‘ವಿವೇಕ ಮಂಟಪ- ಉಪನ್ಯಾಸ ಮಾಲಿಕೆ ವಿವೇಕ ಲೀಲಾಮೃತ’
'Viveka Mantapa- Lecture Series Viveka Lilamrita'
ಲೋಕದರ್ಶನ ವರದಿ
ಬಳ್ಳಾರಿ 26: ‘ಸ್ವಾಮಿ ವಿವೇಕಾನಂದ’ ವಿಶ್ವವನ್ನೇ ಚಕಿತಗೊಳಿಸಿದ ಮಹೋನ್ನತ ವ್ಯಕ್ತಿತ್ವ ಅವರ ಧೀರವಾಣಿ, ಧೀರೋದ್ಧಾತ್ತ ನಡೆ, ಸಾಟಿಯಿಲ್ಲದ ಸ್ವಾಭಿಮಾನ, ಅಪರಿಮಿತ ಸ್ವದೇಶಾಭಿಮಾನ, ‘ಗುರಿ ಸೇರುವವರೆಗೂ ವಿರಮಿಸದಿರಿ’ ಎಂಬ ದೃಢ ವಿಶ್ವಾಸ ಇನ್ನೂ ಈ ಭೂಮಿಯನ್ನು ಜಾಗೃತಗೊಳಿಸುತ್ತಿವೆ. ನಮ್ಮೆಲ್ಲರ ಬಾಳು ಅದೇ ಘನತೆಯಿಂದ ಬೆಳಕಾಗಿ ಅಷ್ಟೇ ಸರಳತೆಯಿಂದ ಅನಂತವಾಗಲೆಂಬ ಸದಾಶಯದೊಂದಿಗೆ ಬಳ್ಳಾರಿಯಲ್ಲಿ ಒಂದು ವಿಶೇಷ ಅನುನಯದ ಕಾರ್ಯಕ್ರಮ ‘ವಿವೇಕ ಮಂಟಪ-ಉಪನ್ಯಾಸ ಮಾಲಿಕೆ’ಯನ್ನು ಆಯೋಜಿಸಲಾಗಿದೆ.
ದಿ. ಜ. 04 ರಿಂದ 13 ರವರೆಗೆ 10 ದಿನಗಳ ಕಾಲ ಪ್ರತಿದಿನ ಸಂಜೆ 5.45 ರಿಂದ 8.15 ಗಂಟೆಯವರೆಗೆ ಡಾ. ರಾಜಕುಮಾರ ರಸ್ತೆಯಲ್ಲಿರುವ ರಾಘವ ಕಲಾಮಂದಿರದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಆಶ್ರಮದ ಅಧ್ಯಕ್ಷರೂ, ಸರ್ವ ಸಮರ್ಿತರೂ ಹಾಗೂ ಪ್ರಖರ ವಾಗ್ಮೀಗಳೂ ಆಗಿರುವ ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿ ಅವರು “ಸ್ವಾಮಿ ವಿವೇಕಾನಂದ ಲೀಲಾಮೃತ” ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ.
ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿ:
ಗಣೇಶ ಚತುರ್ಥಿಯಂದು ಕೋಲಾರ ಜಿಲ್ಲೆಯಲ್ಲಿ ಜನಿಸಿದ ಸ್ವಾಮೀಜಿಯವರು ವಿಜ್ಞಾನ ಪದವೀಧರರಾಗಿದ್ದು, ಕೆನರಾ ಬ್ಯಾಂಕಿನಲ್ಲಿ ಸೇವೆಯಲ್ಲಿರುವಾಗ ರಾಮಕೃಷ್ಣ ಮಿಷನ್‌ನ ಪೂಜ್ಯ ಸ್ವಾಮಿ ಪುರುಷೋತ್ತಮಾನಂದರಿಂದ ಪ್ರಭಾವಿತರಾಗಿ 1993ರಲ್ಲಿ ಸನ್ಯಾಸ ಸ್ವೀಕರಿಸಿ, ಸ್ವಾಮಿ ನಿರ್ಭಯಾನಂದ ಸರಸ್ವತಿಗಳಾದರು. ಶಿವಮೊಗ್ಗದ ಶಾರದ ಅಂಧರ ವಿಕಾಸ ಕೇಂದ್ರ, ಅಖಿಲ ಕರ್ನಾಟಕ ವಿವೇಕಾನಂದ ಮಹಾ ಮಂಡಳ, ವಿಜಯಪುರದ ಮನಗೂಳಿಯಲ್ಲಿ ವಿವೇಕಾನಂದ ವಸತಿ ಶಾಲೆಗಳನ್ನು ಆರಂಭಿಸಿದ್ದಲ್ಲದೇ ಬಡ, ಅನಾಥ ಮಕ್ಕಳಿಗೆ ಹಾಗೂ ಕಾರ್ಗಿಲ್ ಯುದ್ಧದಲ್ಲಿ ಮಡಿದ ಯೋಧರ ಮಕ್ಕಳಿಗೆ ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತರ ಮಕ್ಕಳನ್ನು ದತ್ತು ತೆಗೆದುಕೊಂಡು ಎಸ್.ಎಸ್.ಎಲ್.ಸಿ. ವರೆಗೂ ಉಚಿತ ವಸತಿ ಊಟ ಮತ್ತು ಶಿಕ್ಷಣ ನೀಡುತ್ತಿದ್ದಾರೆ. ಧಾರವಾಡ, ವಿಜಯಪುರ, ಗದಗ ಜಿಲ್ಲೆಗಳಲ್ಲಿ ರಾಮಕೃಷ್ಣ-ವಿವೇಕಾನಂದ ಆಶ್ರಮಗಳನ್ನು ಸ್ಥಾಪಿಸಿದ್ದಲ್ಲದೇ ಕಲಬುರ್ಗಿ, ಬೀದರ, ರಾಣೆಬೆನ್ನೂರ, ಚಿತ್ರದುರ್ಗ ಆಶ್ರಮಗಳನ್ನು ಆರಂಭಿಸಲು ಪ್ರೇರಕಶಕ್ತಿಯಾಗಿದ್ದಾರೆ.
‘ಭವ್ಯ ಜೀವನ ಪರಿಚಯ’ ಎಂಬ ಪ್ರವಚನ ಮಾಲಿಕೆ ಮೂಲಕ ಇಡೀ ಕರ್ನಾಟಕದಾದ್ಯಂತ ಸ್ವಾಮಿ ವಿವೇಕಾನಂದರ ವಿಚಾರಧಾರೆ ಹಾಗೂ ಭಾರತೀಯ ಪರಂಪರೆ ಎತ್ತಿ ಹಿಡಿಯುವ ಜೀವನ ಶೈಲಿಯನ್ನು ಪರಿಚಯಿಸುತ್ತಿದ್ದಾರೆ. ವಿಶೇಷವಾಗಿ ಯುವಜನತೆ, ಪಾಲಕ-ಪೋಷಕರು ಹಾಗೂ ಶಿಕ್ಷಕರನ್ನು ಉದ್ದೇಶಿಸಿ ವ್ಯಕ್ತಿತ್ವ ವಿಕಸನ-ಪ್ರವಚನಗಳಿಂದ ಖ್ಯಾತರಾಗಿದ್ದಾರೆ.
