‘ವಂದೇ ಮಾತರಂ ಗೀತೆ ತುಂಡರಿಸಿದ್ದು ಕಾಂಗ್ರೆಸ್’
'Congress tore up Vande Mataram'
ನವದೆಹಲಿ: ಲೋಕಸಭೆಯಲ್ಲಿ ಸೋಮವಾರ ವಂದೇ ಮಾತರಂ ಕುರಿತ ಚರ್ಚೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕಾಂಗ್ರೆಸ್ ಮತ್ತು ಜವಾಹರಲಾಲ್ ನೆಹರು ಅವರನ್ನು ಉಲ್ಲೇಖಿಸಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ”ಕಾಂಗ್ರೆಸ್ ವಂದೇ ಮಾತರಂ ಅನ್ನು ತುಕ್ಡೇ ತುಕ್ಡೇ ಮಾಡಿತು” ಎಂದು ಕಿಡಿ ಕಾರಿದ್ದಾರೆ.
”ಜವಾಹರಲಾಲ್ ನೆಹರು ವಂದೇ ಮಾತರಂ ಮುಸ್ಲಿಮರನ್ನು ಪ್ರಚೋದಿಸಬಹುದು ಎಂದು ಹೇಳಿದ್ದರು” ಎಂದು ಪ್ರಧಾನಿ ಮೋದಿ ಹೇಳಿದರು. ಲೋಕಸಭೆಯಲ್ಲಿ "ಶೇಮ್ ಶೇಮ್.. ಎಂಬ ಘೋಷಣೆಗಳು ಮೊಳಗುತ್ತಿದ್ದಂತೆ, ಪ್ರಧಾನಿ ಮೋದಿ, "ಕೆಲವು ಶಕ್ತಿಗಳು ಕಳೆದ ಶತಮಾನದಲ್ಲಿ ರಾಷ್ಟ್ರೀಯ ಗೀತೆಗೆ ವಿಶ್ವಾಸಘಾತ ಮಾಡಿವೆ” ಎಂದು ತಿರುಗೇಟು ನೀಡಿದರು.
"ನಮ್ಮ ಮುಂದಿನ ಪೀಳಿಗೆಗೆ ಯಾವುದನ್ನು ಯಾರು ಮಾಡಿದರು ಎಂದು ಹೇಳುವುದು ನಮ್ಮ ಕರ್ತವ್ಯ. 1937 ರಲ್ಲಿ ಮೊಹಮ್ಮದ್ ಅಲಿ ಜಿನ್ನಾ ನೇತೃತ್ವದ ಮುಸ್ಲಿಂ ಲೀಗ್ ವಂದೇ ಮಾತರಂ ವಿರುದ್ಧ ಅಭಿಯಾನ ನಡೆಸಿತು. ಆದರೆ ಕಾಂಗ್ರೆಸ್ ಮತ್ತು ಜವಾಹರಲಾಲ್ ನೆಹರು ಅವರನ್ನು ವಿರೋಧಿಸುವ ಬದಲು ವಂದೇ ಮಾತರಂ ಬಗ್ಗೆ ತನಿಖೆ ನಡೆಸಲು ಪ್ರಾರಂಭಿಸಿದರು" ಎಂದು ಪ್ರಧಾನಿ ಮೋದಿ ಹೇಳಿದರು.
