‘ಶರಣರ ವಚನಗಳು ಬದುಕಿಗೆ ದಾರಿ ದೀಪ’

‘ಶರಣರ ವಚನಗಳು ಬದುಕಿಗೆ ದಾರಿ ದೀಪ’ 'The words of the Sharana's are a guiding light for life'

ಲೋಕದರ್ಶನ ವರದಿ 

ಹೂವಿನಹಡಗಲಿ 27: ಬಸವಾದಿ ಶರಣರ ವಚನಗಳು ಬದುಕಿಗೆ ದಾರಿ ದೀಪ ಜತೆಗೆ  ತ್ರಿಪದಿಗಳ ಹರಿಕಾರ ಮೈಲಾರ ಬಸವಲಿಂಗ ಶರಣರು ಲಿಂಗಾಯತ ಧರ್ಮದ ಶ್ರೇಷ್ಠತೆಯನ್ನು ಪ್ರತಿಪಾದಿಸಿದ್ದಾರೆ. ಅವರ ವಚನ ಸಂದೇಶಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಪಾಂಡೋಮಟ್ಟಿಯ  ಸ್ವಾಮೀಜಿ ಹೇಳಿದರು.  

ಅವರು ಗುರುಬಸವ ತಾಲ್ಲೂಕಿನ ಮೈಲಾರ ಗ್ರಾಮದ ಜಯಪ್ರಕಾಶ ನಾರಾಯಣ ಕಲಾ ಮಂದಿರದಲ್ಲಿ ಕರ್ನಾಟಕ ಗ್ರಾಮೀಣ ಯುವ ಕನ್ನಡ ಸಾಹಿತ್ಯ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ರಾಜ್ಯೋತ್ಸವ, ಕನ್ನಡ ನುಡಿ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜೀವನದ ಯಶಸ್ಸಿಗೆ ಶಿಸ್ತು, ಸಂಯಮ ಮುಖ್ಯ, ಶಿಸ್ತಿಗೆ ಒಳಪಡದಿದ್ದರೆ ಏನನ್ನು ಸಾಧಿಸಲು ಆಗುವುದಿಲ್ಲ. ಸಂಘಟಕ ಪುಟ್ಟಪ್ಪ ತಂಬೂರಿಯವರು ಗ್ರಾಮೀಣ ಜನರಲ್ಲಿ ನಾಡು, ನುಡಿಯ ಅಭಿಮಾನ ಬೆಳೆಸುತ್ತಿರುವುದು ಶ್ಲಾಘನೀಯ ಎಂದರು.ಟಿ.ಎಂ.ಶಂಕ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಎಚ್‌.ಜಿ.ಪಾಟೀಲ, ಸಮಿತಿ ಅಧ್ಯಕ್ಷ ಪುಟ್ಟಪ್ಪ ತಂಬೂರಿ ಮಾತನಾಡಿದರು. ಪಾಂಡೋಮಟ್ಟಿಯ ಗುರುಬಸವ ಸ್ವಾಮೀಜಿ, ಹೋತನಹಳ್ಳಿ ಸಿದ್ದಾರೂಢ ಮಠದ ಶಂಕರಾನಂದ ಸ್ವಾಮೀಜಿಗೆ ’ಮೈಲಾರ ಬಸವಲಿಂಗ ಶರಣಶ್ರೀ ಪ್ರಶಸ್ತಿ ನೀಡಲಾಯಿತು. ವಿವಿಧ ಕ್ಷೇತ್ರಗಳ ಸಾಧಕರು, ಆದರ್ಶ ದಂಪತಿ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪ್ರದಾನಮಾಡಲಾಯಿತು. 

ಚನ್ನಬಸಯ್ಯಸ್ವಾಮಿ ಹಿರೇಮಠ, ಕೆ.ಚಿಕ್ಕಣ್ಣ, ಜೆ. ಆಶಾ ಚಳ್ಳಕೆರೆ, ಬಿ. ಫರೀದಾ ಖಾನ್, ಪುಟ್ಟರಾಜ, ಸುರೇಶ ಬೆಳಗೆರೆ, ಕೆ.ಪರಶುರಾಮ ಗೂರ​‍್ಪನವರ, ಟಿ.ಎಲ್‌.ರಾಜೇಂದ್ರ, ದಯಾನಂದ, ಪ್ರಹ್ಲಾದ್, ಕೆ.ಶಂಕರಗೌಡ, ವಿನೋದಕುಮಾರ್, ಮಾರುತಿ, ಲೋಕನಾಥ, ಮಂಜುನಾಥ ಬಾರ್ಕಿ ಇದ್ದರು. ಎಚ್‌.ಸಿ.ಇಂಚರ ಉಪನ್ಯಾಸ ನೀಡಿದರು. ಕಲಾವಿದರಾದ ವಸಂತ ಕುಮಾರ್ ಕಡತಿ, ಎಚ್‌.ಸಿಶಂಕರ್ ಅವರ ಮಿಮಿಕ್ರಿ, ಎಸ್‌.ಅರುಂಧತಿ ಆರೇರ ನೃತ್ಯ ರೂಪಕಮನಸೊರೆಗೊಂಡಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಾ-ಯೋಜಕತ್ವದಡಿ ಮೈಲಾರದ ನಿಂಗಪ್ಪ ಅಡಿವೆಪ್ಪನವರ ತಂಡದಿಂದ ಸುಗಮ ಸಂಗೀತ, ಹ್ಯಾರಡ ಎನ್‌. ಮಂಜುನಾಥ ತಂಡದಿಂದ ಜಾನಪದ ಗೀತ ಗಾಯನ ನಡೆಯಿತು.