ವಿಶ್ವ ಸಂಸ್ಥೆಯು ಸಿಯೋಲ್‌ನಲ್ಲಿ ಆಯೋಜಿಸಿ ನಿರ್ವಹಿಸಿದ ಕ್ರೀಡಾ ಹಾಗೂ ಸಾಂಸ್ಕೃತಿಕ ಮೇಳದಲ್ಲಿ ಪೂಜ್ಯರಿಂದ ಪ್ರಭಾವಿತರಾಗಿ ಅವರಿಗೆ ‘ಶಾಂತಿಯ ರಾಯಭಾರಿ’ ಎಂಬ ಪ್ರಶಸ್ತಿ ನೀಡಿದ್ದಲ್ಲದೇ ವಿಶ್ವ ವಾಣಿಜ್ಯ ಕೇಂದ್ರ (ಘಖಿಅ) ಅನಾಹುತದಲ್ಲಿ ಮಡಿದವರಿಗಾಗಿ ಹಿಂದು ಧರ್ಮದ ಪರವಾಗಿ ಪ್ರಾರ್ಥನೆ ಸಲ್ಲಿಸಲು ಆಹ್ವಾನಿಸಿದ್ದು ನಮ್ಮ ರಾಜ್ಯಕ್ಕೆ ಸಂದ ಗೌರವ. ಕ್ಯಾಲಿಫೋರ್ನಿಯಾ, ಚಿಕಾಗೋ, ಅಟ್ಲಾಂಟಾ, ಇಂಡಿಯಾನ ಪೊಲೀಸ್, ನೂಜೆರ್ಸಿ ಮುಂತಾದ ಕಡೆಗಳಲ್ಲಿ ವಿಶ್ವದ ಹಲವಾರು ಪ್ರತಿಷ್ಟಿತ ವಿಶ್ವ ವಿದ್ಯಾಲಯಗಳಲ್ಲಿ ಸತ್ಸಂಗ, ವ್ಯಕ್ತಿತ್ವ ವಿಕಸನ, ಸುಯೋಗ್ಯ ಯೋಚನೆ ಮೊದಲಾದ ವಿಷಯಗಳ ತರಬೇತಿ ಭಾಷಣ ನೀಡುತ್ತಿದ್ದಾರೆ.
ಉಪನ್ಯಾಸ ಮಾಲಿಕೆಯ ಯಶಸ್ಸಿಗಾಗಿ ನಗರದ ಯುವ ಉತ್ಸಾಹಿ ಲೆಕ್ಕಪರಿಶೋಧಕರಾದ ಕೆ.ರಾಜಶೇಖರ ರವರ ಸಂಚಾಲಕತ್ವದಲ್ಲಿ ನಗರದ ಗಣ್ಯರ ಸ್ವಾಗತ ಸಮಿತಿಯೊಂದನ್ನು ರಚಿಸಲಾಗಿದ್ದು, ಈ ಸ್ವಾಗತ ಸಮಿತಿಯಲ್ಲಿ ಪಲ್ಲೇದ ಪಂಪಾಪತಿ, ಹಿರಿಯ ಮುಖಂಡರು, ಡಾ. ಶೇಷಗಿರಿರಾವ್, ಹಿರಿಯ ದಂತ ವೈದ್ಯರು, ಎಂ.ಜಿ.ಗೌಡ, ಇಂಜೀನೀಯರ್, ಎನ್.ಯಶವಂತರಾಜ್, ತೆರಿಗೆ ಸಲಹೆಗಾರರು, ಡಾ. ಅರುಣಾ ಕಾಮಿನೇನಿ, ವೈದ್ಯರು, ಬಳ್ಳಾರಿ. ಕೆ.ಆರ್. ವಿಜಯಲಕ್ಷ್ಮಿ, ವಕೀಲರು, ಪೋಲಾ ಸುಜಾತ, ಉದ್ಯಮಿಗಳು, ಶ್ರೀಧರ ಬೋನಗೇರಿ, ಅಧ್ಯಕ್ಷರು, ರಾಮಕೃಷ್ಣ ವಿವೇಕಾನಂದ ಕೇಂದ್ರ, ಜಿ.ನಾಗರಾಜ, ಕಾರ್ಯದರ್ಶಿ, ಎಸ್.ಜಿ.ಟಿ. ಶಿಕ್ಷಣ ಸಂಸ್ಥೆ, ಹೆಚ್.ಎಂ.ಮಲ್ಲಿಕಾರ್ಜುನಸ್ವಾಮಿ, ವ್ಯಾಪಾರಿಗಳು, ಕುಡುತಿನಿ. ಸಿ.ಎರಿ್ರಸ್ವಾಮಿ, ಲೆಕ್ಕಪರಿಶೋಧಕರು, ಡಾ. ಮಲ್ಲಿಕಾರ್ಜುನ, ಪ್ರಾಧ್ಯಾಪಕರು, ಬಿಎಂಸಿಆರ್‌ಸಿ, ಡಾ. ಧರ್ಮಾರೆಡ್ಡಿ, ತಜ್ಞ ವೈದ್ಯರು, ಸಂಜೀವ ಪ್ರಸಾದ್, ಇಂಜಿನಿಯರ್, ಬಳ್ಳಾರಿ, ಬಿ.