‘ಕೃಷಿ ನವೋದ್ಯಮಗಳಿಂದ ಕೃಷಿಯಲ್ಲಿ ಆಧುನಿಕರಣ ಸಾಧನೆ’

‘ಕೃಷಿ ನವೋದ್ಯಮಗಳಿಂದ ಕೃಷಿಯಲ್ಲಿ ಆಧುನಿಕರಣ ಸಾಧನೆ’ 'Achievement of modernization in agriculture through agricultural innovations'

ಧಾರವಾಡ 23: ನಗರದ ಕೃಷಿ ವಿಶ್ವವಿದ್ಯಾಲಯದ ಕೃಷಿಕ್‌ಹಿಅಗ್ರಿ ಬಿಸಿನೆಸ್ ಇನ್ಕ್ಯೂಬೇಟರ್, (ಆರ್‌.ಕೆ.ವಿ.ವೈ)ಹಿಇನ್ನೋವೇಷನ್ ಮತ್ತು ಕೃಷಿಹಿಉದ್ಯಮಶೀಲತೆ ಯೋಜನೆಯಡಿ ಹನ್ನೊಂದನೇ ಹಂತದ (ಘಿಋ ಅಠಠಣ) ನವೋದ್ಯಮಿಗಳೊಂದಿಗೆ ಒಪ್ಪಂದದ ಬಡಂಬಡಿಕೆಯ ಪತ್ರ (ಎಂಒಎ) ಮೊದಲನೇ ಕಂತು ಅನುದಾನ ವಿತರಣೆ ಕಾರ್ಯಕ್ರಮವು ಕೃಷಿ ವಿಶ್ವವಿದ್ಯಾಲಯದಲ್ಲಿ ದಿ. 23 (ಶುಕ್ರವಾರ)ರಂದು ಆಯೋಜಿಸಲಾಯಿತು.  

ಈ ಕಾರ್ಯಕ್ರಮದಲ್ಲಿ ಒಟ್ಟು 25 ಕೃಷಿ ನವೋದ್ಯಮಗಳಿಗೆ ಮೊದಲ ಹಂತದ ಸಹಾಯಧನವಾಗಿ ರೂ. 126.5 ಲಕ್ಷವನ್ನು ಮಂಜೂರು ಮಾಡಿ ಹದಿನೈದು ಪ್ರಿಹೀಸೀಡ್ ಹಂತದ ನವೋದ್ಯಮಿಗಳಿಗೆ (ರೂ. 48.5 ಲಕ್ಷ) ಹಾಗೂ ಹತ್ತು ಸೀಡ್ ಹಂತದ ನವೋದ್ಯಮಿಗಳಿಗೆ (ರೂ.78 ಲಕ್ಷ) ಅನುದಾನ ನೀಡಲಾಯಿತು. 

ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ಕೃಷಿಕ್‌ಹಿಅಗ್ರಿ ಬಿಸಿನೆಸ್ ಇನ್ಕ್ಯೂಬೇಟರ್, (ಆರ್‌.ಕೆ.ವಿ.ವೈ)ಹಿಇನ್ನೋವೇಷನ್ ಮತ್ತು ಕೃಷಿಹಿಉದ್ಯಮಶೀಲತೆ ಯೋಜನೆಯಡಿ ಹನ್ನೊಂದನೇ ಹಂತದ ನವೋದ್ಯಮಗಳಿಗೆ ಬಡಂಬಡಿಕೆಯ ಪತ್ರ ಹಸ್ತಾಂತರ ಕಾರ್ಯಕ್ರಮವನ್ನು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಶಿಕ್ಷಣ ನಿರ್ದೇಶಕರಾದ ಡಾ.ಽಽ ಬಿ.ಡಿ. ಬಿರಾದಾರ್ ನವೋದ್ಯಮ ಸಂಸ್ಥಾಪಕರನ್ನು ಉದ್ದೇಶಿಸಿ ಮಾತನಾಡುತ್ತಾ, ಈಗ ಭಾರತ ದೇಶದಲ್ಲಿ ಎಲ್ಲ ತರಹದ ಆಧುನಿಕ ತಂತ್ರಜ್ಞಾನ ಲಭ್ಯವಿರುತ್ತದೆ. ಇದು ಕೃಷಿ ನವೋದ್ಯಮಿಗಳಿಂದ ತೀವ್ರಗತಿಯಲ್ಲಿ ಲಭ್ಯವಾಗಿರುತ್ತದೆ. ಇದರಿಂದ ರೈತರ ಹಲವು ಸಮಸ್ಯೆಗಳಿಗೆ ಪರಿಹಾರ ನೀಡುವುದಲ್ಲದೆ ಆರ್ಥಿಕ ಅಭಿವೃದ್ಧಿ ಸಾಧ್ಯ. ಕೃಷಿ ವಲಯದಲ್ಲಿ ಎದುರಾಗುತ್ತಿರುವ ವಿವಿಧ ಸಮಸ್ಯೆಗಳಿಗೆ ನವೀನ ಆಲೋಚನೆಗಳು ಮತ್ತು ತಂತ್ರಜ್ಞಾನಧಾರಿತ ಪರಿಹಾರಗಳನ್ನು ಕೃಷಿ ನವೋದ್ಯಮಗಳು  ಸಮರ್ಥವಾಗಿ ಒದಗಿಸಬಲ್ಲವು. 

