‘ಭಗವಂತನ ನಾಮಸ್ಮರಣೆಯಿಂದ ಪುಣ್ಯ ಪ್ರಾಪ್ತಿ’
'Attainment of merit by chanting the name of the Lord'
ಜಮಖಂಡಿ 12: ಭಗವಂತನ ನಾಮಸ್ಮರಣೆ ಮಾಡುವದರಿಂದ ಪುಣ್ಯ ಪ್ರಾಪ್ತಿ ದೊರೆಯಲು ಸಾಧ್ಯ. ಯೋಗಿಗಳು ಸಾಧನೆ ಮಾಡದಂತ ಸಾಧ್ಯನೆಯನ್ನು ಸಂಗಮೇಶ್ವರ ಮಹಾರಾಜರು ಸಾಧಿಸಿದ್ದಾರೆ ಎಂದು ಶ್ರೀಶೈಲ ಪೀಠದ ಸಿದ್ದರಾಮ ಪಂಡಿತಾರಾಧ್ಯ ಜಗದ್ಗುರುಗಳು ಹೇಳಿದರು.
ತಾಲ್ಲೂಕಿನ ಹಿಪ್ಪರಗಿ ಗ್ರಾಮದ ಸದ್ಗುರು ಸಂಗಮೇಶ್ವರ ಮಹಾರಾಜರ 94ನೇ ವರ್ಷದ ಪುಣ್ಯಾರಾಧನೆ ಎರಡನೇದಿನದ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನದಲ್ಲಿ ಮಾತನಾಡಿದ ಅವರು. ಇಂಚಗೇರಿ ಸಂಪ್ರದಾಯ ಆಧ್ಯಾತ್ಮಿಕತೆಗೆ ಸಾಮಾಜಿಕವಾಗಿ ಹೆಚ್ಚು ಮಹತ್ವ ಕೊಡುತ್ತ ಬಂದಿದೆ. ಅಂತೆಯೇ 94 ನೇ ವರ್ಷದ ಪುಣ್ಯಾರಾಧನೆ ವಿಜೃಂಭಣೆಯಿಂದ ಜರುಗುತ್ತಿದೆ ಎಂದರು
ಉಸಿರಿನ ಮೂಲಕ ಭಗವಂತನನ್ನು ಕಾಣಲು ಸಾಧ್ಯ ಎಂಬುದನ್ನು ಇಂಚಗೇರಿ ಸಂಪ್ರದಾಯ ತೋರಿಸಿಕೊಟ್ಟಿದೆ.ದೇವರನ್ನು ಜ್ಞಾನ, ಭಕ್ತಿ, ವೈರಾಗ್ಯ ಉಪಾಸನಾ, ನಾಮ ಸಂಕೀರ್ತನ ಹಲವು ಮಾರ್ಗಗಳನ್ನು ಹೇಳಿದ್ದಾರೆ. ಒಬ್ಬನೇ ದೇವರಿದ್ದು ಮನುಷ್ಯ ರುಚಿ ಬೇರೆ ಆಗಿದ್ದು ಅಭಿರುಚಿ ಬೇರೆ ಬೇರೆ ಆಗಿರುತ್ತದೆ. ಒಂದೇ ಸಕ್ಕರೆಯಿಂದ ಮಾಡಿದ ಪದಾರ್ಥ ಬೇರೆ ಬೇರೆ ಆಗಿರುವಂತೆ ಚಿಕಿತ್ಸಕ ಬುದ್ದಿಯಿಂದ ಜ್ಞಾನ ಮಾರ್ಗ,ಧ್ಯಾನಕ್ಕೆ ಅತ್ಯಂತ ಮಹತ್ವ ನೀಡಿದ ಸಂಪ್ರದಾಯ ಅದುವೇ ಇಂಚಗೇರಿ ಸಂಪ್ರದಾಯ.ದೇವರನ್ನು ಸುಲಭವಾಗಿ ಅಲ್ಲಗಳೆಯಲು ಸಾಧ್ಯವಿಲ್ಲ. ಈ ಜಗತ್ತಿನ ಪ್ರತಿಯೊಂದನ್ನು ನಿಯಂತ್ರಿಸುವ ಶಕ್ತಿಯೇ ಭಗವಂತ.ಜ್ಞಾನದ ಕಣ್ಣಿನಿಂದ ಭಗವಂತನನ್ನು ಕಾಣಬೇಕು.ದೇವರನ್ನು ಕಾಣಬೇಕು ಎಂಬ ಉತ್ಕಟ ಇಚ್ಛೆ ನಮಗೆ ಬೇಕು ಎಂದರು.
