‘ದ್ವೇಷ ಭಾಷಣ ಕಾಯ್ದೆ ಒಂದು ದಮನಕಾರಿ ಕಾನೂನು’
'Hate Speech Act is a repressive law'
ಕಲಬುರಗಿ: ರಾಜ್ಯದಲ್ಲಿ ಅಭಿವೃದ್ಧಿ ಸಂಪೂರ್ಣ ಕುಂಠಿತವಾಗಿದ್ದು, 24 ಗಂಟೆಯೂ ಸಿಎಂ ಸ್ಥಾನ ಉಳಿಸಿಕೊಳ್ಳುವ ಹಾಗೂ ಪಡೆದುಕೊಳ್ಳುವ ತಂತ್ರಗಾರಿಕೆ ಮಾತ್ರ ನಡೆಯುತ್ತಿದೆ ಎಂದು ಮಾಜಿ ಸಿಎಂ, ಸಂಸದರಾಗಿರುವ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸಿಎಂ ಸ್ಥಾನದ ಖುರ್ಚಿ ಉಳಿಸಿಕೊಳ್ಳುವಲ್ಲಿ ಹಾಗೂ ಮತ್ತೊಂದೆಡೆ ಡಿಸಿಎಂ ಡಿಕೆ ಶಿವಕುಮಾರ ಸಿಎಂ ಸ್ಥಾನ ಪಡೆಯುವ ತಂತ್ರಗಾರಿಕೆಯಲ್ಲಿ ತೊಡಗಿದ್ದರಿಂದ ಸರ್ಕಾರ ಸಂಪೂರ್ಣ ನಿಷ್ಕ್ರಿಯಗೊಂಡಿದೆ ಎಂದರು.
ರಾಜ್ಯದಲ್ಲಿ ಅಭಿವೃದ್ಧಿ ಕುಂಟಿತವಾಗಿದೆ ಎಂದು ನಾವು ಟೀಕೆ ಮಾಡುತ್ತಿಲ್ಲ. ಆಡಳಿತ ಪಕ್ಷದ ಶಾಸಕರೇ ಹೇಳುತ್ತಿದ್ದಾರೆ. ಇದರಿಂದ ಆಡಳಿತದ ಮೇಲೆ ದುಷ್ಪರಿಣಾಮ ಆಗುತ್ತಿದೆ ಎಂದು ಕೆಪಿಸಿಸಿ ಉಪಾಧ್ಯಕ್ಷರೇ ಸ್ವತಃ ಪತ್ರ ಬರೆದಿದ್ದಾರೆ. ಯಾವ ಸರಕಾರ ಸ್ಥಿರ ಇರಲ್ಲವೋ ಸಹಜವಾಗಿಯೇ ಅಭಿವೃದ್ದಿ ಕುಂಠಿತವಾಗುತ್ತದೆ ಎಂದು ವಿವರಣೆ ನೀಡಿದರು.
