'ಅತ್ಯಾಧುನಿಕ ಯಂತ್ರೋಪಕರಣಗಳಿಲ್ಲದೆ ಸಾಧನೆ ಮಾಡಿ ತೋರಿಸಿದ ವಿಶ್ವೇಶ್ವರಯ್ಯ'

'ಅತ್ಯಾಧುನಿಕ ಯಂತ್ರೋಪಕರಣಗಳಿಲ್ಲದೆ ಸಾಧನೆ ಮಾಡಿ ತೋರಿಸಿದ ವಿಶ್ವೇಶ್ವರಯ್ಯ' 'Vishvesvaraya demonstrated his achievements without sophisticated machinery'

ಗದಗ 17: ಸೋಮವಾರ ಸೆ. 15ರಂದು ನಗರದ ಹೃದಯಭಾಗದಲ್ಲಿರುವ  ಸದ್ಗುರು ಮುಕ್ಕಣ್ಣೇಶ್ವರ ಮಠದ ಸಮುದಾಯ ಭವನದಲ್ಲಿ “ಸರ್‌.ಎಂ.ವಿಶ್ವೇಶ್ವರಯ್ಯ ಸಿವ್ಹಿಲ್ ಕನ್ಸಲ್ಟಂಟ್ಸ್‌್ಘಇಂಜನೀಯರ​‍್ಸ‌ ಫೋರಂ (ರಿ) ಗದಗ ಬೆಟಗೇರಿ” ಫೋರಂನ ವತಿಯಿಂದ“ಸರ್ ಎಂ. ವಿಶ್ವೇಶ್ವರಯ್ಯಜನ್ಮ ದಿನ ಆಚರಣೆ ಹಾಗೂ “ಎಂಜನೀಯರ​‍್ಸ‌ ದಿನ” ಆಚರಣೆ ಸಮಾರಂಭವು ಪ್ರತಿಷ್ಠಿತ ಕಂಪನಿಗಳಾದ ದಾಲ್ಮಿಯಾ ಸಿಮೆಂಟ, ಜೆ.ಎಸ್‌.ಡಬ್ಲೂ ಸ್ಟೀಲ್ಸ, ಗ್ರೀನ್‌ಲ್ಯಾಮ್ ಲ್ಯಾಮಿನೇಟ್ಸ್‌, ಹಾಗೂ ಗದಗ ಬೆಟಗೇರಿ ಅವಳಿ ನಗರದಕಟ್ಟಡ ನಿರ್ಮಾಣ ಸಾಮಗ್ರಿಗಳ ವ್ಯಾಪಾರಸ್ಥರಾದಜೈನ ಸ್ಟೀಲ್ಸ್‌, ಆಶಾ ಎಜೆನ್ಸಿಸ್, ಜೆಪಿ ಕನಸ್ಟ್ರಕ್ಷನ, ಸಚಿನ್‌ಎಂಟರ್ ಪ್ರೈಸಸ್,  ವಾಸವಿ ಮಾರ್ಕೆಟಿಂಗ್, ವಿಶಾಲ ಸ್ಟೀಲ್ ಹಾಗೂ ಸಿಮೆಂಟ, ವರ್ದಮಾನಇಲೆಕ್ಟ್ರಿಕಲ್ಸ,  ಮಂಜುನಾಥಇಲೆಕ್ಟ್ರಿಕಲ್ಸ, ಮಾರುತಿಟ್ರೇಡರ​‍್ಸ‌,  ಹರಿ ಹಾರ್ಡವೇರ‌್ಸ, ಭಾರತ ಎಂ. ಎನ್‌. ಆರ್‌ಡೋರ‌್ಸ, ಸಫಾ ಸಿರಾ​‍್ಯಮಿಕ್ಸ, ಯು ವಿ ಎಂಟರೈ​‍್ರಸಸ್, ವರ್ಷಾಕ್ಷರಎಂಟರೈ​‍್ರಸಸ್, ಪೂಜಾ ಹಾರ್ಡವೇರ್, ಇವರ ಸಹಯೋಗದೊಂದಿಗೆ  ಬಹಳ ವಿಜೃಂಬಣೆಯಿಂದ ಜರುಗಿತು. 

ಅಥಿತಿಗಳಾದ ಅಭಿಷೇಕ ಮಲಾನಿಯವರು   ಇವರು ಜಗತ್ತು ಕಂಡ ಅದ್ಭುತ ವ್ಯಕ್ತಿ ಸರ್ ಎಂ. ವಿಶ್ವೇಶ್ವರಯ್ಯನವರು ಅಂದಿನ ಕಾಲದಲ್ಲಿಯಾವುದೇ ಅತ್ಯಾಧುನಿಕ ಯಂತ್ರೋಪಕರಣಗಳು ಇರಲಿಲ್ಲ ಆದರೂ ಕೂಡ ಎಂಜನೀಯರಿಂಗ ಕ್ಷೇತ್ರದಲ್ಲಿ ಅವರ ಸಾಧನೆ ಅಪಾರ, ಈಗ ಸಾಕಷ್ಟು ಅತ್ಯಾಧುನಿಕ ಯಂತ್ರೋಪಕರಣಗಳು ಸಿಗುತ್ತಿವೆ ಅವುಗಳನ್ನು ಬಳಸಿಕೊಂಡು ತಾವುತಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತಿಯನ್ನು ಕಾಣುವುದರ ಜೊತೆಗೆ ಸುಂದರ ಸುಸಜ್ಜಿತ ನಗರವನ್ನು ನಿರ್ಮಾಣ ಮಾಡಬೇಕು ಎಂದು ತಿಳಿಸಿದರು. 

