ಜುಲೈ 24ರಂದು ಅಮೆರಿಕಾದಲ್ಲಿ ಬಿಡುಗಡೆಯಾಗಲಿರುವ ’ರಾಮಾಯಣ’ ಟ್ರೇಲರ್

ಜುಲೈ 24ರಂದು ಅಮೆರಿಕಾದಲ್ಲಿ ಬಿಡುಗಡೆಯಾಗಲಿರುವ ’ರಾಮಾಯಣ’ ಟ್ರೇಲರ್  'Ramayana' trailer to be released in the US on July 24

ಸಿನಿಮಾ ಲೋಕ  

ದೆಹಲಿಯ ಭಾರತ ಮಂಟಪಂನಲ್ಲಿ ಅದ್ದೂರಿಯಾಗಿ ನಡೆಯಿತು ರಾಮಾಯಣ ’ಪ್ರಥಮ ಸಂಕಲ್ಪ’ಜುಲೈ 24ರಂದು ಅಮೇರಿಕಾದಲ್ಲಿ ಬಿಡುಗಡೆ ಆಗಲಿದೆ ಟ್ರೇಲರಿ​‍್ಡ ವಿಶ್ವ ಬಹು ನೀರೀಕ್ಷೆಯಿದ ಕಾಯುತ್ತಿರುವ ನಮಿತ್ ಮಲ್ಹೋತ್ರಾ ’ರಾಮಾಯಣ’ ಸಿನಿಮಾದ ಟ್ರೇಲರ್ ಜುಲೈ 24ರಂದು ಅಮೇರಿಕಾದಲ್ಲಿ ಅದ್ದೂರಿಯಾಗಿ ಬಿಡುಗಡೆ ಆಗಲಿದೆ. ಅದಕ್ಕೂ ಮೊದಲೇ ಇತ್ತೀಚೆಗೆ ದೆಹಲಿಯ ಭಾರತ ಮಂಟಪಂನಲ್ಲಿ ರಾಮಾಯಣ ತಂಡದಿಂದ ’ಪ್ರಥಮ ಸಂಕಲ್ಪ’ ಹೆಸರಿನಲ್ಲಿ ಅದ್ದೂರಿ ಕಾರ್ಯಕ್ರಮ ನಡೆಯಿತು. ಈ ವೇದಿಕೆಯಲ್ಲಿ ಹಲವು ರಾಜ್ಯಗಳ ಮಾಧ್ಯಮಗಳ ಪ್ರತಿನಿಧಿಗಳ ಸಮ್ಮುಖದಲ್ಲಿ ಚಿತ್ರದ ಟ್ರೇಲರ್ ಪ್ರದರ್ಶನ ಮಾಡಲಾಯಿತು. ಟ್ರೇಲರ್ ನೋಡಿದಾಗ ಇದೊಂದು ಮೈಲುಗಲ್ಲು ಸೃಷ್ಟಿಸುವ ಸಿನಿಮಾ ಎಂಬ ಭರವಸೆ ಮೂಡಿಸಿದೆ. ರಾಕಿಂಗ್ ಸ್ಟಾರ್ ಯಶ್ ಎಂಟ್ರಿಯಿಂದ ಶುರುವಾಗುವ ಟ್ರೇಲರ್ ನಲ್ಲಿ ರಾಮ, ಸೀತಾ, ಲಕ್ಷ್ಮಣ, ಹನುಮಂತ ಸೇರಿದಂತೆ ರಾಮ-ರಾವಣನ ಕಾಳಗವನ್ನು ಅದ್ದೂರಿಯಾಗಿ ತೋರಿಸಲಾಗಿದೆ.