ಕಾಂಗ್ರೆಸ್ ನಲ್ಲಿ ಹೈ ಇದೆ. ಆದರೆ ಕಮಾಂಡ್ ಇಲ್ಲವೇ ಇಲ್ಲ. ಕಾಂಗ್ರೆಸ್ ನಲ್ಲಿ ಗೊಂದಲವಿದೆ. ಇದರಲ್ಲಿ ಎರಡು ಮಾತಿಲ್ಲ. ಪ್ರಮುಖವಾಗಿ ಕಾಂಗ್ರೆಸ್ ಹೈಕಮಾಂಡ್ ಎರಡು ಭಾಗ ಆಗಿ ಹೋಗಿದೆ. ರಾಜ್ಯದಲ್ಲಿ ಉಂಟಾಗಿರುವ ಗೊಂದಲದಲ್ಲಿ ಕಾಂಗ್ರೆಸ್ ಹೈಕಮಾಂಡ್ ಪಾತ್ರ ಬಹಳ ದೊಡ್ಡದಿದೆ. ಕರ್ನಾಟಕ ಕಾಂಗ್ರೆಸ್ ನಾಯಕರು ಪರಿಣಿತರಿದ್ದಾರೆ. ಆದರೆ ಎಲ್ಲವೂ ಇಲ್ಲಿಂದಲೇ ಹೋಗುವಾಗ ಹೈಕಮಾಂಡ್ ಮಾತು ಯಾಕೆ ಇವರು ಕೇಳುತ್ತಾರೆ? ಸಿಎಂ ಹೈಕಮಾಂಡ್ ಹೇಳಿದರೆ ಎಐಸಿಸಿ ಅಧ್ಯಕ್ಷರು ವಾರದ ಹಿಂದೆ ಹೈಕಮಾಂಡ್ ಅವಲೋಕಿಸುತ್ತಿದೆ ಎಂದಿದ್ದರು. ಆದರೆ ಈಗ ಹೈಕಮಾಂಡ್ ಗೊಂದಲ ಸೃಷ್ಟಿಸಿಲ್ಲ. ಗೊಂದಲ ರಾಜ್ಯದಿಂದಲೇ ಆಗಿದ್ದು, ಸ್ಥಳೀಯವಾಗಿ ಬಗೆಹರಿಸಿಕೊಳ್ಳಲಿ ಎನ್ನುತ್ತಿದ್ದಾರೆ. ಇದು ಕಾಂಗ್ರೆಸ್ ಹೈಕಮಾಂಡ್ ನ ಬಣ್ಣ ಎಂದು ಟೀಕಿಸಿದರು.
ದ್ವೇಷ ಭಾಷಣ ಕಾಯ್ದೆ ಒಂದು ದಮನಕಾರಿ ಕಾನೂನುಯಾಗಿದೆ. ದ್ವೇಷ ಭಾಷಣ ಅಂದರೆ ಏನು ಎನ್ನುವ ವ್ಯಾಖ್ಯಾನ ದೊಡ್ಡ ಪ್ರಮಾಣದಲ್ಲಿ ಮಾಡಿದ್ದಾರೆ. ಯಾರನ್ನು ಯಾವಾಗ ಬೇಕಾದ್ರೂ ಒಳಗೆ ಹಾಕುವ ರೀತಿ ಮಾಡಿದ್ದಾರೆ. ರಾಜ್ಯ ಸರಕಾರ ಎಲ್ಲಾ ರಂಗದಲ್ಲಿ ವಿಫಲವಾಗಿದೆ. ರಾಜ್ಯದಲ್ಲಿ ಅಭಿವೃದ್ದಿ ಶೂನ್ಯವಾಗಿದೆ. ಸರಕಾರ ಆರ್ಥಿಕವಾಗಿ ದಿವಾಳಿಯಾಗಿದೆ. ರಾಜ್ಯದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ. ಯಾರೂ ಇದನ್ನು ಪ್ರಶ್ನೆ ಮಾಡಬಾರದೆಂದು ಈ ಕಾಯ್ದೆ ಜಾರಿಗೆ ತರುತ್ತಿದ್ದಾರೆ ಎಂದು ಬೊಮ್ಮಾಯಿ ವಾಗ್ದಾಳಿ ನಡೆಸಿದರು.
