ಸಾಹಿತಿ ಕಿರಣ ಗಣಾಚಾರಿಗೆ ‘ಶಿಭಾ ಕಾವ್ಯ ಪುರಸ್ಕಾರ’
'Shibha Poetry Award' for writer Kiran Ganachari
ಬೆಳಗಾವಿ 03 : ಸಾಹಿತಿಗಳಾದ ಕಿರಣ ಕ .ಗಣಾಚಾರಿ ಅವರ ’ಬೆಳಕಿನ ಹೊಳೆಯ ಪ್ರವಾಹ’ ಕೃತಿಗೆ ಸಾಹಿತ್ಯ ಸೌರಭ ಪೌಂಡೇಶನ್ ಕೊಡಮಾಡುವ 2025 ನೇ ಸಾಲಿನ "ಶಿಭಾ ಕಾವ್ಯ ಪುರಸ್ಕಾರ" ದೊರೆತಿದೆ ಎಂದು ಅಧ್ಯಕ್ಷ ಶಿವಾನಂದ ಭಾಗಾಯಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪ್ರಶಸ್ತಿಯು ಸ್ಮರಣಿಕೆ, ಪ್ರಶಸ್ತಿ ಪತ್ರ ಹಾಗೂ ಪುಸ್ತಕಗಳನ್ನು ಒಳಗೊಂಡಿದ್ದು, ಮೆ 1 ರಂದು ಬೆಳಗಾವಿಯ ಕನ್ನಡ ಭವನದಲ್ಲಿ ನಡೆಯುವ ಪೌಂಡೇಶನ್ ನ 2 ನೇ ವರ್ಷದ ವಾರ್ಷಿಕೋತ್ಸವದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಲಾಗಿದೆ.
ಕಿರಣ ಗಣಾಚಾರಿ ಅವರು ಮೂಲತ: ಖಾನಾಪೂರ ತಾಲೂಕಿನ ಇಟಗಿ ಗ್ರಾಮದವರಾಗಿದ್ದು ಕಲ್ಪನಾ ಛಾಯೆಯಲಿ, ಕಿರು ನಗೆ, ಬೆಳಕಿನ ಹೊಳೆಯ ಪ್ರವಾಹ ಎಂಬ ಪುಸ್ತಕಗಳನ್ನು ಪ್ರಕಟಿಸಿರುತ್ತಾರೆ. ಶ್ರೀಯುತರು ’ಸುವರ್ಣ ಕರ್ನಾಟಕ ಕಣ್ಮಣಿ’ ರಾಜ್ಯ ಪ್ರಶಸ್ತಿಗೆ ಭಾಜನರಾಗಿದ್ದು ಕಥೆ, ಅಂಕಣ ಬರಹ,ವಿಮರ್ಶಾ ಲೇಖನಗಳು, ಕವನ, ಚುಟುಕು -ಹನಿಗವನಗಳು,ಆಧುನಿಕ ವಚನಗಳು ಮುಂತಾದ ಸಾಹಿತ್ಯ ಪ್ರಕಾರಗಳಲ್ಲಿ ಸಾಹಿತ್ಯ ಕೃಷಿಯಲ್ಲಿ ತೊಡಗಿರುತ್ತಾರೆ. ಮೈಸೂರು ದಸರಾ ಕವಿಗೋಷ್ಠಿಯನ್ನೊಳಗೊಂಡು ಹಲವಾರು ರಾಜ್ಯಮಟ್ಟದ ಗೋಷ್ಠಿಗಳಲ್ಲಿ ಭಾಗವಹಿಸುತ್ತಿದ್ದು ಆಕಾಶವಾಣಿ ಧಾರವಾಡ ಹಾಗೂ ನಮ್ಮೂರ ಬಾನುಲಿ ಬೆಳಗಾವಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ನೀಡಿರುತ್ತಾರೆ.
11 ವರ್ಷಗಳಲ್ಲಿ ಡಿಜಿಟಲ್ ಇಂಡಿಯಾ ಆಡಳಿತವನ್ನು ಪರಿವರ್ತಿಸಿ, ನಾಗರಿಕರನ್ನು ಸಬಲಗೊಳಿಸಿದೆ: ಪ್ರಧಾನಿ ಮೋದಿ
ಮುಂಬೈನ ಚೆಂಬೂರಿನಲ್ಲಿ ಶಾಲಾ ಬಸ್ ಮೇಲೆ ಮರ ಉರುಳಿ ಬಿದ್ದು ವಿದ್ಯಾರ್ಥಿ ಸಾವು; ನಾಲ್ವರಿಗೆ ಗಾಯ
ಹುಡುಗಿಯ ಮನೆ ದರೋಡೆ, ಅಂತರಜಾತಿ ಪ್ರೇಮಿಗಳು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ, ಮರ್ಯಾದಾ ಹತ್ಯೆಗಳ ಅನುಮಾನ
ಡಿಸಿಸಿ ಬ್ಯಾಂಕಿನ 10 ವರ್ಷ ಮೇಲ್ಪಟ್ಟ ನಿರ್ದೇಶಕರ ಅನರ್ಹತೆ: ಆರ್ಬಿಐ ನಿಯಮ ಜಾರಿಗೆ ನಬಾರ್ಡ್ ಒತ್ತಾಯ, ಸರ್ಕಾರಕ್ಕೆ ಎಚ್ಚರಿಕೆ
ಮಹಾ ಸಿಎಂ ಜೊತೆ ಎಮ್ ಇಎಸ್ ಉನ್ನತಾಧಿಕಾರ ಸಭೆ ರದ್ದು: ಝಾಪಾ ಮುಖಂಡರು ಬರಿಗೈಯಿಂದ ವಾಪಸ್
ವಿವಾಹಿತೆಯ ಜೊತೆ ಪಲಾಯನ ಮಾಡಿದ ಯುವಕನ ಮನೆ ಧ್ವಂಸ : ಮಾರಕಾಸ್ತ್ರ ಹಿಡಿದು 50ಕ್ಕು ಹೆಚ್ಚು ಜನರಿಂದ ಕೃತ್ಯ 