ಗ್ರೀನಲ್ಯಾಮ ಲ್ಯಾಮಿನೇಟ ಕಂಪನಿಯ ವತಿಯಿಂದ ಆಗಮಿಸಿದ ಆಕಾಶರವರು ತಮ್ಮ ಕಂಪನಿಯು ಉತ್ಪಾದಿಸುವ ಲ್ಯಾಮಿನೇಟ್ಸ ಕುರಿತು ವಿಟಿ ಮೂಲಕ ಸವಿಸ್ತಾರವಾಗಿ ತಿಳಿಸಿದರು ನಂತರ ಶ್ರೀಗಳಿಂದ ಅವರನ್ನು ಗೌರವಿಸಲಾಯಿತು. 

ಜಗತ್ತು ಕಂಡ ಅದ್ಭುತ ವ್ಯಕ್ತಿ ಸರ್ ಎಂ. ವಿಶ್ವೇಶ್ವರಯ್ಯನವರು ಶಿಕ್ಷಣ ಕ್ಷೇತ್ರ, ಸಾಮಾಜಿಕ ಕ್ಷೇತ್ರದಲ್ಲಿ ಮಾತ್ರವಲ್ಲದೇ ಎಂಜನೀರಿಂಗ್ ಕ್ಷೇತ್ರದಲ್ಲಿ  ಅವರ ಅಮೋಘ ಸೇವೆಯನ್ನು ಸಲ್ಲಿಸುವ ಮೂಲಕ ತಮ್ಮನ್ನು ಸಮರ​‍್ಿಸಿಕೊಂಡ ಕಾರಣ ಅವರ ಜನ್ಮದಿನವಾದ ಸೆ.15 ರಂದು “ಎಂಜನೀಯರ​‍್ಸ‌ ದಿನಾಚರಣೆ”ಯನ್ನಾಗಿ ಆಚರಿಸಲಾಗುತ್ತಿದೆ.  

ಉತ್ತಮ ಸೇವೆಗಾಗಿ ರಾಷ್ಟ್ರಪತಿ ಪದಕ ವಿಜೇತರಾದ ಬೆಟಗೇರಿ ಬಡಾವಣೆ ಪೋಲೀಸ್‌ಠಾಣೆಯ ಪಿ.ಎಸ್‌. ಐ ಅಧಿಕಾರಿಗಳಾದ ಮಾರುತಿ ಜೋಗದಂಡಕರ ಅವರಿಗೆ ಹಾಗೂ ಮುಖ್ಯಮಂತ್ರಿಗಳಿಂದ ಸಿಎಂ ಪದಕ ಪಡೆದಿರುವಂತಹ ಹನಮಂತಗೌಡಎಸ್‌. ಮರಿಗೌಡ್ರಅವರಿಗೂ ಈ ಕಾರ್ಯಕ್ರಮದಲ್ಲಿ ಅವರ ಅತ್ಯುತ್ಯಮ ಸೇವೆಯನ್ನು ಪರಿಗಣಿಸಿ ಹಾಗೂ ಪ್ರಶಂಸಿಸಿ ಗೌರವಪೂರ್ವಕ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಹಾಗೂ ಫೋರಂನ ಸದಸ್ಯರು ತಮ್ಮ ಮೇಲ್ವಿಚಾರಣೆಯಲ್ಲಿ ನಿರ್ಮಿಸುತ್ತಿರುವ ಕಟ್ಟಡದ ಮಾಲಿಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿ ಕಟ್ಟಡದ ಮಾಲಿಕರನ್ನು ವೇದಿಕೆಯಲ್ಲಿ ಗೌರವಿಸಲಾಯಿತು. 

ಇಂ. ಪ್ರಕಾಶ ಪೂಜಾರ ಸ್ವಾಗತಿಸಿದರು, ಆರ್‌.ನಾಗಾನಂದ ತೊಟಗೇರ ಪ್ರಸ್ತಾವಿಕ ನುಡಿದರು, ಇಂ. ಗುರುಶಾಂತಮೂರ್ತಿ ಹಿರೇಮಠ ವಂದನಾರೆ​‍್ಣ ಮಾಡಿದರು, ಇಂ. ಎನ್‌. ಸಿ.ಗದಗಿನಕಾರ್ಯಕ್ರಮವನ್ನು ನಿರೂಪಿಸಿದರು. 

ಫೋರಂನ ಸರ್ವ ಸದಸ್ಯರು ಪರಿವಾರ ಸಮೇತ ಹಾಗೂ ಕಟ್ಟಡದ ಮಾಲಿಕರು, ಕಟ್ಟಡ ನಿರ್ಮಾಣ ಕಾರ್ಮಿಕರು ಕಟ್ಟಡ ಸಾಮಗ್ರಿ ಪೂರೈಕೆದಾರರು ಆಗಮಿಸಿ  ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.