"ಜಿನ್ನಾ ವಂದೇ ಮಾತರಂಗೆ ವಿರೋಧ ವ್ಯಕ್ತಪಡಿಸಿದ ನಂತರ ಪಂಡಿತ್ ಜವಾಹರಲಾಲ್ ನೆಹರು ಸುಭಾಷ್ ಚಂದ್ರ ಬೋಸ್ ಅವರಿಗೆ ಪತ್ರ ಬರೆದು, ಅದರಲ್ಲಿ ವಂದೇ ಮಾತರಂನ ಹಿನ್ನೆಲೆಯನ್ನು ತಾವು ಓದಿದ್ದೇನೆ ಮತ್ತು ಅದು ಮುಸ್ಲಿಮರನ್ನು ಕೆರಳಿಸಬಹುದು ಎಂದು ಭಾವಿಸಿದ್ದೇನೆ ಎಂದು ಹೇಳಿದ್ದಾರೆ. ಬಂಕಿಮ್ ಚಂದ್ರ ಚಟರ್ಜಿ ಅವರ ಬಂಗಾಳದಲ್ಲಿಯೂ ವಂದೇ ಮಾತರಂ ಬಳಕೆಯನ್ನು ಪರೀಶೀಲಿಸುವುದಾಗಿ ಹೇಳಿದ್ದರು" ಎಂದು ಮೋದಿ ಹೇಳಿದರು.
ತುರ್ತು ಪರಿಸ್ಥಿತಿ ವಿಚಾರ ಪ್ರಸ್ತಾಪಿಸಿದ ಪ್ರಧಾನಿ ಮೋದಿ, ’ವಂದೇ ಮಾತರಂ 50 ವರ್ಷಗಳನ್ನು ಪೂರೈಸಿದಾಗ, ಭಾರತ ಬ್ರಿಟಿಷ್ ಆಳ್ವಿಕೆಯಲ್ಲಿತ್ತು. ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ, ಭಾರತ ತುರ್ತು ಪರಿಸ್ಥಿತಿಯ ಕಪಿಮುಷ್ಠಿಯಲ್ಲಿತ್ತು. ಕಾಂಗ್ರೆಸ್ ಸಂವಿಧಾನದ ಉಸಿರುಗಟ್ಟಿಸಿತು” ಎಂದು ಕಿಡಿ ಕಾರಿದರು.
ವಂದೇ ಮಾತರಂ’ ಗೀತೆಯ 150ನೇ ವಾರ್ಷಿಕೋತ್ಸವ ಕುರಿತು ಲೋಕಸಭೆಯಲ್ಲಿ ಸೋಮವಾರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ’ತುರ್ತು ಪರಿಸ್ಥಿತಿಯಿಂದ ಸಂವಿಧಾನವನ್ನು ’ಹತ್ತಿಕ್ಕಲಾಯಿತು’ ಮತ್ತು ರಾಷ್ಟ್ರವು ಸರಪಳಿಯಲ್ಲಿ ಬಂಧಿಸಲ್ಪಟ್ಟಿತು ಎಂದು ಹೇಳಿದರು.
ಲೋಕಸಭೆಯಲ್ಲಿ ’ವಂದೇ ಮಾತರಂ’ ಕುರಿತ ಚರ್ಚೆಗೆ ಇಂದು 10 ಗಂಟೆ ಮೀಸಲಿಡಲಾಗಿದ್ದು, ಚರ್ಚೆಯನ್ನು ಪ್ರಾರಂಭಿಸಿದ ಮೋದಿ, ವಂದೇ ಮಾತರಂ ಬ್ರಿಟಿಷ್ ದಬ್ಬಾಳಿಕೆಯ ಹೊರತಾಗಿಯೂ ಬಂಡೆಯಂತೆ ನಿಂತು ಏಕತೆಗೆ ಪ್ರೇರಣೆ ನೀಡಿತು ಎಂದು ಗಮನ ಸೆಳೆದರು.