ಅಂದಂಗೆ ಈ ಟ್ರೇಲರ್ ನೋಡಲು ಜನ ಜುಲೈ 24ರ ವರೆಗೆ ಕಾಯಲೇ ಬೇಕು. ಕಾರಣ ಅಂದು ಅಧಿಕೃತವಾಗಿ ರಾಮಾಯಣ ಟ್ರೇಲರ್ ಅಮೇರಿಕಾದ ಅದ್ದೂರಿ ವೇದಿಕೆಯಲ್ಲಿ ಬಿಡುಗಡೆ ಆಗಲಿದೆ.ದೆಹಲಿಯ ಪ್ರಥಮ ಸಂಕಲ್ಪ ಕಾರ್ಯಕ್ರಮದಲ್ಲಿ ಚಿತ್ರದ ನಿರ್ಮಾಪಕ ನಮಿತ್ ಮಲ್ಹೋತ್ರಾ ಮಾತನಾಡಿ, ’ನಾವು ರಾಮಾಯಣ ಮಾಡಲು ಸಂಕಲ್ಪ ಪಟ್ಟೆವು. ಭಾರತದ ಈ ರಾಮಾಯಣ ಇಡಿ ವಿಶ್ವಕ್ಕೆ ತೋರಿಸಲು ಇಷ್ಟಪಟ್ಟೆ. ನಾನು ಮೂರು ವ್ಯಕ್ತಿಗಳ ಸಹಾಯದಿಂದ ಸಣ್ಣ ಕಂಪನಿ ಪ್ರಾರಂಭ ಮಾಡಿದೆ. ಇಂಡಿಯನ್ ಫಿಲ್ಮ್‌ ಇಂಡಸ್ಟ್ರಿ ಹಾಲಿವುಡ್ ಗೆ ದೂರ ಇದೆ. ನಮ್ಮ ಇಂಡಸ್ಟ್ರಿ ಅಲ್ಲಿಗೆ ಹೋಗಲು ಏನಾದರೂ ಮಾಡಬೇಕು ಎಂದು ತೀರ್ಮಾನ ಮಾಡಿದೆ. ಆ ದೃಷ್ಟಿಯಿಂದ ಶುರುವಾದ ನಮ್ಮ ವಿ.ಎಫ್‌.ಎಕ್ಸ್‌ ಸಂಸ್ಥೆ ಇಂದು ಆಸ್ಕರ್ ಪ್ರಶಸ್ತಿ ಪಡೆದಿದೆ. ಈ ರಾಮಾಯಣ ಮಾಡಲು ಎಲ್ಲಿಯೂ ಕಾಂಪ್ರೈಮೈಸ್ ಆಗಿಲ್ಲ. ರಾಮಾಯಣವನ್ನು ಮೂರು ಮಹಾತ್ಮರು ಮೂರು ತರ ಬರೆದಿದ್ದಾರೆ. ಅವುಗಳನ್ನು ಆಧಾರವಾಗಿ ಇಟ್ಟುಕೊಂಡು ಈ ರಾಮಾಯಣ ಮಾಡಲಾಗಿದೆ. 5 ಕ್ಯಾರೆಕ್ಟರ್ ಮೇಲೆ ರಾಮಾಯಣ ಸಿನಿಮಾ ಮಾಡಬಹುದು.

ಈ ಚಿತ್ರದಲ್ಲಿ ಅವರೆಲ್ಲಾ ಹೀರೋಗಳೆ. ಪ್ರತಿ ಇಂಡಿಯನ್ ಮನಸಲ್ಲಿ ರಾಮಾಯಣ ಇರಬೇಕು ಎಂಬ ಉದ್ದೇಶ ನಮ್ಮದು. ಈ ರಾಮಾಯಣ ಹಾಗೂ ಭಾರತಕ್ಕಾಗಿ ನಾನು ಏನೂ ಮಾಡಲು ಸಿದ್ದ’ ಎಂದರು.ನಂತರ ನಿರ್ದೇಶಕ ನಿತೇಶ್ ತಿವಾರಿ, ’ರಾಮಾಯಣವನ್ನು ನಾನು ಮಾಡಲಿಲ್ಲ. ಅದು ನನ್ನನ್ನು ಆಯ್ಕೆ ಮಾಡಿದ್ದು ನನ್ನ ಅದೃಷ್ಟ. ಸಂಪೂರ್ಣ ಶ್ರಮದಿಂದ ಸಿನಿಮಾ ಮಾಡಿದ್ದೇನೆ. ರಾಮಾಯಣದಲ್ಲಿ ನಿಷ್ಠೆ, ಶ್ರಮ, ಪ್ರೇಮ ಎಲ್ಲ ಇದೆ. ನಮೀತ್ ಭಾರತಿಯನಾಗಿ ಇಡಿ ವಿಶ್ವಕ್ಕೆ ರಾಮಾಯಣ ದರ್ಶನ ಮಾಡಿಸುತ್ತಿದ್ದಾರೆ. ಅವರಿಗೆ ಇಳ್ಳೆಯದಾಗಬೇಕು. ಎಲ್ಲರಿಗೂ ರಾಮಾಯಣದ ಕಥೆ ಗೊತ್ತು. ಅವರು ಹೇಗೆ ಇದ್ದರು ಎಂಬುದನ್ನು ಇದರಲ್ಲಿ ತೋರಿಸುವ ಪ್ರಯತ್ನ ಮಾಡಲಾಗಿದೆ’ ಎಂದು ಹೇಳಿದರು. ಇನ್ನು ಚಿತ್ರದ ನಿರ್ಮಾಣದಲ್ಲೂ ಪಾಲುದಾರ ಹಾಗೂ ರಾವಣ ಪಾತ್ರ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಮಾತನಾಡಿ, ’ಈ ಎಲ್ಲ ಕ್ರೆಡಿಟ್ ನಿರ್ಮಾಪಕ ನಮೀತ್ ಮಲೊತ್ರಾಗೆ ಹೋಗಬೇಕು.

