‘ಬಡವರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು’
'The poor should get quality healthcare at low cost'
ಲೋಕದರ್ಶನ ವರದಿ
ಬೆಳಗಾವಿ 25: ವೈದ್ಯರು ಹಣದ ವ್ಯಾಮೋಹಕ್ಕೆ ಒಳಗಾಗದೆ ಬಡ ಜನರ ಆರೋಗ್ಯ ಸೇವೆ ಮಾಡಿದಾಗ ಮಾತ್ರ ಅವರ ಜೀವನ ಸಾರ್ಥಕವಾಗುತ್ತದೆ. ಬಡವರಿಗೆ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಸಿಗಬೇಕು ಎಂದು ರುದ್ರಾಕ್ಷಿಮಠದ ಗುರುಸಿದ್ಧ ಸ್ವಾಮೀಜಿ ಹೇಳಿದರು. ಭಾನುವಾರ ಬೆಳಗಾವಿ ಸದಾಶಿವ ನಗರದಲ್ಲಿ ಕಾಮಾಖ್ಯಾ ಡೈಗ್ನೋಸ್ಟಿಕ್ ಮತ್ತು ಸಂಶೋಧನಾ ಪ್ರಯೋಗಾಲಯ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ಬೆಳಗಾವಿಯಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಮರಿಚಿಕೆಯಾಗಿದೆ. ಎಲ್ಲರೂ ನೆರೆಯ ಜಿಲ್ಲೆಗೆ ಹೋಗುತ್ತಿದ್ದಾರೆ. ಕಡಿಮೆ ವೆಚ್ಚದಲ್ಲಿ ರೋಗಿಗಳಿಗೆ ಚಿಕಿತ್ಸೆ ದೊರೆಯಬೇಕು ಎಂದರು.ಸಮಾಜಕ್ಕೆ ಉಪಯೋಗ ಆಗುವ ಕೆಲಸ ಕಾಮಾಖ್ಯಾ ಪ್ರಯೋಗಾಲಯ ಕೈಕೊಂಡಿರುವ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ವೈದ್ಯಾಧಿಕಾರಿ ಡಾ.ಐ.ಪಿ.ಗಡಾದ ಮಾತನಾಡಿ ಈ ದಿನಗಳಲ್ಲಿ ಒಂದೇ ಸೂರಿನಡಿ ಸಕಲ ಸೌಲಭ್ಯಗಳನ್ನು ಒದಗಿಸಲು ಈ ಪ್ರಯೋಗ ಇಟ್ಟಿರುವ ಹೆಜ್ಜೆ ಶ್ಲಾಘನೀಯ ಎಂದು ಹೇಳಿದರು.ಡಿಸಿಪಿ ನಾರಾಯಣ ಭರಮನಿ ಅವರು ಮಾತನಾಡಿ ಕರೋನಾ ಕಾಲದ ನಂತರ ಕ್ಟಾಲಿಟಿ ಟ್ರಸ್ಟ ಟೆಸ್ಟ್,ಈಕಾನಮಿ ಕ್ಲಾಸ್ ಟೆಸ್ಟ್,ಮತ್ತು ಮನೆಗೆ ಬಂದು ಸೇವೆ ಸಲ್ಲಿಸುತ್ತಿರುವದು ಬಹಳಷ್ಟು ಅನುಕೂಲಕರ ಸಂಗತಿ.ಜಿಲ್ಲೆಯ ಜನರಿಗೆ ಹಾಗೂ ಗಡಿಭಾಗದಲ್ಲಿ ವಾಸಿಸಿರುವ ಜನರಿಗೆ ಉದ್ಯಮ ಎಂದು ತಿಳಿಯದೇ ಇದೊಂದು ಸೇವೆ ಎಂದು ತಿಳಿದು ಆರೋಗ್ಯ ಸೇವೆ ಸಲ್ಲಿಸಬೇಕು ಎಂದು ಕಿವಿಮಾತು ಹೇಳಿದರು.ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ್ ಕವಟಗಿಮಠ ಅವರು ಪ್ರತಿಯೊಬ್ಬ ಮನುಷ್ಯನ ಜೀವ ಅತ್ಯಮೂಲ್ಯ.
