‘ಓದು ಕರ್ನಾಟಕ’ ಯೋಜನೆ ವಿದ್ಯಾರ್ಥಿಗಳಿಗೆ ಪೂರಕ; ಟಕ್ಕೆ
'Odu Karnataka' scheme to supplement students' meals
ಸಿಂದಗಿ 28: ಓದು ಕರ್ನಾಟಕ" ಎಂಬುದು ಕರ್ನಾಟಕ ಸರ್ಕಾರದ ಒಂದು ಯೋಜನೆಯಾಗಿದ್ದು, 2025-26ನೇ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಶಾಲೆಗಳ 3 ಮತ್ತು 5 ನೇ ತರಗತಿಯ ವಿದ್ಯಾರ್ಥಿಗಳ ಕಲಿಕೆಯನ್ನು ಸುಧಾರಿಸುವ ಗುರಿಯನ್ನು ಹೊಂದಬೇಕು ಎಂದು ಕ್ಷೇತ್ರ ಸಮನ್ವಯಾಧಿಕಾರಿ ಆಯ್.ಎಸ್.ಟಕ್ಕೆ ಹೇಳಿದರು.
ನಗರದ ಎಚ್ ಜಿ ಹೈಸ್ಕೂಲ ಆವರಣದ ಟಿಎಸ್‌ಪಿ ಮಂಡಳಿಯ ಕಾನೂನು ಮಹಾ ವಿದ್ಯಾಲಯದ ಸಭಾ ಭವನದಲ್ಲಿ ಶುಕ್ರವಾರ ತಾಲೂಕಿನ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಓದು ಕರ್ನಾಟಕ ಸರಳ ಕನ್ನಡ-ಸರಳ ಗಣಿತ ತರಬೇತಿ ಕಾರ್ಯಗಾರದಲ್ಲಿ ಅವರು ಭಾಗವಹಿಸಿ ಮಾತನಾಡಿ, ಓದು ಕರ್ನಾಟಕ ಸರ್ಕಾರದ ಬಜೆಟ್ ಕಾರ್ಯಕ್ರಮವಾಗಿದೆ. ಸರಕಾರಿ ಶಾಲಾ ಮಕ್ಕಳಿಗೆ ಈ ಯೋಜನೆ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಮಕ್ಕಳಿಗೆ ಉತ್ತಮ ಚಟುವಟಿಕೆ ಮೂಲಕ ಶಿಕ್ಷಕರು ಕ್ರಿಯಾತ್ಮಕವಾಗಿ ಭಾಗವಹಿಸುವುದರಿಂದ ಮಕ್ಕಳಿಗೆ ಕಲಿಕೆ ಉತ್ತಮವಾಗುತ್ತದೆ . ಗಣಿತ ಗಣಕವು ಮಕ್ಕಳು ಪಾಲಕರೊಂದಿಗೆ ಸಹಕಾರ ಪಡೆದು ಮಕ್ಕಳಿಗೆ ರಾತ್ರಿ 8 ನಂತರ ಕರೆ ಮಾಡಿ ಮಗುವಿಗೆ ಯಾವ ತೊಂದರೆ ಇದೆ ಎಂಬುದು ತಿಳಿದು ಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಎಂದು ತಿಳಿಸಿದರು.
ಆಲಮೇಲ ತಾಲೂಕು ಸರಕಾರಿ ನೌಕರ ಸಂಘದ ಅಧ್ಯಕ್ಷ ರವಿ ಜಿ ಬಿರಾದಾರ ಮಾತನಾಡಿ, ಪ್ರತಿ ಮಗುವೂ ಮೌಖಿಕ ಮತ್ತು ಲಿಖಿತ ರೂಪದಲ್ಲಿ ತನ್ನ ಸ್ವಂತ ಭಾವನೆಯನ್ನು ವ್ಯಕ್ತ ಪಡಿಸುವ ಕಾರ್ಯಕ್ರಮ ಓದು ಕರ್ನಾಟಕ ಮಕ್ಕಳಿಗೆ ಪೂರಕವಾಗಿದೆ ಎಂದರು .
ತರಬೇತಿದಾರ ಸಂತೋಷ ರಜಪೂತ, ಲಕ್ಷ್ಮಣ ಪಾಟೀಲ, ಬಿಆರ್‌ಪಿ ಸಾಹೇಬಗೌಡ ಬಿರಾದಾರ. ಜೆ ಎಸ್ ಅಲ್ದಿಮಠ, ವಾಯ್ ಎಮ್ ಬಿರಾದಾರ, ಎಫ್. ಆರ್. ಕಾಚೂರ, ಎಸ್. ಎ. ರೆಬಿನಾಳ , ಎ ಎಸ್ ಯತ್ನಾಳ ಸಿ. ಆರ್. ಪಿ. ಗಳಾದ ಎಮ್ ಎನ್. ವಡೆಯರ, ವಿ ಎಮ್ ಚೌಧರಿ, ಸಂಜು ರಾಠೋಡ, ಎಸ್ ಆರ್ ಮುಲ್ಲಾ, ಎಮ್.ಎಮ್.ದಬಾಡೆ, ಎಮ್.ಯು.ಮೇಲಿನಮನಿ, ಕಾಸಿಮ್ ವಾಲಿಕಾರ, ರಾಯಪ್ಪ ಇವಣಗಿ, ಜಿ ಪಿ ಬಿರಾದಾರ. ಸೇರಿದಂತೆ ಶಿಕ್ಷಕರು ಇದ್ದರು. ಸಿ.ಆರ್.ಪಿ.ಪರಮಾನಂದ ಓಲೇಕಾರ ಸ್ವಾಗತಿಸಿದರು. ಶಿಕ್ಷಕ ಬಸವರಾಜ ಅಗಸರ ವಂದಿಸಿದರು.
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 