ಸುಕ್ಷೇತ್ರ ಹಿಪ್ಪರಗಿ ಸಂಗಮೇಶ್ವರ ಮಠದ ಪೀಠಾಧಿಪತಿ ಸದ್ಗುರು ಪ್ರಭುಜೀ ಮಹಾರಾಜರು .ಮಾತನಾಡಿ. ದಿನ,ದುರ್ಬಲರು,ನಿಕೃಷ್ಟರನ್ನು ಉದ್ದಾರ ಮಾಡಿದ ಕೀರ್ತಿ ಸಂಗಮೇಶ್ವರ ಮಹಾರಾಜರಿಗೆ ಸಲ್ಲುತ್ತದೆ. ಭಗವಂತ ಹೊರಗಿಲ್ಲ, ನಮ್ಮೊಳಗಿದ್ದಾನೆ. ಆ ಭಗವಂತನನ್ನು ಮರೆತಿದ್ದೇವೆ.ಬಹಿರಮುಖವಾಗಿ ಹರಿಯುವ ಮನಸ್ಸನ್ನು ನಿಯಂತ್ರಣ ಮಾಡುವುದು ಶ್ರೇಷ್ಠ. ಪ್ರತಿಯೊಂದು ಶ್ವಾಸ ಬಿಡದೆ ಧ್ಯಾನ ಮಾಡುವುದು. ಮಲಿನ ಮನಸ್ಸನ್ನು ಸ್ವಚ್ಛ ಗೊಳಿಸುವುದೇ ಧ್ಯಾನ. ಇಂದಿನ ಹೊಡೆದಾಟ, ಬಡಿದಾಟ, ಯುದ್ಧ ಎಲ್ಲವನ್ನು ಕಡೆಗಣಿಸುವ ಶಕ್ತಿ ಇಂಚಗೇರಿ ತತ್ವದಲ್ಲಿದೆ.ಇಂದು ನಾವು ನೀವೆಲ್ಲ ಸಂಗಮೇಶ್ವರ ಮಹಾರಾಜರಂತೆ ಸೇವಾ ಮನೋಭಾವನೆಯಿಂದ ದುಡಿದದ್ದಾದರೆ ಭಗವಂತ ಬೇಡಿದ ಎಲ್ಲವನ್ನು ಪೂರೈಸುತ್ತಾನೆ ಎಂದು ಆರ್ಶೀವಚನ ನೀಡಿದರು.
ವೇದಿಕೆಯಲ್ಲಿ ಶೆಗುಣಸಿ ಹಣಮಂತಪ್ಪ ಮಹಾರಾಜರು,ವಿರೂಪಾಕ್ಷ ಮಹಾರಾಜರು ಸಾಲಹಳ್ಳಿ, ಆನಂದಸಿದ್ದ ಮಹಾರಾಜರು, ಸುದರ್ಶನ ಮಹಾರಾಜರು, ಬಸಮ್ಮ ತಾಯಿ, ಲಾಯಪ್ಪ ಮಹಾರಾಜರು, ಶಂಕರ ಮಹಾರಾಜರು ಸೇರಿದಂತೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯ ಹೀಗೆ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತಾದಿಗಳು,ದಿಂಡಿ ಪಲ್ಲಕ್ಕಿ ಪಾದಯಾತ್ರಿಕರು ಪಾಲ್ಗೊಂಡಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 