ಸಾಕಷ್ಟು ವೈದ್ಯಕೀಯ ಸವಾಲುಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ನಿಖರವಾದ ತಪಾಸಣೆ ಮುಖ್ಯ. ಈ ನಿಟ್ಟಿನಲ್ಲಿ ಕಾಮಾಖ್ಯ ಸಂಸ್ಥೆ ಮಾನ್ಯತೆಯನ್ನು ಹೊಂದಿರುವ ಸಂಸ್ಥೆಯಾಗಿದ್ದು ಅತ್ಯಾಧುನಿಕ ಹಾಗೂ ಗುಣಮಟ್ಟದ ಸೇವೆ ಸಲ್ಲಿಸಲಿದೆ. ಕೆ ಎಲ್ ಇ ಆಸ್ಪತ್ರೆ ಕಾಮಾಖ್ಯ ಸಂಸ್ಥೆ ಗೆ ಸದಾ ಸಹಕಾರ ನೀಡಲಿದೆ ಎಂದು ತಿಳಿಸಿದರು. ಸಂಸ್ಥೆಯ ನಿರ್ದೇಶಕ ಅನಿಲ ಪಾಟೀಲ ಎಲ್ಲರಿಗೂ ಸ್ವಾಗತ ಕೋರಿದರು. ಡಾ. ಪ್ರೀತಿ ಮೇದಾರ, ಡಾ.ಬಾಬುರಾವ ಗೋಗಲೆ, ಡಾ.ನಿಶಾಂತ ಜಂಬಗಿ ಅವರು ಸಂಸ್ಥೆಯ ಸೇವೆಗಳ ಬಗ್ಗೆ ಮಾತನಾಡಿದರು. ವೇದಿಕೆಯಲ್ಲಿ ಬಸವರಾಜ ನಾಗರಾಳೆ, ರವಿ ಸುತಾರ,ರಾಜು ನಾಶಿಪುಡಿ ಉಪಸ್ಥಿತರಿದ್ದರು. ಶುಭಾಂಗಿ ವಿಭೂತೆ ನೂತನ ಕಾರ್ಡ ಕುರಿತು ವಿವರಿಸಿ ವಂದನಾರೆ್ಣ ಸಲ್ಲಿಸಿದರು.
ಕನ್ನಡಪರ ನಿರ್ಣಯಕ್ಕೆ ಹಿಂದೇಟು: ಮಹಾಪೌರರ ನಡೆ ಈಗ ಸಂಶಯಕ್ಕೆ ಯಡೆ
ಬೆಳಗಾವಿಯಲ್ಲಿ ಬಿಗ್ ಹಾಕಿದ ಮನೆಗಳಿಗೆ ಪೊಲೀಸ ಭದ್ರತೆ ವ್ಯವಸ್ಥೆಗೆ ಜನರ ಮೆಚ್ಚುಗೆ
ಬೆಳಗಾವಿಗೆ ಬಂದ 20 ಜನ ಬಾಂಗ್ಲಾದವರಲ್ಲ : ಬಂಗಾಳ ಮೂಲದ ಚಿನ್ನದಂಗಡಿ ಕೂಲಿ ಕಾರ್ಮಿಕರು
ಭೀಕರ ಅಪಘಾತಕ್ಕೆ ಓರ್ವ ಸಾವು : ಮೂವರಿಗೆ ಗಂಭೀರ ಗಾಯ
ಶವ ವಾಹನದಲ್ಲಿ ಹಾಳಾದ ಸ್ಟ್ರೆಚರ್ : ಶವ ಸಾಗಿಸಲು ನಾಗರಿಕರ ಪರದಾಟ : ಸ್ಟ್ರೆಚರ್ ಖರೀದಿಗೆ ಪುರಸಭೆಯಲ್ಲಿ ದುಡ್ಡು ಇಲ್ಲವಾ?
ನೀಲಣ್ಣವರ ಪರ ಮಹಾರಾಷ್ಟ್ರದ ಹೂಡಿಕೆದಾರನ ಬ್ಯಾಟಿಂಗ್: ಪೊಲೀಸರ ವಿರುದ್ದ ಆಕ್ರೋಶದ ಅಡಿಯೊ ವೈರಲ್ 