‘ಇದು ಒಳ ಒಪ್ಪಂದದ ಸರ್ಕಾರ ಎಂದು ಭವಿಷ್ಯ ನುಡಿದಿದ್ದೆ’

‘ಇದು ಒಳ ಒಪ್ಪಂದದ ಸರ್ಕಾರ ಎಂದು ಭವಿಷ್ಯ ನುಡಿದಿದ್ದೆ’ 'I predicted this would be a government of internal compromise'

              ಗಂಗಾವತಿ: ಶೀಘ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಕಲ್ಪನೂ ಈಡೇರುತ್ತೆ, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಪಡೆಯುತ್ತಾರೆ ಎಂದು ಶಾಸಕ ಗಾಲಿ ಜನಾರ್ದನ ರೆಡ್ಡಿ ಭವಿಷ್ಯ ನುಡಿದಿದ್ದಾರೆ.  

               ನ.28ರ ಶುಕ್ರವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2023ರಲ್ಲಿ ಆಗಿರುವ ಒಳ ಒಪ್ಪಂದದ ಪ್ರಕಾರ ಸಿದ್ದರಾಮಯ್ಯ ಅವರು ಎರಡುವರೆ ವರ್ಷದ ನಂತರ ರಾಜೀನಾಮೆ ಕೊಟ್ಟು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲಿದ್ದಾರೆ, ಇದರಿಂದಾಗಿ ದೇವರಾಜ್ ಅರಸು ಅವರು ಸುದೀರ್ಘ ಕಾಲದ ಮುಖ್ಯಮಂತ್ರಿ ಎನ್ನುವ ದಾಖಲೆಯನ್ನು ಸಿದ್ದರಾಮಯ್ಯ ಮುರಿದಂತಾಗುತ್ತದೆ ಎಂದರು.  
                ಜೊತೆಗೆ ಒಳ ಒಪ್ಪಂದದಂತೆ ಡಿ.ಕೆ.ಶಿವಕುಮಾರ್ ಹೇಳಿರುವಂತೆ ರಾಜಕೀಯ ವ್ಯವಹಾರ ಮಾತುಕತೆಯ ಫಲವಾಗಿ ಡಿ.ಕೆ. ಶಿವಕುಮಾರ್ ಅವರು ಇನ್ನುಳಿದ ಅವಧಿಗೆ ಮುಖ್ಯಮಂತ್ರಿ ಆಗುವ ಕುರಿತು ನನಗೆ ಸಿದ್ದರಾಮಯ್ಯ ಅವರ ಆಪ್ತ ವಲಯದ ಮೂಲಗಳು ತಿಳಿಸಿವೆ ಎಂದು ಹೇಳಿದರು.  
                ಈ ಭವಿಷ್ಯವನ್ನು ಸಂಡೂರು ಉಪಚುನಾವಣೆಯ ಸಂದರ್ಭದಲ್ಲಿ ನಾನು ಬಹಿರಂಗ ಭಾಷಣದಲ್ಲೇ ಹೇಳಿದ್ದೆ. ಎರಡೂವರೆ ವರ್ಷ ಮುಖ್ಯಮಂತ್ರಿ ಸಿದ್ದರಾಮಯ್ಯ ಉಳಿದ ಅವಧಿಗೆ                   ಡಿ.ಕೆ. ಶಿವಕುಮಾರ್ ಆಗಲಿದ್ದಾರೆ. ಆದ್ದರಿಂದ ಇದು ಒಳ ಒಪ್ಪಂದದ ಸರ್ಕಾರ ಎಂದು ಭವಿಷ್ಯ ನುಡಿದಿದ್ದೆ, ಅದು ಈಗ ನಿಜವಾಗುತ್ತಿದೆ ಎಂದರು.  
ಇವರ ರಾಜಕೀಯ ಮೇಲಾಟಕ್ಕೆ ರಾಜ್ಯ ಸರ್ಕಾರದ ಆಡಳಿತ ಸ್ತಬ್ಧವಾಗಿದೆ. ಜನರ ಕೆಲಸಗಳು ಆಗುತ್ತಿಲ್ಲ, ಅಧಿಕಾರಿಗಳು ಯಾರ ಮಾತನ್ನು ಕೇಳಬೇಕು ಎಂಬ ಗೊಂದಲದಲ್ಲಿದ್ದಾರೆ. ರಾಜಕೀಯಪಟ್ಟವನ್ನು ಅರಿತಿರುವ ಸಿದ್ದರಾಮಯ್ಯ ಅವರು ಕೆಲ ಗಾಳಗಳನ್ನು ಉರುಳಿಸುವ ಮೂಲಕ ಜನರ ಮನಸ್ಸನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ ಡಿಕೆ ಶಿವಕುಮಾರ್ ಅವರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳುವಂತೆ ಸೋಶಿಯಲ್ ಮೀಡಿಯಾ ಮೂಲಕ ಪ್ರಶ್ನಿಸುತ್ತಿದ್ದಾರೆ ಎಂದು ಹೇಳಿದರು.  
