ಶ್ರಾವಣ ಮಾಸದ ನೂಲು ಹುಣ್ಣಿಮೆ: ನಿಮಿಷಾಂಬ ದೇವಿ ಗಂಗೇಸ್ಥಳದ ಮೆರವಣಿಗೆ

ಶ್ರಾವಣ ಮಾಸದ ನೂಲು ಹುಣ್ಣಿಮೆ: ನಿಮಿಷಾಂಬ ದೇವಿ ಗಂಗೇಸ್ಥಳದ ಮೆರವಣಿಗೆ  'Noolu Hunnime' in the month of Shravana: Procession of Goddess Nimishamba to the Gangestala

ಲೋಕದರ್ಶನ ವರದಿ  

ಕಂಪ್ಲಿ, ಆಗಸ್ಟ್‌ 28: ಶ್ರಾವಣ ಮಾಸದ ನೂಲು ಹುಣ್ಣಿಮೆ ಪ್ರಯುಕ್ತ ಶ್ರೀ ನಿಮಿಷಾಂಬ ದೇವಿಯ ಗಂಗೇಸ್ಥಳದ ಮೆರವಣಿಗೆ ಶುಕ್ರವಾರ ಪಟ್ಟಣದಲ್ಲಿ ಸಂಭ್ರಮದಿಂದ ನಡೆಯಿತು.  ಕಂಪ್ಲಿ-ಕೋಟೆಯ ತುಂಗಭದ್ರಾ ನದಿಯಲ್ಲಿ ಗಂಗೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಭವ್ಯ ಮೆರವಣಿಗೆ ಶ್ರೀ ನಿಮಿಷಾಂಬ ದೇವಾಲಯವನ್ನು ತಲುಪಿತು.  

ಗಂಗೇಸ್ಥಳದ ನಿಮಿತ್ತ ದೇವಾಲಯದಲ್ಲಿ ಪಂಚಾಮೃತ ಅಭಿಷೇಕ, ಕುಂಕುಮಾರ್ಚನೆ, ಮಹಾಮಂಗಳಾರತಿ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರಿದವು. ಸಂಜೆ ದೇವಾಲಯದಲ್ಲಿ ಪಲ್ಲಕ್ಕಿ ಉತ್ಸವವೂ ನಡೆಯಿತು.  

ಸೋಮವಂಶ ಆರ್ಯ ಕ್ಷತ್ರಿಯ ಚಿತ್ರಗಾರ ಸಮಾಜದ ಅಧ್ಯಕ್ಷ ಎಸ್‌.ಜಿ. ಚಿತ್ತಗಾರ, ಮುಖಂಡರಾದ ನಾಗರಾಜ ಉಭಾಳೆ, ರಾಜಣ್ಣ ಬೂಸಾರೆ, ರಾಜ ಕಾಂಬಳೆಕರ್, ಮಾರುತಿ, ವೆಂಕಟೇಶ ಚಿತ್ತಗಾರ, ಶಶಿಧರ, ವಾಸು, ಪ್ರಸಾದ್, ನಾಗರಾಜ, ಗಜಾನನ, ಕೃಷ್ಣ, ಮುರಳಿ ಸೇರಿದಂತೆ ಸಮಾಜದ ಮುಖಂಡರು ಹಾಗೂ ಭಕ್ತರು ಭಾಗವಹಿಸಿದ್ದರು.