‘ರೈತರಿಗೆ ಮಖ್ಯವಾಗಿ ಆರೋಗ್ಯಕರವಾದ ಮಣ್ಣು ಅವಶ್ಯಕ’
'Healthy soil is essential for farmers'
ಧಾರವಾಡ 24: ದಿ. 23ರಂದು ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡದಲ್ಲಿ ‘ರೈತರ ದಿನಾಚರಣೆ ಮತ್ತು ವಿಶ್ವ ಮಣ್ಣು ದಿನಾಚರಣೆ ಹಿ 2025’ನ್ನು ಅರ್ಥಪೂರ್ಣವಾಗಿ ವಿಜೃಂಭಣೆಯಿಂದ ಆಚರಿಸಲಾಯಿತು. ಪಾಂಡುರಂಗ ಟಿ. ಕೆ. ಅಧ್ಯಕ್ಷರು, ನೀರು ಬಳಕೆದಾರರ ಸಹಕಾರ ಸಂಘ, ತೊರೇನೂರು ತಾ. ಕುಶಾಲನಗರ ಜಿ. ಕೊಡಗು ಹಾಗೂ ಹಾರಂಗಿ ಯೋಜನಾ ಮಟ್ಟದ ಮಹಾಮಂಡಳದ ನೀರಾವರಿ ಸಲಹಾ ಸಮೀತಿ ಸದಸ್ಯರು ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಮಾತನಾಡುತ್ತಾ ರೈತರಿಗೆ ಮಖ್ಯವಾಗಿ ಆರೋಗ್ಯಕರವಾದ ಮಣ್ಣು ಅವಶ್ಯಕ. ಸೆಗಣಿ ಗೊಬ್ಬರದಲ್ಲಿ ಪ್ಲ್ಯಾಸ್ಟಿಕ್ ತ್ಯಾಜ್ಯಗಳು ಹೆಚ್ಚಾಗುತ್ತಿವೆ, ವಾಲ್ಮಿ ಸಂಸ್ಥೆ ಮಣ್ಣು ಮತ್ತು ನೀರಿನ ಸಂರಕ್ಷಣೆ, ಅಭಿವೃದ್ಧಿ ವಿಷಯಗಳ ತರಬೇತಿಗಳನ್ನು ನೀಡುತ್ತಿದೆ. ಕಾವೇರಿ ಅಚ್ಚುಕಟ್ಟು ಪ್ರದೇಶದ ರೈತರು ಸಂಸ್ಥೆಯಲ್ಲಿಯೇ ನಡೆಯುವ ತರಬೇತಿಗಳ ಪ್ರಯೋಜನ ಪಡೆದುಕೊಳ್ಳಬೇಕು, ನೀರು ಬಳಕೆದಾರರ ಸಹಕಾರ ಸಂಘಗಳು ನೀರಿನ ಕರ ವಸೂಲಾತಿ ಮಾಡುವದರಿಂದ ಅಚ್ಚುಕಟ್ಟು ಪ್ರದೇಶದ ನೀರು ನಿರ್ವಹಣೆಗೆ ಜೊತೆಗೆ ಆರ್ಥಿಕ ಲಬವರ್ಧನೆಯಾಗುತ್ತದೆ ಎಂದರು.
ಡಾ. ಶಂಕರ ಹನುಮಂತ ಲಂಗಟಿ, ಪ್ರಗತಿಪರ ರೈತರು ಹಾಗೂ ಸಾವಯವ ಕೃಷಿಕರು, ಗುಂಡೇನಟ್ಟಿ ಗ್ರಾಮ ತಾ. ಖಾನಾಪುರ ಜಿ. ಬೆಳಗಾವಿ ಇವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಾ ಕೃಷಿಯನ್ನು ಲಾಭದಾಯಕವಾಗಿಸಲು ಸಮಗ್ರ ಕೃಷಿ ಕೈಕೊಳ್ಳುವುದು ಅಗತ್ಯ. ಬದುಗಳಲ್ಲಿ ಗಿಡಮರಗಳನ್ನು ನೆಡುವುದರಿಂದ ಮಳೆ ನೀರು ಹರಿದು ಹೋಗದೆ ಮಣ್ಣಿನ ಸಂರಕ್ಷಣೆಯ ಜೊತೆಗೆ ಅಂತರ್ಜಲವನ್ನು ಹೆಚ್ಚಿಸಲು ಸಹಾಯಕವಾಗುತ್ತದೆ ಎಂದರು. ಹಳೆ ಬೇರು ಹೊಸ ಚಿಗುರು ಎಂಬಂತೆ ಸಾಂಪ್ರದಾಯಿಕ ಕೃಷಿ ಪದ್ಧತಿಯ ಜೊತೆಗೆ ಹೊಸ ತಂತ್ರಜ್ಞಾನಗಳಾದ ಸೂಕ್ಷ್ಮ ನೀರಾವರಿ, ಕೃಷಿ ಹೊಂಡ, ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳಬೇಕು. ತಮ್ಮ ನಿರಂತರ ಶ್ರಮದ ಫಲವಾಗಿ 260ಕ್ಕಿಂತ ಹೆಚ್ಚು ಭತ್ತ ತಳಿಗಳು, ಹಣ್ಣು, ತರಕಾರಿಗಳ ಬೀಜ ಬ್ಯಾಂಕ್ ಸ್ಥಾಪಿಸಿರುತ್ತಾರೆ. ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ಕಲ್ಪಿಸಿಕೊಂಡಿರುವುದಲ್ಲದೆ, ್ರ್ರಥಮ ಬಾರಿಗೆ ಧಾರವಾಡದ ಗುರುವಾರ ಸಂತೆಯಲ್ಲಿ ತಮ್ಮದೇ ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದಾರೆ.
