ಶಾಸಕರ ನೇತೃತ್ವದಲ್ಲಿ ಗೂಂಡಾಗಿರಿ’
'Goons led by MLAs'
ಬಳ್ಳಾರಿ: ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಬ್ಯಾನರ್ ವಿಚಾರದಲ್ಲಿ ನಡೆದ ಗಲಾಟೆ, ಗುಂಡೇಟು ಪ್ರಕರಣ ಇದೀಗ ರಾಜಕೀಯವಾಗಿ ಮಹತ್ವ ಪಡೆದಿದ್ದು, ಬಿಜೆಪಿ ರಾಜ್ಯಾದ್ಯಕ್ಷ ಬಿವೈ ವಿಜಯೇಂದ್ರ ಶುಕ್ರವಾರ (ಜ.02) ಬಳ್ಳಾರಿಗೆ ಭೇಟಿ ನೀಡಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಾಸಕ ಭರತ್ ರೆಡ್ಡಿ ನೇತೃತ್ವದಲ್ಲಿ ಗೂಂಡಾಗಿರಿ ನಡೆದಿದೆ. ಬ್ಯಾನರ್ ವಿಚಾರದಲ್ಲಿ ದೊಂಬಿ ಎಬ್ಬಿಸಿದ್ದಾರೆ. ಗೂಂಡಾಗಳು, ಕಾರ್ಯಕರ್ತರನ್ನು ಕರೆದುಕೊಂಡು ಬಂದು ಕಲ್ಲು ಎಸೆದಿದ್ದಾರೆ. ಸತೀಶ್ ರೆಡ್ಡಿ ಎನ್ನುವ ವ್ಯಕ್ತಿಯ ಖಾಸಗಿ ಗನ್ ಮ್ಯಾನ್ ಫೈಯರ್ ಮಾಡಿಸಿದ್ದಾನೆ. ಕಾಂಗ್ರೆಸ್ ನವರಿಗೆ ನಾಚಿಕೆ ಆಗಬೇಕು ಎಂದು ಹೇಳಿದರು.
ವಾಲ್ಮೀಕಿಗೆ ಮಹತ್ವ ಕೊಡಲು ನಮ್ಮ ಹಿಂದಿನ ಸಿಎಂ ಯಡಿಯೂರಪ್ಪರನ್ನು ಮನವೊಲಿಸಿದ್ದ ಶ್ರೀರಾಮುಲು ವಾಲ್ಮೀಕಿ ಜಯಂತಿ ಮಾಡಿಸಿದ್ದರು. ಬಳ್ಳಾರಿಯಲ್ಲೂ ಜನಾರ್ದನ ರೆಡ್ಡಿ, ರಾಮುಲು ಅವರು ಈಗಾಗಲೇ ವಾಲ್ಮೀಕಿ ಪುತ್ಥಳಿ ಇಟ್ಟಿಸಿದ್ದಾರೆ. ಆದರೂ ಈಗ ರಾಜಕೀಯ ತೆವಲಿಗೆ ಬ್ಯಾನರ್ ಪೋಸ್ಟ್ ಹಾಕಿಸಿ ಗಲಾಟೆ ಮಾಡಿದ್ದಾರೆ ಎಂದರು.
ಸಿಎಂ ಹಾಗೂ ಗೃಹ ಸಚಿವರು ದ್ವೇಷ ಭಾಷಣ ಕಾಯ್ದೆ ತರಲು ಯೋಚನೆ ಮಾಡುತ್ತಾರೆ. ಮೊದಲು ನಿಮ್ಮ ಶಾಸಕ ನಾರಾ ಭರತ್ ರೆಡ್ಡಿಯನ್ನು ಮೊದಲು ಒದ್ದು ಒಳಗೆ ಹಾಕಿ. ನಿಮಗೆ ತಾಕತ್ತಿದ್ದರೆ ಮೊದಲು ಒದ್ದು ಒಳಗೆ ಹಾಕಿ, ಹೈಕೋರ್ಟ್ ಜಡ್ಜ್ ಮೂಲಕ ಸರಿಯಾದ ತನಿಖೆ ಮಾಡಿಸಿ. ಮುಂದೆ ಮತ್ತೆ ಈ ರೀತಿ ಆಗಬಾರದು ಎನ್ನುದಾದರೆ ಮೊದಲು ಸರಿಯಾಗಿ ತನಿಖೆ ಮಾಡಿಸಿ ಎಂದು ವಿಜಯೇಂದ್ರ ಹೇಳಿದರು.
ರಾಜಸ್ಥಾನದ ಡುಂಗರ್ಪುರದಲ್ಲಿ ಮೂವರು ಸಹೋದರರು ಮತ್ತು ಸಂಬಂಧಿ ನೀರುಪಾಲು; ಇಬ್ಬರು ಬಾಲಕರ ರಕ್ಷಣೆ
ಕತಾರ್ನ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್ ಥಾನಿ 74ನೇ ವಯಸ್ಸಿನಲ್ಲಿ ನಿಧನ; ನಾಲ್ಕು ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಣೆ
ದಕ್ಷಿಣ ಭಾರತದ ಕೋಗಿಲೆ ಎಸ್. ಜಾನಕಿ ನಿಧನ; 88ನೇ ವಯಸ್ಸಿನಲ್ಲಿ ಕೊನೆಯುಸಿರು
ಮಹಾರಾಷ್ಟ್ರದಲ್ಲಿ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡ್ಡಿ; ಎಸ್ಸಿಆರ್ 25 ರೈಲುಗಳ ಮಾರ್ಗ ಬದಲಾವಣೆ
ಖಾನಾಪೂರ ಶಾಸಕ ಹಲಗೇಕರ ಅಡ್ಡ ಮತದಾನ ಮಾಡಿದರಾ?, ಅಂಜಲಿ ನಿಂಬಾಳಕರ್ ಮಾತಿನ ಮರ್ಮವೇನು
ಲಕ್ಷ್ಮಣ್ ಉಟೇಕರ್ ಅವರ ಮುಂಬರುವ ಚಿತ್ರದಲ್ಲಿ ಹೃತಿಕ್ ರೋಷನ್ ಅಭಿನಯಿಸುವ ಸಾಧ್ಯತೆ 