‘ನನ್ನ ರೇಷ್ಮೆ- ನನ್ನ ಹೆಮ್ಮೆ 2.0’ ಜಾಗೃತಿ ಕಾರ್ಯಕ್ರಮ: ರೈತರಿಗೆ ವೈಜ್ಞಾನಿಕ ಬೇಸಾಯ ತರಬೇತಿ
'My Silk – My Pride 2.0' Awareness Program: Scientific Cultivation Training for Farmers
ಶಿರಹಟ್ಟಿ, ಆ.19: ಕೇಂದ್ರ ರೇಷ್ಮೆ ಮಂಡಳಿಯು ಜಿಲ್ಲಾ ರೇಷ್ಮೆ ಇಲಾಖೆಯ ಸಹಯೋಗದಲ್ಲಿ ‘ನನ್ನ ರೇಷ್ಮೆ- ನನ್ನ ಹೆಮ್ಮೆ 2.0’ ಕಾರ್ಯಕ್ರಮದಡಿ ತಾಲೂಕಿನ ರೇಷ್ಮೆ ಬೆಳೆಗಾರರಿಗೆ ವೈಜ್ಞಾನಿಕ ಬೇಸಾಯದ ಕುರಿತು ತರಬೇತಿ ನೀಡಿತು.
ಪಟ್ಟಣದ ರೇಷ್ಮೆ ಬೆಳೆಗಾರ ಮಲ್ಲಪ್ಪ ಕರಿಗಾರ ಅವರ ತೋಟದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ. ಸಂತೋಷ ಮಗದುಮ್ ಮಾತನಾಡಿ, ಆಧುನಿಕ ಹಾಗೂ ವೈಜ್ಞಾನಿಕ ಪದ್ಧತಿಗಳನ್ನು ಅಳವಡಿಸಿಕೊಂಡು ರೇಷ್ಮೆ ಕೃಷಿಯಲ್ಲಿ ಉತ್ತಮ ಇಳುವರಿ ಹಾಗೂ ಗುಣಮಟ್ಟ ಪಡೆಯುವಂತೆ ರೈತರಿಗೆ ಸಲಹೆ ನೀಡಿದರು.
ತರಬೇತಿಯಲ್ಲಿ ವೈಜ್ಞಾನಿಕ ಹಿಪ್ಪುನೇರಳೆ (ಮಲ್ಬರಿ) ಬೇಸಾಯ, ಮಣ್ಣಿನ ಫಲವತ್ತತೆ ಕಾಪಾಡುವುದು, ಸುಧಾರಿತ ತಳಿಗಳ ಆಯ್ಕೆ, ಸೂಕ್ತ ನೀರಾವರಿ ಪದ್ಧತಿ ಹಾಗೂ ಗರಿಷ್ಠ ಇಳುವರಿ ಪಡೆಯಲು ಅನುಸರಿಸಬೇಕಾದ ಆಧುನಿಕ ಕೃಷಿ ತಂತ್ರಜ್ಞಾನಗಳ ಕುರಿತು ಮಾಹಿತಿ ನೀಡಲಾಯಿತು.
ಹಿಪ್ಪುನೇರಳೆ ಬೆಳೆಗೆ ತಗಲುವ ವಿವಿಧ ರೋಗಗಳನ್ನು ಆರಂಭಿಕ ಹಂತದಲ್ಲೇ ಗುರುತಿಸುವುದು ಹಾಗೂ ಪರಿಸರ ಸ್ನೇಹಿ ಸಮಗ್ರ ರೋಗ ಮತ್ತು ಕೀಟ ನಿರ್ವಹಣೆ (ಋಕಒ) ಪದ್ಧತಿ ಮೂಲಕ ಗುಣಮಟ್ಟದ ಎಲೆಗಳನ್ನು ಉತ್ಪಾದಿಸುವ ವಿಧಾನಗಳನ್ನು ತಜ್ಞರು ಪ್ರಾಯೋಗಿಕವಾಗಿ ವಿವರಿಸಿದರು. ರೇಷ್ಮೆ ಕೃಷಿಯಲ್ಲಿ ರೈತರು ಎದುರಿಸುತ್ತಿರುವ ಪ್ರಮುಖ ಸವಾಲುಗಳ ಬಗ್ಗೆಯೂ ಚರ್ಚಿಸಲಾಯಿತು.
ಕೇಂದ್ರ ಹಾಗೂ ರಾಜ್ಯ ರೇಷ್ಮೆ ಇಲಾಖೆಗಳ ಸಮನ್ವಯದೊಂದಿಗೆ ರೈತರ ಮನೆಬಾಗಿಲಿಗೆ ವೈಜ್ಞಾನಿಕ ಜ್ಞಾನ ಮತ್ತು ತಂತ್ರಜ್ಞಾನ ತಲುಪಿಸುವ ಪ್ರಯತ್ನ ಇದಾಗಿದೆ. ತಂತ್ರಜ್ಞಾನ ಅಳವಡಿಕೆಯಿಂದ ರೇಷ್ಮೆ ನೂಲಿನ ಗುಣಮಟ್ಟ ಸುಧಾರಿಸುವುದರ ಜೊತೆಗೆ ರೈತರ ಆದಾಯವೂ ಹೆಚ್ಚಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಬಸವರಾಜ ನಾವಿ, ಜಿಲ್ಲಾ ಪಂಚಾಯಿತಿ ರೇಷ್ಮೆ ಉಪನಿರ್ದೇಶಕ ಡಾ. ಶ್ರೀನಿವಾಸಗೌಡ, ಕೇಂದ್ರ ರೇಷ್ಮೆ ಮಂಡಳಿಯ ವಿಜ್ಞಾನಿ ಡಾ. ಸಂತೋಷ ಮಗದುಮ್, ಪಿಕೆಜಿಎಸ್ ದ್ವಿಜಳಿ ಎಫ್ಪಿಒ ಅಧ್ಯಕ್ಷರು, ದೇವಗಿರಿ ನಿವೃತ್ತ ಶಿಕ್ಷಕರು ಹಾಗೂ ರೇಷ್ಮೆ ಕೃಷಿಕರು, ಅಸ್ಮಾ ಸುರಪುರ ರೇಷ್ಮೆ ವಿಸ್ತರಣಾಧಿಕಾರಿ, ತಾಂತ್ರಿಕ ಸೇವಾ ಕೇಂದ್ರ ಶಿರಹಟ್ಟಿ ಹಾಗೂ ತಾಂತ್ರಿಕ ಸೇವಾ ಕೇಂದ್ರ ಗದಗದ ಅಧಿಕಾರಿಗಳು, ಪವಿತ್ರ ವರ್ಗಣ್ಣವರ ಸೇರಿದಂತೆ ರೇಷ್ಮೆ ಬೆಳೆಗಾರರು ಹಾಗೂ ತಾಲೂಕಿನ ರೈತರು ಭಾಗವಹಿಸಿದ್ದರು.
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು
ನಾಗರಿಕರ ಬಹುಕೋಟಿ ಹಣ ವಂಚನೆ ಪ್ರಕರಣ: ಮತ್ತೋರ್ವ ಆರೋಪಿಯ ಬಂಧನ 