ಆ. 2ರಂದು ಸಂಗೀತ ಗಂಗಾ ಪ್ರಶಸ್ತಿ ಪುರಸ್ಕೃತೆ ಡಿ.ಎಸ್‌. ಜಾನಕಿ ಅವರಿಗೆ ಸ್ವರನಮನ

ಆ. 2ರಂದು ಸಂಗೀತ ಗಂಗಾ ಪ್ರಶಸ್ತಿ ಪುರಸ್ಕೃತೆ ಡಿ.ಎಸ್‌. ಜಾನಕಿ ಅವರಿಗೆ ಸ್ವರನಮನ  'Svaranamana' (Musical Tribute) for 'Sangeeta Ganga' awardee D.S. Janaki on August 2

ಲೋಕದರ್ಶನ ವರದಿ 

ಗದಗ 31: ಸಂಗೀತ ಗಂಗಾ ಪ್ರಶಸ್ತಿ ಪುರಸ್ಕೃತೆ ಡಿ.ಎಸ್‌. ಜಾನಕಿ ಅವರಿಗೆ ಸ್ವರನಮನ ಕಾರ್ಯಕ್ರಮವನ್ನು ಆಗಸ್ಟ್‌ 2ರಂದು (ಭಾನುವಾರ) ಸಂಜೆ 5.30ಕ್ಕೆ ಗದಗದ ಜಿಲ್ಲಾ ಕ್ರೀಡಾಂಗಣದ ಸಮೀಪದ ಸಂಕೇತ ಸಂಕೀರ್ಣದಲ್ಲಿ ಆಯೋಜಿಸಲಾಗಿದೆ.  ಕಾರ್ಯಕ್ರಮದ ಸಾನ್ನಿಧ್ಯವನ್ನು ಪೂಜ್ಯ ಶಂಕರಾನಂದ ಮಹಾಸ್ವಾಮಿಗಳು (ಮುಕ್ಕಣ್ಣೇಶ್ವರ ಮಠ) ವಹಿಸಲಿದ್ದು, ನಿವೃತ್ತ ಉಪನಿರ್ದೇಶಕ ಐ.ಬಿ. ಬೆನಕೊಪ್ಪ ಅಧ್ಯಕ್ಷತೆ ವಹಿಸಲಿದ್ದಾರೆ.  

ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವಿ.ವಿ. ನಡುವಿನಮನಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಗೀತಾಂಜಲಿ ಗೌಡರ್ ಹಾಗೂ ಸರ್ಕಾರಿ ಪ್ರೌಢಶಾಲೆ ಎಸ್‌.ಎಂ. ಕೃಷ್ಣನಗರದ ಶಿಕ್ಷಕರು ಭಾಗವಹಿಸಲಿದ್ದಾರೆ.  

ಸಂಗೀತ ಕಾರ್ಯಕ್ರಮದಲ್ಲಿ ಶ್ರೀನಿವಾಸ ಕುಲಕರ್ಣಿ, ಶಿಲ್ಪಾ ಕುರಹಟ್ಟಿ, ಸಂಗಮೇಶ್ವರ ಪಾಟೀಲ ಹಾಗೂ ರಾಹುಲ್ ರಾಠೋಡ್ ಅವರು ಸಂಗೀತ ನಮನ ಸಲ್ಲಿಸಲಿದ್ದಾರೆ.  ಸಂಗೀತಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಆಯೋಜಕರ ಪರವಾಗಿ ವೈ.ಆರ್‌. ಹಿರೇಗೌಡರ್ ಮನವಿ ಮಾಡಿದ್ದಾರೆ.