ವಾಣಿಜ್ಯ ನಗರದಲ್ಲಿ ರಾಜ್ಯಮಟ್ಟದ ಸಂಗೀತ ವಾದ್ಯಗಾರರಿಗೆ ‘ಕಲಾರತ್ನ’ ಪ್ರಶಸ್ತಿ
'Kalaratna' Award for State-Level Musicians in the Commercial City
ರಾಣೆಬೆನ್ನೂರು, ಆ.14: ಯಾವುದೇ ಸಂಗೀತ ಕಾರ್ಯಕ್ರಮ ಕಲಾವಿದರೊಂದಿಗೆ ವಾದ್ಯಗಾರರ ಸಹಕಾರವಿಲ್ಲದೆ ಸಂಪೂರ್ಣವಾಗುವುದಿಲ್ಲ. ವೇದಿಕೆಯಲ್ಲಿ ಕಲಾವಿದರು ಇದ್ದರೆ, ಹಿಂಬದಿಯಲ್ಲಿ ವಾದ್ಯಗಾರರು ತಮ್ಮ ಕಲೆಯ ಮೂಲಕ ಕಾರ್ಯಕ್ರಮಕ್ಕೆ ಮೆರುಗು ನೀಡುತ್ತಾರೆ. ಆದರೆ ಅಂತಹ ವಾದ್ಯಗಾರರನ್ನು ಗುರುತಿಸಿ ಗೌರವಿಸುವ ಕಾರ್ಯ ಕಡಿಮೆ. ಈ ಕೊರತೆಯನ್ನು ನೀಗಿಸುವ ಉದ್ದೇಶದಿಂದ ವಾಣಿಜ್ಯ ನಗರದ ಮಾತೋ ಶ್ರೀ ಮಹಾದೇವಕ್ಕ ಮಂಗಳವಾದ್ಯ ಮತ್ತು ಸಂಗೀತ ತರಬೇತಿ ಸಂಸ್ಥೆ ರಾಜ್ಯಮಟ್ಟದ ವಾದ್ಯಗಾರರನ್ನು ಗುರುತಿಸಿ ಗೌರವಿಸಲು ಮುಂದಾಗಿದೆ.
ಸಂಸ್ಥೆಯು ತನ್ನ 6ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ವಿವಿಧ ವಾದ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ರಾಜ್ಯದ ಖ್ಯಾತ ವಾದ್ಯಗಾರರನ್ನು ಗುರುತಿಸಿ ‘ಕಲಾರತ್ನ’ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಪ್ರಶಸ್ತಿ ಪ್ರದಾನ ಸಮಾರಂಭವು ಆ.16ರಂದು ಬೆಳಗ್ಗೆ 11 ಗಂಟೆಗೆ ನಗರದ ಕೋಣಬೆವು ಪ್ಲಾಟಿನಂ, ಬಾಬು ಜಗಜೀವನ ರಾಮ್ ಸಭಾಭವನದಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಬಸವರಾಜ ಸಾವಕ್ಕನವರ್ ತಿಳಿಸಿದ್ದಾರೆ.
ಪ್ರತಿ ವರ್ಷ ರಾಜ್ಯದ ಕ್ರಿಯಾಶೀಲ ಹಾಗೂ ಸೃಜನಶೀಲ ಕಲಾವಿದರನ್ನು ಗುರುತಿಸಿ ಪ್ರಶಸ್ತಿ ನೀಡುವ ಪರಂಪರೆಯನ್ನು ಸಂಸ್ಥೆ ಮುಂದುವರಿಸಿಕೊಂಡು ಬಂದಿದೆ. ಈ ಬಾರಿ ಜಮಖಂಡಿಯ ಪುಂಡಲೀಕ ಭಜಂತ್ರಿ (ಕ್ಲಾರಿನೆಟ್), ಘಟಪ್ರಭಾದ ಅಶೋಕ ಭಜಂತ್ರಿ (ಸಂಗೀತ), ಮೈಸೂರಿನ ಲಕ್ಷ್ಮೀ ರಾಮ್ (ಜಾನಪದ), ತುಮಕೂರಿನ ಸಂಗೀತ ನಿರ್ದೇಶಕ ಶ್ರೀನಿವಾಸ್, ಗದಗನಾಥದ ಶರಣಪ್ಪ ಪೂಜಾರ (ವಯಲಿನ್), ಜಗಳೂರಿನ ಟಿ. ಬಸವರಾಜ (ಕ್ಲಾರಿನೆಟ್) ಹಾಗೂ ಜಮಖಂಡಿಯ ಗುರು ಭಜಂತ್ರಿ (ಢೋಲ್) ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಯ್ಕೆಯಾದ ಸಾಧಕರಿಗೆ ಪ್ರಶಸ್ತಿ ಫಲಕ, ಪ್ರಮಾಣಪತ್ರ, ಶಾಲು, ಮಾಲೆ ಹಾಗೂ ಫಲ-ಪುಷ್ಪ ನೀಡಿ ಗೌರವಿಸಲಾಗುವುದು. ಶಾಸಕ ಪ್ರಕಾಶ ಕೋಳಿವಾಡ ಅವರು ಸಮಾರಂಭ ಉದ್ಘಾಟಿಸಿ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಕಾರ್ಯಕ್ರಮದಲ್ಲಿ ನಾಡಿನ ಗಣ್ಯರು, ರಾಜಕೀಯ ಮುಖಂಡರು, ವರ್ತಕರು, ಉದ್ಯಮಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಬಸವರಾಜ ತಿಳಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 