‘ಯೋಗ, ಆರೋಗ್ಯದ ಜೀವನಾಡಿ’

‘ಯೋಗ, ಆರೋಗ್ಯದ ಜೀವನಾಡಿ’ 'Yoga, the lifeline of health'

ಗದಗ 08: ನಗರದ ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಎನ್‌. ಎಸ್‌. ಎಸ್‌. ಘಟಕದ ವತಿಯಿಂದ ದಿ. 08 ಶನಿವಾರ ರಂದು (ಸರ್ದಾರ್ ಅ150) ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ 150 ನೇ ಜನ್ಮದಿನಾಚರಣೆಯ ಅಂಗವಾಗಿ ಯೋಗ ಮತ್ತು ಆರೋಗ್ಯದ ಬಗ್ಗೆ ಅವಧಿಯನ್ನು ಆಯೋಜಿಸಲಾಗಿತ್ತು.  

ಮಹಾವಿದ್ಯಾಲಯದ ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ವಾಗೀಶ ಗು. ರೇಶ್ಮಿ ಅವರು ಎನ್‌. ಎಸ್‌. ಎಸ್‌. ಘಟಕದ ಎಲ್ಲ ಸ್ವಯಂಸೇವಕ ಮತ್ತು ಸೇವಕಿಯರಿಗೆ ಯೋಗವನ್ನು ಮಾಡಿಸಿದರು, ವಜ್ರಾಸನ, ಚಕ್ರಾಸನ, ಪದ್ಮಾಸನ, ಸೂರ್ಯನಮಸ್ಕಾರ, ಸೂರ್ಯನಮಸ್ಕಾರ ಮಂತ್ರಗಳು, ಶವಾಸನ, ವೀರಭದ್ರಾಸನ, ಪರ್ವತಾಸನ, ವೃಕ್ಷಾಸನ ಇದೆ ರೀತಿ ವಿವಿಧ ಪ್ರತಿ ಆಸನದ ಪ್ರಯೋಜನಗಳನ್ನು ತಿಳಿಸಿದರು.  

ಮಹಾವಿದ್ಯಾಲಯದ ಎನ್‌. ಎಸ್‌. ಎಸ್‌. ಘಟಕದ ಕಾರ್ಯಕ್ರಮಾಧಿಕಾರಿಗಳಾದ ಪ್ರೊ. ವಾಗೀಶ ಗು. ರೇಶ್ಮಿ, ಎನ್‌. ಎಸ್‌. ಎಸ್‌. ಘಟಕದ ಕಾರ್ಯನಿರ್ವಾಹಕರಾದ ಕುಮಾರಿ. ನೀಲಮ್ಮ ಸೀತಾರಳ್ಳಿ, ಎನ್‌. ಎಸ್‌. ಎಸ್‌. ಘಟಕದ ಎಲ್ಲ ತಂಡಗಳ ನಾಯಕ ಮತ್ತು ನಾಯಕಿಯರು ಹಾಗೂ ಎನ್‌. ಎಸ್‌. ಎಸ್‌. ಘಟಕದ ಎಲ್ಲ ಸ್ವಯಂ ಸೇವಕ ಮತ್ತು ಸೇವಕಿಯರು ಉಪಸ್ಥಿತರಿದ್ದರು.