‘ಒಲವು ಮೂಡಿದಾಗ’ ಕವನ ಸಂಕಲನ ಲೋಕಾರೆ​‍್ಣ

‘ಒಲವು ಮೂಡಿದಾಗ’ ಕವನ ಸಂಕಲನ ಲೋಕಾರೆ​‍್ಣ  'Olavu Moodidaga' poetry collection released

ಬಳ್ಳಾರಿ  10: ಕವಯತ್ರಿ ಟಿ. ಲೀಲಾವತಿ (ಸಾಯಿಲೀಲಾ) ಅವರ ‘ಒಲವು ಮೂಡಿದಾಗ’ ಕವನ ಸಂಕಲನವನ್ನು ಕನ್ನಡ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಾರೆ​‍್ಣ ಮಾಡಲಾಯಿತು.  ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ರಜುಬೇರ್, ಉದ್ಯೋಗದ ನಡುವೆಯೂ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಂಡಿರುವ ಲೀಲಾವತಿ ಅವರು ಕನ್ನಡ ಸಾಹಿತ್ಯಕ್ಕೆ ಇನ್ನಷ್ಟು ಕೊಡುಗೆ ನೀಡಲಿ ಎಂದು ಆಶಿಸಿದರು.  

ಕುರಗೋಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ. ಶಾಂತಲಾ ಅವರು ಕವನ ಸಂಕಲನದ ಕುರಿತು ಮಾತನಾಡಿ, ಕೃತಿಯಲ್ಲಿನ ಕವನಗಳು ಇಂದಿನ ಸಾಮಾಜಿಕ ಹಾಗೂ ಕೌಟುಂಬಿಕ ಬದುಕಿನ ಘಟನೆಗಳಿಗೆ ಸಂಬಂಧಿಸಿವೆ. ಕೌಟುಂಬಿಕ ಸಾಮರಸ್ಯ, ಒಲವು ಮತ್ತು ಸಾಮಾಜಿಕ ಕಳಕಳಿ ಕವನಗಳ ಜೀವಾಳವಾಗಿವೆ ಎಂದು ಹೇಳಿದರು.  

ಡಾ. ವೇಣುಗೋಪಾಲ್ ಎನ್‌.ಎಸ್‌. ಅವರು ಕೃತಿಯ ಕುರಿತು ಮಾತನಾಡಿ, ಉದ್ಯೋಗ ಮತ್ತು ಸಂಸಾರದ ನಡುವೆಯೂ ಸಾಹಿತ್ಯದ ಒಡನಾಟ ಬೆಳೆಸಿಕೊಂಡಿರುವ ಲೀಲಾವತಿ ಅವರ ಕವನ ಸಂಕಲನ ಹೊರಬಂದಿರುವುದು ಸಂತಸದ ಸಂಗತಿ ಎಂದರು. ಸಂಕಲನದಲ್ಲಿ ಒಟ್ಟು 35 ಕವನಗಳಿದ್ದು, ಒಲವು, ಪುಸ್ತಕ ಪ್ರೀತಿ, ದೈವಸ್ಮರಣೆ, ಹಸಿವು, ವಿಧಿ, ಸ್ನೇಹ, ವ್ಯಕ್ತಿಚಿತ್ರಣ, ನಿರಾಸೆ ಸೇರಿದಂತೆ ವಿವಿಧ ಭಾವನೆಗಳು ವ್ಯಕ್ತವಾಗಿವೆ ಎಂದು ತಿಳಿಸಿದರು.  

ಕವಯತ್ರಿ ಟಿ. ಲೀಲಾವತಿ ಮಾತನಾಡಿ, ‘ಸಾಯಿಲೀಲಾ’ ಕಾವ್ಯನಾಮದಲ್ಲಿ ರಚಿಸಿರುವ ತಮ್ಮ ಮೊದಲ ಕವನ ಸಂಕಲನ ‘ಒಲವು ಮೂಡಿದಾಗ’ ಪ್ರಕಟವಾಗುತ್ತಿರುವುದು ಸಂತಸ ತಂದಿದೆ. ಕೃತಿಯ ಪ್ರಕಟಣೆಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.  

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಡಾ. ನಿಷ್ಠಿ ರುದ್ರ​‍್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ್, ಜಿಲ್ಲಾ ಪರಿಶಿಷ್ಟ ವರ್ಗಗಳ ಅಭಿವೃದ್ಧಿ ಅಧಿಕಾರಿ ಶಾಶು, ಜಿಲ್ಲಾ ಬಲಿಜ ಸಂಘದ ಅಧ್ಯಕ್ಷ ರಮೇಶ್ ಬುಜ್ಜಿ, ಮಹಾನಗರ ಪಾಲಿಕೆ ಸದಸ್ಯ ಹನುಮಂತಪ್ಪ, ಶ್ರೀ ಮಠಂ ತಿಪ್ಪೇಸ್ವಾಮಿ ಸೇರಿದಂತೆ ಕಂದಾಯ ಇಲಾಖೆಯ ಅಧಿಕಾರಿಗಳು, ಸಾಹಿತಿಗಳು ಹಾಗೂ ಕನ್ನಡಾಭಿಮಾನಿಗಳು ಭಾಗವಹಿಸಿದ್ದರು.  ಕಾರ್ಯಕ್ರಮವನ್ನು ಡಾ. ತಿಪ್ಪೇರುದ್ರ ಸಂಡೂರು ನಿರೂಪಿಸಿದರು. ಶ್ರೀಮತಿ ನಯನ ಪ್ರಾರ್ಥಿಸಿದರು. ರೇಣುಕಾ ಎಸ್‌. ಸ್ವಾಗತಿಸಿದರು.