ಕೃಷಿಕ್‌ಹಿಅಗ್ರಿ ಬಿಸಿನೆಸ್ ಇನ್ಕ್ಯೂಬೇಟರ್, ಆರ್‌.ಕೆ.ವಿ.ವೈಹಿಇನ್ನೋವೇಷನ್ ಮತ್ತು ಕೃಷಿಹಿಉದ್ಯಮಶೀಲತೆ ಯೋಜನೆಯಡಿ ಹನ್ನೊಂದನೇ 11ನೇ ತಂಡದಲ್ಲಿ ಕೃಷಿ ಯಂತ್ರೋಪಕರಣಗಳು (5 ನವೋದ್ಯಮಗಳು); ಆಹಾರ ಸಂಸ್ಕರಣೆ ಮತ್ತು ಮೌಲ್ಯವರ್ಧನೆ (5 ನವೋದ್ಯಮಗಳು); ಂಋ, ಒಐ, ಋರಖಿ ಮತ್ತು ಂಕಕ (8 ನವೋದ್ಯಮಗಳು); ತ್ಯಾಜ್ಯದಿಂದ ಸಂಪತ್ತು (5 ನವೋದ್ಯಮಗಳು); ಪಶುಸಂಗೋಪನೆ ಮತ್ತು ಹೈನುಗಾರಿಕೆ (1 ನವೋದ್ಯಮಗಳು) ಮತ್ತು ಕೃಷಿ ಪರಿಕರಗಳ (1 ನವೋದ್ಯಮಗಳು) ಮತ್ತು ಇತರ ಕೃಷಿ ಆಧಾರಿತ ನವೋದ್ಯಮಗಳನ್ನು ಉತ್ತೇಜಿಸಲಾಗುತ್ತಿದೆ. 

ಕೃಷಿಕ್‌ಹಿನವೋದ್ಯಮ ಪೋಷಣ ಕೇಂದ್ರದ ಯೋಜನಾ ಮುಖ್ಯಸ್ಥರಾದ ಡಾ.ಽಽ ಎಸ್‌. ಎಸ್‌. ಡೊಳ್ಳಿ ಅವರು ಕಾರ್ಯಕ್ರಮಕ್ಕೆ ಸ್ವಾಗತ ಕೋರಿ, ಯೋಜನೆಯ ಗುರಿ ಮತ್ತು ಸಾಧನೆಗಳ ಕುರಿತು ವಿವರಿಸಿದರು. ಈ ಯೋಜನೆಯ ಭಾಗವಾಗಿ, ತಾಂತ್ರಿಕ ಮಾರ್ಗದರ್ಶನ, ಕಾರ್ಯತಂತ್ರದ ಒಳನೋಟಗಳು ಮತ್ತು ವ್ಯವಹಾರ ಸ್ಕೇಲಿಂಗ್ ಬೆಂಬಲವನ್ನು ಒದಗಿಸಲು ನುರಿತ ತಜ್ಞರನ್ನು, ವಿಜ್ಞಾನಿಗಳನ್ನು ಮಾರ್ಗದರ್ಶಕರಾಗಿ ನಾಮನಿರ್ದೇಶನ ಮಾಡಲಾಯಿತು. ಈ ಮಾರ್ಗದರ್ಶನವು ನವೋದ್ಯಮಗಳು ತಮ್ಮ ಉತ್ಪನ್ನಗಳನ್ನು ಪರಿಷ್ಕರಿಸಲು, ಮಾರುಕಟ್ಟೆ ವ್ಯಾಪ್ತಿಯನ್ನು ವಿಸ್ತರಿಸಲು ಅನುವು ಮಾಡಿಕೊಡುತ್ತದೆ.  

ಈವರೆಗೆ ಕೃಷಿಕ್‌ಹಿನವೋದ್ಯಮ ಪೋಷಣ ಕೇಂದ್ರದಿಂದ 11 ಬ್ಯಾಚ್‌ಗಳಲ್ಲಿ 300ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಯಶಸ್ವಿಯಾಗಿ ತರಬೇತಿ ನೀಡಲಾಗಿದೆ. ಅವುಗಳಲ್ಲಿ 136 ಸ್ಟಾರ್ಟ್‌ಅಪ್‌ಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು ?14.5 ಕೋಟಿ ಅನುದಾನವನ್ನು ಶಿಫಾರಸು ಮಾಡಲಾಗಿದ್ದು, ಸ್ಟಾರ್ಟ್‌ಅಪ್‌ಗಳಿಂದ ?100 ಕೋಟಿ ಆದಾಯ ಮತ್ತು 1000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿ ಮಾಡಲಾಗಿದೆ.  30 ಮಹಿಳಾ ನೇತೃತ್ವದ ಸ್ಟಾರ್ಟ್‌ಅಪ್‌ಗಳಿಗೆ ಬೆಂಬಲ ನೀಡಲಾಗಿದ್ದು, ಸುಮಾರು 10 ಲಕ್ಷ ರೈತರಿಗೆ ತಂತ್ರಜ್ಞಾನ ಪ್ರಸಾರ ಮಾಡಲಾಗಿದೆ. 40 ಪೇಟೆಂಟ್‌ಗಳು, 10ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳು ಹೆಚ್ಚುವರಿ ಬಾಹ್ಯ ನಿಧಿಯನ್ನು ಪಡೆದುಕೊಂಡಿವೆ. ಕಾರ್ಯಕ್ರಮದಲ್ಲಿ ಕೃಷಿಕ್‌ಹಿನವೋದ್ಯಮ ಪೋಷಣ ಕೇಂದ್ರದ ಸಿಬ್ಬಂದಿ ಉಪಸ್ಥಿತರಿದ್ದರು.