಾಳೆ, ಶಿವಗೊಂಡ ನಿಡವಣಿ, ಪರಶುರಾಮ ಭೆಂಡೆ ಸೇರಿ ಅನೇಕರು ಇದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 