ಡಾ. ಗೀರೀಶ್ ಎನ್. ಮರಡ್ಡಿ, ನಿರ್ದೇಶಕರು, ಜಲ ಮತ್ತು ನೆಲ ನಿರ್ವಹಣೆ ಸಂಸ್ಥೆ (ವಾಲ್ಮಿ), ಧಾರವಾಡ ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ರೈತ ದಿನಾಚರಣೆಯ ಈ ಸಂದರ್ಭದಲ್ಲಿ ಕೃಷಿ ಋಷಿಗಳ ಮಾರ್ಗದರ್ಶನ ಪಡೆಯುತ್ತಿರುವುದು ಅಭಿಯಂತರರು, ರೈತರ ಸೌಭಾಗ್ಯವೆಂದರು. ವಾಲ್ಮಿ ಸಂಸ್ಥೆಯು ರಾಜ್ಯಾಂದ್ಯಂತ 6 ಅಚ್ಚುಕಟ್ಟು ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ 150ಕ್ಕೂ ಹೆಚ್ಚು ಪ್ರಗತಿಪರ ರೈತರನ್ನು ಗುರುತಿಸಿದ್ದು, ಪ್ರತಿಯೊಬ್ಬ ರೈತರೂ ಸಾಧಕರೇ ಆಗಿದ್ದಾರೆ. ಅದರಲ್ಲಿ ಇಂದು ಪ್ರತಿ ಯೋಜನೆ ಪ್ರದೇಶದಿಂದ ಒಬ್ಬರಂತೆ 6 ಜನ ಪ್ರಗತಿಪರ ರೈತರನ್ನು ಸನ್ಮಾನಿಸುತ್ತಿರುವುದು ಹೆಮ್ಮೆಯ ಸಂದರ್ಭವಾಗಿದೆ ಎಂದರು.
ವಾಲ್ಮಿ ಸಂಸ್ಥೆಯಲ್ಲಿನ ತರಬೇತಿ ವಿಷಯಗಳನ್ನು ಕೃಷಿಯಲ್ಲಿ ಅಳವಡಿಸಿಕೊಂಡು ಮಣ್ಣು ಮತ್ತು ನೀರಿನ ಸಂರಕ್ಷಣೆಯ ಜೊತೆಗೆ ಸವಳು ಜವಳು ನಿರ್ವಹಣೆ, ಸೂಕ್ಷ್ಮ ನೀರಾವರಿ, ಸಾವಯವ ಕೃಷಿ, ಪಶು ಆಧಾರಿತ ಕೃಷಿ, ವೃಕ್ಷ ಆಧಾರಿತ ಕೃಷಿ, ಉತ್ಪನ್ನಗಳ ಮೌಲ್ಯ ವಧನೆಯಿಂದ ಕೃಷಿಯಲ್ಲಿ ಹೆಚ್ಚಿನ ಲಾಭ ಪಡೆಯಬಹುದು ಎಂದರು. ನಮ್ಮ ನೀರು ನಮ್ಮ ಮಣ್ಣು ನಮ್ಮ ಕಾಲುವೆ ಎಂಬ ಭಾವನೆ ರೈತರಲ್ಲಿ ಮೂಡಬೇಕು. ರಾಜ್ಯ ಸರ್ಕಾರವು ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗೆ ಹೆಚ್ಚಿನ ಅನುದಾನ ನೀಡುವ ಭರವಸೆಯನ್ನು ನೀಡಿದೆ ಎಂದರು. ಸಂಘಗಳು ನೀರು ನಿರ್ವಹಣೆಯಲ್ಲಿ ಹೆಚ್ಚು ಸಕ್ರೀಯವಾಗಿ ಪಾಲ್ಗೊಳ್ಳುವುದರಿಂದ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತನಿಗೂ ನೀರು ತಲುಪಿಸಲು ಸಾಧ್ಯವಾಗುತ್ತಿದೆ ಎಂದರು.