ಅವರು ಕರೆದು ಪಾತ್ರ ಕೊಟ್ಟರು. ಇದು ಇಂಡಿಯಾದ ಕನಸು. ಸಿನಿಮಾ ಗ್ಲೋಬಲ್ ಪ್ಲಾಟ್ ಫಾರಂ. ಇಡಿ ತಂಡಕ್ಕೆ ಧನ್ಯವಾದ’ ಎಂದರು.ಇದೇ ಸಂದರ್ಭದಲ್ಲಿ ಮಹರಾಜ ದಶರಥನ ಪಾತ್ರ ಮಾಡಿರುವ ಅರುಣ್ ಗೋವಿಲ್ ಮಾತನಾಡಿ, ’ಪ್ರತಿಯೊಬ್ಬರ ಬಾಯಲ್ಲೂ ಒಂದಲ್ಲಾ ಒಂದು ತರಹದಲ್ಲಿ ರಾಮ ಬರತಾನೆ ಇರುತ್ತಾನೆ. ಸಿನಿಮಾ ಅನೌನ್ಸ್‌ ಆದಾಗ ತಂಡವನ್ನು ಸಂಪರ್ಕಿಸಿದ್ದೆ. ನನಗೆ ಪಾತ್ರ ಕೊಡಲು ಅವರು ನಿರಾಕರಿಸಿದರು. ನಾನು ರಾಮಣ ಚರಿತ್ರೆ ಹೇಳಬೇಕು ಪಾತ್ರ ಬೇಡ ಎಂದಿದ್ದೆ. ಭಾರತೀಯ ಫಿಲ್ಮ್‌ ಇಂಡಸ್ಟ್ರಿಯನ್ನು ಇಂದು ನಮೀತ್ ಹಾಲಿವುಡ್ ಲೆವೆಲ್ ಗೆ ತಗೊಂಡು ಹೋಗಿದ್ದಾರೆ. ನಿರ್ದೇಶಕರು ಅಷ್ಟೇ ಹಂಬಲ್ ಆಗಿ ಸಿನಿಮಾ ಮಾಡಿದ್ದಾರೆ. ನಾನು ಈ ಚಿತ್ರದಲ್ಲಿ ಮಹರಾಜ ದಶರಥನ ಪಾತ್ರ ಮಾಡಿದ್ದೇನೆ’ ಎಂದರು. ನಂತರ ಸೀತಾ ಪಾತ್ರ ಮಾಡಿರುವ ಸಾಯಿ ಪಲ್ಲವಿ, ’ಪಾತ್ರ ಸರಳವಾಗಿ ಇರಲಿಲ್ಲ.

ನನಗೆ ಸೀತಾ ಪಾತ್ರ ಮಾಡಲು ಅವಕಾಶ ಬಂದಾಗ ದೇವರ ಆಶೀರ್ವಾದ ಇದೆ ಎಂದುಕೊಂಡೆ. ಮೂರು ವರ್ಷ ಇದರಲ್ಲಿ ವರ್ಕ್‌ ಮಾಡಿದ್ದು 10 ವರ್ಷದ ಅನುಭವ ನೀಡಿದೆ’ ಎಂದರು. ರಣಬೀರ ಕಪೂರ್, ’ಅರುಣ್ ಅವರ ರಾಮನ ಪಾತ್ರದ ಒಂದು ಪರ್ಸೆಂಟ್ ಮಾಡಿದರೂ ನಾನು ಧನ್ಯ. ನಿಮ್ಮ ಪಾತ್ರ ನೋಡಿ ಬೆಳದವ ನಾನು’ ಎಂದಷ್ಟೇ ಹೇಳಿದರು.ಕಾರ್ಯಕ್ರಮದ ಕೊನೆಯಲ್ಲಿ ಹನುಮಾನ್ ಪಾತ್ರ ಮಾಡಿರುವ ಸನ್ನಿ ಡಿಯೋಲ್, ’ರಾಮಾಯಣ ನಮ್ಮ ಭಾರತಿಯರಿಗೆ ದೊಡ್ಡ ಶಕ್ತಿ. ನಂಗೆ ಹನುಮಾನ್ ಪಾತ್ರ ಮಾಡಿದ್ದು ಖುಷಿ ಇದೆ. ಆ ಕ್ಯಾರೆಕ್ಟರ್ ಮಾಡೋದು ಅಷ್ಟು ಸುಲಭವಲ್ಲ. ನನಗೆ ವಿಶ್ವಾಸವಿದೆ. ಇಡೀ ಇಂಡಿಯಾ ಈ ರಾಮಾಯಣವನ್ನು ಇಷ್ಟ ಪಡುತ್ತಾರೆ’ ಎಂದು ಹೇಳಿದರು. ವಿವೇಕ್ ಒಬೆರಾಯ್, ಅಮೀರ್ ಖಾನ್, ರಾಕುಲ್ ಪ್ರೀತ್ ಸಿಂಗ್, ರಾಮ್ ದೇವ್ ಗುರೂಜಿ ಸೇರಿದಂತೆ ಹಲವು ಗಣ್ಯರು ಹಾಜರಿದ್ದರು.