ಕಲಾ ಪ್ರೇಕ್ಷಕರನ್ನು ರಂಜಿಸಿದ ಐಸಿರಿ ಸಾಂಸ್ಕೃತಿಕ ಮೇಳ

ಕಲಾ ಪ್ರೇಕ್ಷಕರನ್ನು ರಂಜಿಸಿದ ಐಸಿರಿ ಸಾಂಸ್ಕೃತಿಕ ಮೇಳ 'Isiri' Cultural Fair Entertains Art Lovers

         ಯಮಕನಮರಡಿ 21 : ಕಲಾವಿದರ ವೈವಿಧ್ಯ ಸಾಂಸ್ಕೃತಿಕ ಕಲೆಗಳು ಪ್ರದರ್ಶನ ನಮ್ಮ ನಾಡಿನ ಪ್ರತೀಕ ಅಂತಹ ಪರಂಪರೆಯ ಜಾನಪದ ಸಂಗೀತ ಸಾಂಸ್ಕೃತಿಕ ಕಲೆಗಳನ್ನು ಕಲಾವಿದರು ಆಸಕ್ತಿಯಿಂದ ಕಲಿತು ಭವ್ಯ ಕಲಾ ಸಂಸ್ಕೃತಿ ಉಳಿಸಬೆಕೆಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪನಿರ್ದೇಶಕರಾದ ವಿದ್ಯಾವತಿ ಹೆಚ್.ಬಿ ಕಲಾವಿದರಿಗೆ ಕಲೆ ನೀಡಿದರು.

         ಅವರು ಕಳೆದ ಸೋಮವಾರ 20 ಜುಲೈ 2026 ರಂದು ಐಸಿರಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ಬೆಳಗಾವಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಕಾರದಲ್ಲಿ  ಕುಮಾರ ಗಂಧರ್ವ ಮಂದಿರದಲ್ಲಿ ಜರುಗಿದ ಐಸಿರಿ ಸಾಂಸ್ಕೃತಿಕ ಮೇಳ 2026 ಕಾರ್ಯಕ್ರಮ ಸಸಿಗೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ ಕಲಾವಿದರು ನಮ್ಮ ನಾಡಿನ ಸಾಂಸ್ಕೃತಿಕ ರಾಯಭಾರಿಗಳು ಕಲಾವಿದರಿಗೆ ಪ್ರತಿಯೊಬ್ಬರು ಉತ್ತೇಜನ ನೀಡಿ ಬೆಳೆಸಬೆಕೆಂದರು. 

         ಮುಖ್ಯ ಅತಿಥಿಗಳಾಗಿ ಆಗಮಿಸಿದ ಮೈ ಭಾರತ ಕೇಂದ್ರ ಬೆಳಗಾವಿ ಜಿಲ್ಲಾ ಯುವ ಅಧಿಕಾರಿಗಳಾದ ಸಂಗ್ರಾಮ ವಿ ಸಾವಂತ ಇವರು ಮಾತನಾಡಿ ಇಂದಿನ ಯುವ ಜನರು ದುಷ್ಚಟಗಳಿಂದ ದೂರವಿದ್ದು ಶಿಕ್ಷಣದ ಜೊತೆಗೆ ಸಮುದಾಯ ಕಾರ್ಯ ಹಾಗೆ ನಮ್ಮ ನೆಲದ ಜಾನಪದ ಸಾಂಸ್ಕೃತಿ ಕಲೆಗಳನ್ನು ಆಸಕ್ತಿಯಿಂದ ಕಲಿತು ಸಾಂಸ್ಕೃತಿಕ ಸಂಘಟನೆಗಳು ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡಲು ಸಂಘ ಸಂಸ್ಥೆಗಳು ಮುಂದಾಗಬೇಕೆಂದರು. 

          ಹಿರಿಯ ಕಲಾವಿದರಾದ ಲಕ್ಷ್ಮೀಬಾಯಿ ನೀಲಪ್ಪನವರ   ಶಿವಪ್ಪಾ ದುಂ ಕಲ್ಲೋಳಿ   ಗಂಗಪ್ಪಾ   ಬಾಬಾಮಹಾರಾಜ ಉಳ್ಳಿಗೇರಿ    ಕಲಾವಿದರಿಗೆ ಶಾಲು ಹೊದಿಸಿ ಫಲಪುಷ್ಪದೊಂದಿಗೆ ಗೌರವಿಸಲಾಯಿತು. ವೇದಿಕೆ ಮೇಲೆ ರಾಜಪ್ರಭು ದೋತ್ರೆ, ಭರತ ಕಲಾಚಂದ್ರ, ರಾಮಚಂದ್ರ ಕಾಂಬಳೆ, ಸಿದ್ದಣ ದುರದುಂಡಿ, ಶ್ರೀರಂಗ ಜೋಶಿ, ಯಲ್ಲಪ್ಪಾ ನಾಯಿಕರ, ಗೋಪಾಲ ಚಿಪಣೆ  ಗುಳಪ್ಪಾ ವಿಜಯನಗರೆ, ಉಪಸ್ಥಿತರಿದ್ದರು.

         ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೀರಗಾಸೆ ಕುಣಿತ, ಸಂಪ್ರದಾಯ ಪದ, ಗೀಗೀ ಪದ, ಭಜನಾ ಪದ, ದಟ್ಟಿ ಕುಣಿತ, ಸಣ್ಣಾಟ ಪದ, ಜಾನಪದ ಸಂಗೀತ ಜಿಲ್ಲೆಯ ವಿವಿಧ ತಂಡಗಳು ಕಲಾಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ಕಲಾ ಮೆರಗು ನೀಡಿದರು. ಸಂಸ್ಥೆಯ ಅಧ್ಯಕ್ಷರಾದ ಅನಂತಕುಮಾರ ಬ್ಯಾಕೂಡ ಪ್ರಸ್ತಾವಿಕವಾಗಿ ಮಾತನಾಡಿದರು ನಾಗರಾಜ ಮಾಲಗತ್ತೆ ಕಾರ್ಯಕ್ರಮ ನಿರೂಪಿಸಿದರು ಸುಜಾತಾ ಮಗದುಮ್ಮ ಸ್ವಾಗತಿಸಿ ವಂದಿಸಿದರು.