ಇದೇ ಸಂದರ್ಭದಲ್ಲಿ ಪ್ರಗತಿಪರ ರೈತರಾದ ಭದ್ರಾ ಯೋಜನೆಯಿಂದ ಶ್ರೀ ಮಲ್ಲಿಕಾರ್ಜುನಪ್ಪ ಬಿ. ಜಿ., ಗ್ರಾಮ ಕೆ. ಬೇವಿನಹಳ್ಳಿ, ತಾ. ಹರಿಹರ, ಕಾವೇರಿ ಯೋಜನೆಯಿಂದ ಶ್ರೀ ಕೆ. ಜಿ. ಗೋಪಾಲಯ್ಯ ಗ್ರಾಮ ಕಂದೇಗಾಲ ಜಿ. ಮೈಸೂರು, ಘಟಪ್ರಭಾ ಯೋಜನೆಯಿಂದ ಶ್ರೀ ಮಂಜುನಾಥ ಬ. ಉಪ್ಪಲದಿನ್ನಿ ಗ್ರಾಮ ನಂದಗಾಂವ ಜಿ. ಬಾಗಲಕೋಟೆ, ಕೃಷ್ಣಾ ಯೋಜನೆಯಿಂದ ಶ್ರೀ ಭೀಮನಗೌಡ ಮುದ್ದುಗೌಡ ಪಾಟೀಲ ಗ್ರಾಮ ಭಟಗುಣಕಿ ಜಿ. ವಿಜಯಪುರ, ತುಂಗಭದ್ರಾ ಯೋಜನೆಯಿಂದ ಶ್ರೀ ಹೆಚ್. ವೀರೇಶಗೌಡ ಗ್ರಾಮ ಶ್ಯಾನವಾಸಪುರ ಜಿ. ಬಳ್ಳಾರಿ, ಐಪಿಝಡ್ ಕಲಬುರಗಿ ಯೋಜನೆಯಿಂದ ಶ್ರೀ ರೇವಣಸಿದ್ದಪ್ಪ ಹಾಳಕಿ ಗ್ರಾಮ ಅಳ್ಳಗಿ ಬಿ. ಜಿ. ಕಲಬುರಗಿ ಇವರನ್ನು ಸನ್ಮಾನಿಸಲಾಯಿತು. ಸನ್ಮಾನಿತ ರೈತರು ತಮ್ಮ ಅನುಭವಗಳನ್ನು ಹಂಚಿಕೊಂಡರು. ಶ್ರೀ ನಾಗರಾಜ ತಹಶೀಲ್ದಾದರ, ಸಹಾಯಕ ಪ್ರಾಧ್ಯಾಪಕರು ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು.
ಶ್ರೀ ಇಂದುಧರ ಹಿರೇಮಠ, ಸಹಾಯಕ ಪ್ರಾಧ್ಯಾಪಕರು ಕಾರ್ಯಕ್ರಮ ಸಂಯೋಜಿಸಿದರು, ಇಂ. ಯಲ್ಲಪ್ಪ ಪೂಜಾರಿ, ಸಹಾಯಕ ಪ್ರಾಧ್ಯಾಪಕರು ಸಹ ಸಂಯೋಜಿಸಿದರು. ಇಂ. ಪ್ರದೀಪ ದೇವರಮನಿ, ಸಹ ಪ್ರಾಧ್ಯಾಪಕರು ವಾಲ್ಮಿ, ಧಾರವಾಡ ಇವರು ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ಸ್ವಾಗತಿಸಿದರು, ಇಂ. ಸುಧೀಂದ್ರ ಕೆ. ಎಸ್. ಸಹ ಪ್ರಾಧ್ಯಾಪಕರು, ವಾಲ್ಮಿ, ಧಾರವಾಡ ಇವರು ವಂದಿಸಿದರು.
ಕಾರ್ಯಕ್ರಮದಲ್ಲಿ ಬೈಲಹೊಂಗಲ ತಾಲೂಕಿನ ಅನಿಗೋಳ, ಕೆ.ಬಿ.ಪಟ್ಟಿಹಾಳ, ಅಮಟೂರು ಗ್ರಾಮದ ನೀ.ಬ.ಸ.ಸಂಘಗಳ ಕಾರ್ಯದರ್ಶಿಗಳು, ತೊರೇನೂರು ಗ್ರಾಮದ ನೀ.ಬ.ಸ.ಸಂಘಗಳ ಪದಾಧಿಕಾರಿಗಳು, ಬೇಲೂರು ಗ್ರಾಮದ ರೈತರು, ರೈತಮಹಿಳೆಯರು ಹಾಗೂ ಜಲ ಸಂಪನ್ಮೂಲ ಇಲಾಖೆಯ ರಾಜ್ಯದ ವಿವಿಧ ಭಾಗಗಳ ಅಭಿಯಂತರರು, ಅಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಇಂ. ಬಿ. ವೈ. ಬಂಡಿವಡ್ಡರ, ಪ್ರಾಧ್ಯಾಪಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 