ಪ್ರಚೋದನಕಾರಿಯಾಗಿ ಮಾತನಾಡಿದರೆ ಕ್ರಮಕ್ಕೆ ಈಗಾಗಲೇ ಬಿಎನ್ಎಸ್ ಕಾಯಿದೆಯಲ್ಲಿ ಇದೆ. ಮತ್ತೆ ವಿಶೇಷ ಕಾನೂನು ತರುವ ಅಗತ್ಯ ಏನಿದೆ? ವಿರೋಧ ಪಕ್ಷಗಳು ಸಣ್ಣ ಪುಟ್ಟ ಮಾತನಾಡಿದರೂ ಒಳಗೆ ಹಾಕಬಹುದೆಂದು ಈ ಕಾನೂನು ತರುತ್ತಿದ್ದಾರೆ. ಎಮರ್ಜನ್ಸಿ ಅವಧಿಯಲ್ಲೂ ಹೀಗೆ ಇರಲಿಲ್ಲ. ಇದು ಅಘೋಷಿತ ಅಲ್ಲ ಘೋಷಿತ ಎಮರ್ಜನ್ಸಿ. ಈ ಸಂಬಂಧ ನಾನೂ ರಾಜ್ಯಪಾಲರನ್ನು ಭೇಟಿ ಮಾಡುವೆ. ಅಗತ್ಯ ಬಿದ್ದರೆ ಕಾನೂನು ಹೋರಾಟ ಸಹ ಮಾಡುತ್ತೇವೆ. ಕಾನೂನು ಯಾರ ಕೈಯಲ್ಲಿದೆ ಎನ್ನುವುದು ಮುಖ್ಯ. ದ್ವೇಷ ರಾಜಕಾರಣ ಮಾಡುತ್ತಿರುವವರ ಕೈಯಲ್ಲಿ ಸದ್ಯ ಅಧಿಕಾರವಿದೆ. ಹಾಗಾಗಿ ಹೊಸ ಕಾನೂನು ಆತಂಕಕಾರಿ ಎನ್ನುತ್ತಿದ್ದೇವೆ ಎಂದು ಮಾಜಿ ಸಿಎಂ ಬೊಮ್ಮಾಯಿ ತಿಳಿಸಿದರು.
ಸುದೀಪ್- ದರ್ಶನ್ ನಡುವಿನ ವಿಚಾರದ ಬಗ್ಗೆ ನೋ ಕಮೆಂಟ್ ಎಂದ ಬೊಮ್ಮಾಯಿ, ಅವರ ವಿಚಾರ ನಮ್ಮ ವ್ಯಾಪ್ತಿಗೆ ಬರಲ್ಲ. ಪೈರಸಿ ಬಗ್ಗೆ ಆಂಟಿ ಪೈರಸಿ ಕಾನೂನಿದೆ. ಸರ್ಕಾರ ಕ್ರಮ ತೆಗೆದುಕೊಳ್ಳಬೇಕು. ಸಿನಿಮಾ ಅಷ್ಟೇ ಅಲ್ಲಾ, ಎಲ್ಲಾ ರಂಗದಲ್ಲೂ ಕೂಡ ಪೈರಸಿಯಿದೆ. ಹಾಗಾಗಿ ಇದರ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಬೇಕು ಅಷ್ಟೆ. ಅಮೃತಾಂಜನ್, ವಿಕ್ಸ್ ಹಿಡಿದು ಎಲ್ಲವೂ ಡೂಪ್ಲಿಕೆಟ್ ಆಗುತ್ತಿವೆ. ಹಾಗೆ ಸಿನೇಮಾ ಕೂಡ. ಪೈರೆಸಿ ತಡೆಗಟ್ಟಲು ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಅಷ್ಟೇ ಎಂದು ಮಾಜಿ ಸಿಎಂ ಬೊಮ್ಮಾಯಿ ಹೇಳಿದರು.
ಬೆಳಗಾವಿಯಲ್ಲಿ ‘ಚಳಿಗಾಲ’ ಬದಲು ಮುಂಗಾರು ಅಧಿವೇಶನ: ಯು.ಟಿ.ಖಾದರ್ ವಾಸ್ತವ್ಯಕ್ಕೆ ಹೋಟೆಲ್ ಅಲಭ್ಯದಿಂದಾಗಿ ಈ ಬಗ್ಗೆ ಚರ್ಚೆ, ಪ್ರತಿಭಟನೆ ತಡೆಯಲು ಈ ನಿರ್ಧಾರವಲ್ಲ, ದ್ವೇಷ ಭಾಷಣ ವಿಧೇಯಕ ಅಂಗೀಕಾರಕ್ಕೆ ಗಡಿಬಿಡಿ ಮಾಡಿಲ್ಲ: ಸ್ಪೀಕರ್
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 