ಶ್ರೀನಿವಾಸರೆಡ್ಡಿ, ಇಂಜೀನೀಯರ್, ಮುರಳಿಕೃಷ್ಣ, ಉದ್ಯಮಿಗಳು, ಲಕ್ಷ್ಮೀಕಾಂತರೆಡ್ಡಿ, ಅಧ್ಯಕ್ಷರು, ಸನ್ಮಾರ್ಗ ಬಳಗ, ಕೋಮಲ್ ಜೈನ್, ಲೆಕ್ಕ ಪರಿಶೋಧಕರು, ವೀರಾಂಜನೇಯ, ಅಧ್ಯಕ್ಷರು, ಕಿರಾಣಿ ವ್ಯಾಪಾರಿಗಳ ಸಂಘ,
ವಿಶ್ವನಾಥ ಆಚಾರಿ, ಲೆಕ್ಕ ಪರಿಶೋಧಕರು, ಬಳ್ಳಾರಿ, ಪಂಡಿತಾರಾಧ್ಯ, ಪ್ರಾಂಶುಪಾಲರು, ಸರ್ಕಾರಿ ಐ.ಟಿ.ಐ. ಕಾಲೇಜು, ಡಾ. ಸಂಗೀತ ಕಟ್ಟಿಮನಿ, ವೈದ್ಯರು, ಬಳ್ಳಾರಿ ಶ್ರೀಧರ್ ಪಾರ್ಥಸಾರಥಿ, ತೆರಿಗೆ ಸಲಹೆಗಾರರು, ಶಿವಕುಮಾರ್, ತೆರಿಗೆ ಸಲಹೆಗಾರರು, ಬಳ್ಳಾರಿ ಹಾಗೂ ಜೋಳದರಾಶಿ ತಿಮ್ಮಪ್ಪ, ಉದ್ಯಮಿಗಳು, ಇವರೆಲ್ಲರೂ ಸದಸ್ಯರಾಗಿದ್ದು ಕಾರ್ಯಕ್ರಮದ ಪೂರ್ವ ಸಿದ್ಧತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಕಾರ್ಯಕ್ರಮದ ಯಶಸ್ಸಿಗಾಗಿ ಶ್ರಮಿಸುತ್ತಿದ್ದಾರೆ.
ಭಕ್ತಿ ಸಂಗೀತ ಕಾರ್ಯಕ್ರಮ :
ಪ್ರತಿ ದಿನ ಸಂಜೆ ಉಪನ್ಯಾಸದ ಆರಂಭದಲ್ಲಿ ಭಕ್ತಿ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಶ್ರೀ ಸುಮೇದಾನಂದ ಜಿ ಮಹಾರಾಜ, ಹೊಸಪೇಟೆ ಜಿಲ್ಲೆಯ ಹಿರಿಯ ಹಾಗೂ ಖ್ಯಾತ ಗಾಯಕರು, ಸಂಗೀತ ಕಲಾವಿದರುಗಳು ಭಕ್ತಿ ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದಾರೆ.
ಪೂಜ್ಯ ಸ್ವಾಮಿ ನಿರ್ಭಯಾನಂದ ಸರಸ್ವತಿಯವರು 3 ವರ್ಷಗಳ ನಂತರ ಬಳ್ಳಾರಿಗೆ ಪುನಃ ಆಗಮಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯವಾದ್ದರಿಂದ ಬಳ್ಳಾರಿಯ ನಾಗರಿಕರು, ಯುವ ಜನತೆ, ವಿದ್ಯಾರ್ಥಿ-ವಿದ್ಯಾರ್ಥಿನಿಯರು ಈ ಕಾರ್ಯಕ್ರಮದ ಪೂರ್ಣ ಪ್ರಯೋಜನವನ್ನು ಪಡೆಯಬೇಕೆಂದು ಈ ಮೂಲಕ ವಿನಂತಿಸಲಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 