ಮಾಂಜರಿ: ಮಕ್ಕಳಿಗೆ ಸ್ಕೂಲ್ ಬ್ಯಾಗ ಹೊರೆ ತಪ್ಪಿಲ್ಲ

ಲೋಕದರ್ಶನ ವರದಿ

ಮಾಂಜರಿ 06: ಇಂದು ಶಿಕ್ಷಣ ಕ್ಷೇತ್ರದಲ್ಲಿ ಅಮೋಲಾಗ್ರ ಬದಲಾವಣೆಯಾಗುತ್ತಿದೆ. ಆದರೆ ಶಾಲೆಗೆ ಹೋಗುವ ಮಕ್ಕಳಿಗೆ ಮಾತ್ರ ಸ್ಕೂಲ್ ಬ್ಯಾಗ ಹೊರೆ ತಪ್ಪಿದ್ದಲ್ಲ. ಇತ್ತೀಚಿನ ವರ್ಷಗಳಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸ್ಪಧರ್ೆ ಏರ್ಪಟ್ಟಿದ್ದರಿಂದ ಶಿಕ್ಷಣ ಸಂಸ್ಥೆಗಳು ತಮ್ಮದೇ ಆದ ಶೈಲಿಯಲ್ಲಿ ಸಂಸ್ಥೆಗಳನ್ನು ಬೆಳೆಸಿ ಹೆಸರು ಮಾಡುವಲ್ಲಿ ಮುಂದಾಗುತ್ತಿದ್ದಾರೆ. 

ಆದರೆ ಮಕ್ಕಳ ಮೇಲೆ ಶಾಲಾ ಪುಸ್ತಕಗಳ ಹೊರೆ ಬೀಳುತ್ತಿರುವತ್ತ ಸಂಸ್ಥೆ ಗಮನ ಹರಿಸುತ್ತಿಲ್ಲ ಎಂದು ಪಾಲಕರು ಆರೋಪಿಸುತ್ತಿದ್ದು, ಮಕ್ಕಳ ಮೇಲಿನ ಶಾಲಾ ಬ್ಯಾಗ್ಗಳ ಹೊರೆ ಹಂತಕನ್ನುಗುನವಾಗಿರಲಿ ಎಂಬುದೇ ಅಭಿಪ್ರಾಯವಾಗಿದೆ. 

ಮಕ್ಕಳು ಆಟವಾಡುವ ದಿನಗಳಲ್ಲಿ ಶಾಲೆಯ ಹೊರೆಗಳು ಹೆಚ್ಚಾಗಿದ್ದರಿಂದ ಮಕ್ಕಳು 24 ಗಂಟೆಗಳ ಕಾಲ ಪುಸ್ತಕಗಳಲ್ಲಿಯೇ ಅಡಕವಾಗುತ್ತಾರೆ. ಮುಂಜಾನೆಯಿಂದ ಸಾಯಂಕಾಲದವರೆಗೆ ಶಾಲೆಯಲ್ಲಿ ಕಲಿತು ಮನೆಗೆ ಬಂದಾಗ ಶಾಲೆಯಲ್ಲಿ ನೀಡಿದ ಮನೆಕೆಲಸ ಮಾಡುತ್ತಾರೆ. ಇದರಿಂದ ಮಕ್ಕಳ ಆರೋಗ್ಯದ ಮೇಲೆ ವಿಪರೀತ ಪರಿಣಾಮ ಬೀರುತ್ತಿದ್ದು, ಈ ಕುರಿತು ಶಿಕ್ಷಣ ಇಲಾಖೆಯೂ ಸಹ ಗಮನ ಹರಿಸುವ ಅಗತ್ಯವಿದೆ ಎಂದು ಪಾಲಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

ಇಂದಿನ ಸ್ಪಧರ್ಾತ್ಮಕ ಯುಗದಲ್ಲಿ ವಿದ್ಯಾಥರ್ಿಗಳು ಸವರ್ಾಂಗೀಣ ಜ್ಞಾನ ಪಡೆಯುವ ಅವಶ್ಯಕತೆಯಿದೆ. ಆದ್ದರಿಂದ ಮಕ್ಕಳು ಭಾರ ಹೊತ್ತುಕೊಂಡು ಸಹನೆಯಿಂದ ಶಾಲೆಗೆ ಹೋಗುತ್ತಿರುವ ದೃಶ್ಯಗಳನ್ನು ನೊಡಿದರೆ ಪಾಲಕರ ಮೈ ಜುಮ್ಮೆನ್ನುತ್ತದೆ. ಮಕ್ಕಳ ತೂಕದ ಅರ್ಧದಷ್ಟು ಶಾಲಾ ಬ್ಯಾಗಗಳ ಹೊರೆ ಇರುವುದರಿಂದ ಮಕ್ಕಳು ದಿನನಿಂದ ದಿನಕ್ಕೆ ಬಾಗುತ್ತಿದ್ದಾರೆ ಎಂದು ಪಾಲಕರ ಆರೋಪವಾಗಿದೆ. ಮಕ್ಕಳಿಗೆ ಶಾಲಾ ಪಠ್ಯ ಪುಸ್ತಕಗಳ ಹೊರೆ ಹೇಗೆ ಕಡಿಮೆ ಮಾಡಬೇಕೆಂಬುದನ್ನು ಶಿಕ್ಷಣ ಇಲಾಖೆ ಹಾಗೂ ಸಂಸ್ಥೆಗಳು ಚಿಂತನೆ ಮಡುವ ಅಗತ್ಯವಿದೆ ಎಂದು ಪಾಲಕರ ಮಾತಾಗಿದೆ. 

