ಸಮಿತಿ ಕಾಲೇಜಿನಲ್ಲಿ ಕನ್ನಡ ರಾಜೋತ್ಸವ ನಿಮಿತ್ಯ ‘ಕನ್ನಡ ಕಂಪು’ ಕಾರ್ಯಕ್ರಮ
'Kannada Kampu' program at Samiti College on the occasion of Kannada Rajotsava
ಕಾಗವಾಡ, 18 : ಬೆಳಗಾವಿ ನಗರದ ಎಸ್‌ಎಸ್‌ಎಸ್ ಸಮಿತಿಯ, ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯದಲ್ಲಿ, ಕನ್ನಡ ರಾಜೋತ್ಸವ ಪ್ರಯುಕ್ತವಾಗಿ “ಕನ್ನಡ ಕಂಪು” ಕಾರ್ಯಕ್ರಮವು ಸೋಮವಾರ ದಿ. 17 ರಂದು ನೆರವೇರಿತು.
ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ದೀಪಕ ಗುಡಗನಟ್ಟಿ, ಪ್ರಾಂಶುಪಾಲ ಪ್ರೋ. ರವಿ ಎಸ್. ದಂಡಗಿ ಸೇರಿ ತಾಯಿ ಭುವನೇಶ್ವರಿ ದೇವಿಯ ಮೂರ್ತಿಯೊಂದಿಗೆ ಕುಂಭಮೇಳ ಮತ್ತು ಲೇಜಿಮ ಜಾಥಾಕ್ಕೆ ಚಾಲನೆ ನೀಡಿದರು.
ಜಾಥಾವು ಸಮಿತಿ ಮಹಾವಿದ್ಯಾಲಯದಿಂದ ಶೇಖ ಮಹಾವಿದ್ಯಾಲಯ, ಎಸ್‌ಜಿಬಿಐಟಿ ಸಂಸ್ಥೆ, ಮರಾಠಾ ಮಂಡಳ ಮಹಾವಿದ್ಯಾಲಯ ಮಾರ್ಗದಿಂದ ಸಮಿತಿ ಮಹಾವಿದ್ಯಾಲಯದ ವರೆಗೆ ಸಾಗಿತು. ಜಾಥಾದಲ್ಲಿ ವಿದ್ಯಾರ್ಥಿಗಳ ಮತ್ತು ಕಾಲೇಜಿನ ಅಧ್ಯಾಪಕರು ಪಾಲ್ಗೊಂಡು, ಕನ್ನಡಪರ ಘೋಷಣೆಗಳನ್ನು ಕೂಗಿದರು.
ನಂತರ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾವಿದ್ಯಾಲಯದ ಪ್ರಾಂಶುಪಾಲ ಪ್ರೊ.ರವಿ ಎಸ್. ದಂಡಗಿ ವಹಿಸಿ, ಮಾತನಾಡುತ್ತ, ಕನ್ನಡ ಅಭಿಮಾನ ಬೆಳಿಸಿಕೊಳ್ಳಿ. ಅದರ ಜೊತೆಗೆ ಬೇರೆ ಭಾಷೆಗಳನ್ನೂ ಕಲಿಯಿರಿ. ರಾಜ್ಯೋತ್ಸವ ನವ್ಹೆಂಬರ 1 ಕ್ಕೆ ಮಾತ್ರ ಸೀಮಿತವಾಗದೇ ನಂಬರ 1 ಆಗಬೇಕೆಂದರು. ಮತ್ತು ಕನ್ನಡವನ್ನು ಉಳಿಸಿ ಬೆಳೆಸಿ ಎಂದು ವಿದ್ಯಾರ್ಥಿಗಳಿಗೆ ಹೇಳಿದರು.
ಈ ವೇಳೆ ಉಪ-ಪ್ರಾಂಶುಪಾಲ ಡಾ. ಭರತ ಅಲಸಂದಿ, ಐಸಿಕ್ಯೂ ಸಹ-ಸಂಯೋಜಕಿ ನಾಗವೇಣಿ ಧರೆಣ್ಣವರ, ವಾಣಿಜ್ಯ ವಿಭಾಗದ ಮುಖ್ಯಸ್ಥೆ ಪ್ರೊ. ನಿರ್ಮಲಾ ಗಡಾದ ಸೇರಿದಂತೆ ಮಹಾವಿದ್ಯಾಲಯದ ಬೋಧಕ-ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವರಾಂಜಲಿ ಗುಂಪಿನವರು ಪ್ರಾರ್ಥನೆ ಹಾಡಿದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಅನುರಾಧಾ ಕಂಚಿ ಸ್ವಾಗತಿಸಿದರು. ಸೌಮ್ಯಾ ಹಣಬರಟ್ಟಿ ನಿರೂಪಿಸಿದರು. ಸ್ವಾತಿ ಬಾಳೆಕುಂದ್ರಿ ವಂದಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 