                ಇದಕ್ಕೆ ಕೌಂಟರ್ ಎಂಬ ರೀತಿಯಲ್ಲಿ ಸಿದ್ದರಾಮಯ್ಯ ಅವರು ಜಗತ್ತಿಗೆ ಒಳ್ಳೆಯದಾಗುವ ಮಾತನ್ನು ಉಳಿಸಿಕೊಳ್ಳುವುದು ಸಹ ಮಹಾನ್ ಕಾರ್ಯ ಎಂದು ನೇರವಾಗಿ ಡಿಕೆ ಶಿವಕುಮಾರ್ ಅವರಿಗೆ ತಿಳಿಸಿದ್ದಾರೆ. ಪ್ರಸ್ತುತ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ವೀಕ್ ಇಲ್ಲ, ಕರ್ನಾಟಕದ ರಾಜಕೀಯ ಸಮಸ್ಯೆಯನ್ನು ಶೀಘ್ರವೇ ಪರಿಹರಿಸುವ ಶಕ್ತಿಯನ್ನು ಕಾಂಗ್ರೆಸ್ ಪಕ್ಷ ಹೊಂದಿದ್ದು ದೇವರಾಜ ಅರಸು ಅವರ ಸುದೀರ್ಘ ಮುಖ್ಯಮಂತ್ರಿ ಆಗಿರುವ ದಾಖಲೆ ಮುರಿದ ನಂತರ ಸುಲಭವಾಗಿ ಸಿದ್ದರಾಮಯ್ಯ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಅಧಿಕಾರ ಹಸ್ತಾಂತರ ಮಾಡುವ ವಿಶ್ವಾಸ ನನಗಿದೆ ಎಂದರು.  
                     ರಾಜ್ಯದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಂದಿಗೂ ಭೇದ-ಭಾವ ಮಾಡಿಲ್ಲ, ನಾನು ಬಿಜೆಪಿಯವನಾದರೂ ನಮ್ಮ ಗಂಗಾವತಿ ಕ್ಷೇತ್ರಕ್ಕೆ 17.50 ಕೋಟಿ ರೂ.ಗಳ ವೆಚ್ಚದಲ್ಲಿ ಕನಕಗಿರಿ ರಸ್ತೆ ಹೊಂದಿಕೊಂಡಂತೆ ಸ್ಯಾಟಲೈಟ್ ಕೆ.ಎಸ್‌.ಆರಿ​‍್ಟ.ಸಿ. ಬಸ್ ನಿಲ್ದಾಣ ನಿರ್ಮಾಣಕ್ಕೆ ಗುರುವಾರದ ಕ್ಯಾಬಿನೆಟ್ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದಾರೆ. ಜೊತೆಗೆ ಈಗಾಗಲೇ ಕೃಷಿ ವಿಜ್ಞಾನ ಕೇಂದ್ರ ಕೆ.ಎಸ್‌.ಆರಿ​‍್ಟ.ಸಿ. ಗೆ ಹಸ್ತಾಂತರ ಮಾಡಲಾಗಿದೆ ಎಂದರು.  
                 ಆದ್ದರಿಂದ ಇನ್ನು ಮುಂದೆ ಗಂಗಾವತಿಯಲ್ಲಿ ಮತ್ತೊಂದು ಬಸ್ ಸ್ಟ್ಯಾಂಡ್ ನಿರ್ಮಾಣ ಕಾರ್ಯದ್ದು ಗಂಗಾವತಿ ಪ್ರವಾಸೋದ್ಯಮದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿರುವುದರಿಂದ ಗಂಗಾವತಿಗೆ ಬರುವವರಿಗೆ ಈ ಸ್ಯಾಟಿಲೈಟ್ ಬಸ್ ಸ್ಟ್ಯಾಂಡಿನಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ದೊರೆಯಲಿವೆ ಎಂದು ಹೇಳಿದರು.  
                      ಗಂಗಾವತಿಗೆ ಮತ್ತೊಂದು ಸ್ಯಾಟಲೈಟ್ ಬಸ್ ನಿಲ್ದಾಣವನ್ನು ಮಂಜೂರು ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ಮತ್ತು ರಾಜ್ಯ ಸರ್ಕಾರಕ್ಕೆ ಗಂಗಾವತಿ ಸಮಸ್ತ ಜನರ ಪರವಾಗಿ ಅಭಿನಂದಿಸುವುದಾಗಿ ಶಾಸಕ ಗಾಲಿ ಜನಾರ್ದನ ರೆಡ್ಡಿ ತಿಳಿಸಿದರು.