ಒಂದನೇಯ ತರಗತಿಯ ವಿದ್ಯಾಥರ್ಿಯ ಬ್ಯಾಗನ ತೂಕ ಸುಮಾರು 4 ಕೆ.ಜಿ., ಎರಡನೇಯ ತರಗತಿಯ ವಿದ್ಯಾಥರ್ಿಯ ಬ್ಯಾಗನ ತೂಕ ಸುಮಾರು 5 ಕೆ.ಜಿ., ಮೂರನೇಯ ತರಗತಿಯ ವಿದ್ಯಾಥರ್ಿಯ ಬ್ಯಾಗನ ತೂಕ ಸುಮಾರು 6 ಕೆ.ಜಿ., ನಾಲ್ಕನೇಯ ತರಗತಿಯ ವಿದ್ಯಾಥರ್ಿಯ ಬ್ಯಾಗನ ತೂಕ ಸುಮಾರು 7-8 ಕೆ.ಜಿ., ಐದನೇಯ ತರಗತಿಯ ವಿದ್ಯಾಥರ್ಿಯ ಬ್ಯಾಗನ ತೂಕ ಸುಮಾರು 8-9 ಕೆ.ಜಿ., ಆರನೇಯ ತರಗತಿಯ ವಿದ್ಯಾಥರ್ಿಯ ಬ್ಯಾಗನ ತೂಕ ಸುಮಾರು 8-9 ಕೆ.ಜಿ., ಏಳನೇಯ ತರಗತಿಯ ವಿದ್ಯಾಥರ್ಿಯ ಬ್ಯಾಗನ ತೂಕ ಸುಮಾರು 10 ಕೆ.ಜಿ., 8-10 ನೇಯ ತರಗತಿಯ ವಿದ್ಯಾಥರ್ಿಯ ಬ್ಯಾಗನ ತೂಕ ಸುಮಾರು 10-12 ಕೆ.ಜಿ. ಯಷ್ಟು ಇರುತ್ತಿದ್ದು, ಬ್ಯಾಗ ಹೊತ್ತುಕೊಂಡು ಹೋಗುವುದು ಮಕ್ಕಳಿಗೆ ಕಷ್ಟದ ಕೆಲಸವೇ ಸರಿ. 

ಗ್ರಾಮೀಣ ಪ್ರದೇಶದ ಬಹುತೇಕ ಮಕ್ಕಳು ಕಾಲ್ನಡಿಗೆಯಿಂದಲೇ ಮನೆಗೆ ತೆರಳುತ್ತಾರೆ. ಅದರಲ್ಲೂ ಹೊಲಗದ್ದೆಗಳಿಗೆ ಶಾಲಾ ಬ್ಯಾಗಗಳನ್ನು ಹೋಗುವ ಮಕ್ಕಳ ಪರಿಸ್ಥಿತಿ ನೋಡಿದರೆ ಅಯ್ಯೋ ಪಾಪ ಎನ್ನಿಸುತ್ತದೆ. ಈ ಮಕ್ಕಳ ಹಿತದೃಷ್ಟಿಯಿಂದ ಶಿಕ್ಷಣ ಇಲಾಖೆ ಮತ್ತು ಸಂಸ್ಥೆಗಳು ಮಕ್ಕಳ ಹೆಗಲ ಮೇಲೆ ಇರುವ ಸ್ಕೂಲ್ ಬ್ಯಾಗ ಹೊರೆ ಎಷ್ಟು ಕಡಿಮೆ ಮಾಡಲು ಸಾಧ್ಯವಿದೆಯೋ ಅಷ್ಟು ಮಾಡಲು ಮುಂದಾಗಬೇಕು ಅಥವಾ ಸ್ಕೂಲ್ಗಳಲ್ಲಿಯೇ ಮಕ್ಕಳಿಗಾಗಿ ಪುಸ್ತಕ ಮತ್ತು ನೋಟಬುಕ್ಗಳನ್ನು ಇಡಲು ಲಾಕರ್ಗಳನ್ನು ಸ್ಥಾಪಿಸಿ ಅನುಕೂಲ ಮಾಡಿಕೋಡುವಂತೆ ಪಾಲಕರು ಒತ್ತಾಯಿಸುತ್ತಿದ್ದಾರೆ.