’ವಂದೇ ಮಾತರಂ’ ಗೀತೆಯು 100 ವರ್ಷಗಳನ್ನು ಪೂರೈಸಿದಾಗ, ರಾಷ್ಟ್ರವು ತುರ್ತು ಪರಿಸ್ಥಿತಿಯಿಂದ ಬಂಧಿಸಲ್ಪಟ್ಟಿತ್ತು. ಆ ಸಮಯದಲ್ಲಿ, ಸಂವಿಧಾನದ ಕತ್ತು ಹಿಸುಕಲಾಯಿತು ಮತ್ತು ದೇಶಭಕ್ತಿಗಾಗಿ ಬದುಕಿದವರನ್ನು ಜೈಲಿಗೆ ತಳ್ಳಲಾಯಿತು. ತುರ್ತು ಪರಿಸ್ಥಿತಿಯು ನಮ್ಮ ಇತಿಹಾಸದಲ್ಲಿ ಒಂದು ಕರಾಳ ಅಧ್ಯಾಯವಾಗಿತ್ತು. ಈಗ ವಂದೇ ಮಾತರಂನ ಶ್ರೇಷ್ಠತೆಯನ್ನು ಪುನಃಸ್ಥಾಪಿಸಲು ನಮಗೆ ಅವಕಾಶವಿದೆ ಮತ್ತು ಈ ಅವಕಾಶವನ್ನು ಕಳೆದುಹೋಗಲು ಬಿಡಬಾರದು ಎಂದು ನಾನು ನಂಬುತ್ತೇನೆ’ ಎಂದು ಮೋದಿ ಹೇಳಿದರು.
ವಂದೇ ಮಾತರಂ ಗೀತೆಯು ಭಾರತದ ಸ್ವಾತಂತ್ರ್ಯ ಚಳವಳಿಗೆ ಶಕ್ತಿ ತುಂಬಿತು ಮತ್ತು ಸ್ಫೂರ್ತಿ ನೀಡಿತು ಮತ್ತು ಧೈರ್ಯ ಮತ್ತು ದೃಢಸಂಕಲ್ಪದ ಹಾದಿಯನ್ನು ತೋರಿಸಿತು. ಇಂದು ಆ ಪವಿತ್ರ ವಂದೇ ಮಾತರಂ ಅನ್ನು ಈ ಸದನದಲ್ಲಿ ನಮಗೆಲ್ಲರಿಗೂ ಸ್ಮರಿಸುವುದು ಒಂದು ದೊಡ್ಡ ಸೌಭಾಗ್ಯ. ವಂದೇ ಮಾತರಂ 150 ವರ್ಷಗಳನ್ನು ಪೂರೈಸುವ ಐತಿಹಾಸಿಕ ಸಂದರ್ಭವನ್ನು ನಾವು ವೀಕ್ಷಿಸುತ್ತಿರುವುದು ನಮಗೆ ಹೆಮ್ಮೆಯ ವಿಷಯ ಎಂದರು.
1875 ರಲ್ಲಿ ಬಂಕಿಮ್ ಚಂದ್ರ ಚಟರ್ಜಿ ಅವರು ಬರೆದ ವಂದೇ ಮಾತರಂ ಗೀತೆಯ 150 ವರ್ಷಗಳು ನಮ್ಮ ಹಿಂದಿನ ಹೆಮ್ಮೆ ಮತ್ತು ಆ ಮಹಾನ್ ಭಾಗವನ್ನು ಪುನಃಸ್ಥಾಪಿಸಲು ಒಂದು ಅವಕಾಶ.ಈ ಹಾಡು 1947 ರಲ್ಲಿ ನಮಗೆ ಸ್ವಾತಂತ್ರ್ಯ ಪಡೆಯಲು ಸ್ಫೂರ್ತಿ ನೀಡಿತ್ತು" ಎಂದು ಮೋದಿ ಹೇಳಿದರು. ವಂದೇ ಮಾತರಂ ಕುರಿತು ಉಭಯ ಸದನಗಳಲ್ಲಿ ವಿಶೇಷ ಚರ್ಚೆಗಾಗಿ ಸಂಸತ್ತು 10 ಗಂಟೆಗಳ ಕಾಲ ಮೀಸಲಿಟ್ಟಿದ್ದು. ವಿಪಕ್ಷದ ಪರವಾಗಿ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಚರ್ಚೆಯ ನೇತೃತ್ವ ವಹಿಸಲಿದ್ದಾರೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 