’ವೃಕ್ಷ ಕಿಡ್ಸ್ ರನ್-ಮರಗಳಿಗಾಗಿ ಮಕ್ಕಳ ಓಟ’
'Tree Kids Run - Children's Run for Trees'
ವಿಜಯಪುರ 13: ವೃಕ್ಷೋಥಾನ್ ಹೆರಿಟೇಜ್ ರನ್ ಅಭಿಯಾನದಲ್ಲಿ ಮುದ್ದು ಮಕ್ಕಳು ಭಾಗವಹಿಸಬೇಕು ಎಂಬ ಸಚಿವ ಎಂ.ಬಿ.ಪಾಟೀಲರ ಆಶಯದ ಹಿನ್ನೆಲೆಯಲ್ಲಿ ’ವೃಕ್ಷ ಕಿಡ್ಸ್ ರನ್-ಮರಗಳಿಗಾಗಿ ಮಕ್ಕಳ ಓಟ’ ಆಯೋಜಿಸಲಾಗಿದೆ ಎಂದು ವೃಕ್ಷೋಥಾನ್ ಹೆರಿಟೇಜ್ ರನ್ ಸಮಿತಿ ತಿಳಿಸಿದೆ.
ಡಿ. 5 ರಂದು ಶುಕ್ರವಾರ ’ವೃಕ್ಷ ಕಿಡ್ಸ್ ರನ್-ಮರಗಳಿಗಾಗಿ ಮಕ್ಕಳ ಓಟ’ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಬೆಳಗ್ಗೆ 7 ಗಂಟೆಗೆ ನಡೆಯಲಿದ್ದು, ನರ್ಸರಿಯಿಂದ ಐದನೇ ತರಗತಿ ವರೆಗಿನ ಮಕ್ಕಳಿಗೆ ಮೂರು ವಿಭಾಗಗಳಲ್ಲಿ ಓಟ ನಡೆಯಲಿದೆ.
ಉಚಿತ ನೋಂದಣಿ : ಈ ಓಟದಲ್ಲಿ ಪಾಲ್ಗೊಳ್ಳುವ ಮಕ್ಕಳಿಗೆ ನೋಂದಣಿ ಉಚಿತವಾಗಿರಲಿದೆ. 4ನೇ ಮತ್ತು 5ನೇ ತರಗತಿಯ ಮಕ್ಕಳಿಗೆ 400 ಮೀ. ಓಟ ಆಯೋಜಿಸಲಾಗಿದ್ದು, ಪ್ರಥಮ ಸ್ಥಾನ ರೂ. 10000, ದ್ವಿತೀಯ ಸ್ಥಾನ ರೂ. 7500, ತೃತೀಯ ಸ್ಥಾನ ರೂ. 5000 ಹಾಗೂ ಇಬ್ಬರು ಮಕ್ಕಳಿಗೆ ಸಮಾಧಾನಕರ ಬಹುಮಾನವಾಗಿ ರೂ. 2500 ನೀಡಲಾಗುವುದು.
2ನೇ ಮತ್ತು 3ನೇ ತರಗತಿ ಮಕ್ಕಳಿಗಾಗಿ 200 ಮೀ. ಓಟ ಆಯೋಜಿಸಲಾಗಿದ್ದು, ಈ ವಿಭಾಗದಲ್ಲಿ ಪ್ರಥಮ ರೂ. 5000, ದ್ವಿತೀಯ, ರೂ. 3000, ತೃತೀಯ ರೂ. 2000 ಹಾಗೂ ಇಬ್ಬರು ಮಕ್ಕಳಿಗೆ ಸಮಾಧಾನ ಬಹುಮಾನ ತಲಾ ರೂ. 1000 ನೀಡಲಾಗುತ್ತಿದೆ.
ನರ್ಸರಿ, ಎಲ್.ಕೆ.ಜಿ, ಯುಕೆಜಿ ಮತ್ತು ಒಂದನೇ ತರಗತಿ ಮಕ್ಕಳಿಗೆ 100 ಮೀ. ಓಟ ನಡೆಯಲಿದೆ. ಇದರಲ್ಲಿ ಪ್ರಥಮ ರೂ. 2500, ದ್ವಿತೀಯ ರೂ. 1500, ತೃತೀಯ ರೂ. 1000 ಮತ್ತು ಸಮಾಧಾನಕರ ಬಹುಮಾನ ಇಬ್ಬರಿಗೆ ತಲಾ ರೂ. 500 ನೀಡಲಾಗುವುದು.
ಸಚಿವ ಎಂ.ಬಿ.ಪಾಟೀಲರವರು ಇತ್ತಿಚೇಗೆ ಬೆಂಗಳೂರಿನಲ್ಲಿ ನಡೆದ ವೃಕ್ಷೋಥಾನ್ ಸಭೆಯಲ್ಲಿ ಮುದ್ದು ಮಕ್ಕಳನ್ನು ಓಟದಲ್ಲಿ ತೊಡಗಿಸಿಕೊಳ್ಳಬೇಕು. ಕ್ರೀಡೆ ಮತ್ತು ಪರಿಸರ ಪ್ರೀತಿಯನ್ನು ಎಳೆಯ ಮಕ್ಕಳಲ್ಲಿಯೇ ನಾವು ಬಿತ್ತಬೇಕು. ಅವರು ಬೆಳೆದಂತೆ ಈ ವಿಷಯಗಳು ಅವರ ನೆಚ್ಚಿನ ವಿಷಯಗಳಾಗಿ ಸಮಾಜದಲ್ಲಿ ಪರಿವರ್ತನೆ ಸಾಧ್ಯ ಎಂದು ತಿಳಿಸಿರುವುದನ್ನು ಗಮನಿಸಿ, ಡಿಸೆಂಬರ್ 7 ರಂದು ಮುಖ್ಯ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸುವದರಿಂದ ಮುಂಜಾಗ್ರತೆಯಾಗಿ ಎರಡು ದಿನಗಳ ಮೊದಲೇ ಡಿಸೆಂಬರ್ 5 ರಂದು ಬೆಳಗಿನ 7 ಗಂಟೆಗೆ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಈ ಓಟವನ್ನು ಏರಿ್ಡಸಲಾಗಿದ್ದು, ವಿಜಯಪುರ ಜಿಲ್ಲೆಯ ಎಲ್ಲ ಸರಕಾರಿ, ಖಾಸಗಿ, ಸಿ.ಬಿ.ಎಸ್.ಸಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳ ವಿದ್ಯಾರ್ಥಿಗಳು ಉಚಿತವಾಗಿ ಈ ಓಟದಲ್ಲಿ ಸ್ಥಳದಲ್ಲಿಯೇ ನೋಂದಣಿ ಮೂಲಕ ಭಾಗವಹಿಸಬಹುದಾಗಿದೆ.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 