‘ವಿಶೇಷ ಚೇತನ ಮಕ್ಕಳಿಗೆ ಸರ್ಕಾರಿ ಸೌಲಭ್ಯಗಳು ದೊರಕುವಂತೆ ಮಾಡುವುದು ಶಿಕ್ಷಕರ ಧರ್ಮ’
'It is the duty of teachers to ensure that government facilities are available to children with spec
ಲೋಕದರ್ಶನ ವರದಿ
ಗುರ್ಲಾಪೂರ 13: ಸ್ಥಳೀಯ ಪಿಎಂಶ್ರೀ ಶಾಸಕರ ಸರ್ಕಾರಿ ಮಾದರಿ ಶಾಲೆ ಗುರ್ಲಾಪೂರದಲ್ಲಿ ವಿಶೇಷ ಚೇತನ ಮಕ್ಕಳ ಕ್ರೀಡಾಕೂಟ ಹಾಗೂ ಅರಿವು ಮೂಡಿಸುವ ಕಾರ್ಯಕ್ರಮ ದಲ್ಲಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷರಾದ ಎಲ್ ಪಿ ನೇಮಗೌಡರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ. ಮುಖ್ಯ ಅಥಿತಿಗಳಾಗಿ ಬಿ,ಆಯ್, ಈ,ಆರ್,ಟಿ ಹಿರಿಯ ಅಧಿಕಾರಿಗಳು ವಾಯ ಬಿ ಪಾಟೀಲ್ ಮಾತನಾಡಿ ವಿಶೇಷ ಚೇತನ ಮಕ್ಕಳಿಗೆ ಅನುಕಂಪ ತೋರಿಸುವುದಕ್ಕಿಂತ ಅವಕಾಶ ತೋರುವುದು ಹಾಗೂ ಸರ್ಕಾರಿ ಸೌಲಭ್ಯಗಳು ದೊರಕುವಂತೆ ಮಾಡುವುದು ಶಿಕ್ಷಕರ ಧರ್ಮ ಎಂದು ಶಿಕ್ಷಕರಿಗೆ ತಿಳಿಸುತ್ತಾ ಪಾಲಕರು ತಮ್ಮ ಮಕ್ಕಳಿಗೆ ವಿಶೇಷ ಚೇತನ ಮಕ್ಕಳಿಗೆ ಸಿಗುವ ಸೌಕರ್ಯಗಳ ಬಗ್ಗೆ ತಿಳಿಸಬೇಕು ಮತ್ತು ತಮ್ಮ ಮಕ್ಕಳ ಕಲಿಕೆಯಲ್ಲಿಯ ಪ್ರಗತಿ ಬಗ್ಗೆ ತಿಳಿದಿರಬೇಕು ಎಂದರು.
ಅನಿ ಮೇಡಂ ಅವರು ಮಾತನಾಡಿ ಎಲ್ಲಾ ಸಾಮಾನ್ಯ ಮಕ್ಕಳ ಜೊತೆ ವಿಶೇಷ ಮಕ್ಕಳು ಸಹಿತ ಬೆರೆತು ಅವರಿಗೆ ಎಲ್ಲರಂತೆ ಶಿಕ್ಷಣ ಸೌಭಾಗ್ಯ ಕೊಡುವಂತೆ ಪ್ರೇರಣೆ ಮಾತು ಆಡಿದರು.
ಕಾರ್ಯಕ್ರಮದಲ್ಲಿ ಯಲ್ಲಪ್ಪ ವಗ್ಗನವರ ಆಶಾದೇವಿ ಪತ್ತಾರ, ಮಹಾನಂದ ಪಾಶ್ಚಾಪುರ, ಮುಖ್ಯೋಪಾಧ್ಯಾಯರು ಆದ ಬಿ ಬಿ ಸಸಾಲಟ್ಟಿ , ಪ್ರಕಾಶ ಸುಳ್ಳನವರ, ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕರು ಆದ ಶೇಖರ್ ಕುದರಿ, ಎಸ್ ಬಿ ಸದಲಗಿ, ಹಾಗೂ ಸಂಪನ್ಮೂಲ ಶಿಕ್ಷಕರು ಆದ ಸಿ ಎಸ್ ಮೋಹಿತೆ, ಜ್ಯೋತಿ ಕಲ್ಯಾಣಿ, ಕವಿತಾ ಕಟಗಿ, ವಿದ್ಯಾಶ್ರೀ, ನೇಮಗೌಡರ, ಶೋಭಶ್ರಿ, ಪಾಲಭಾವಿ, ಗಂಗಮ್ಮ ಕಂಬಾರ, ಪೂಜಾ ಮಹಾರಾಜ???, ಶ್ರೀಕಾಂತ್ ನಾಯಿಕ ಸರ್, ಸುನೀಲ ತುಪ್ಪದ, ಪ್ರಕಾಶ್ ಸುಳ್ಳನವರ, ಹಾಗೂ ವಿವಿಧ ಶಾಲೆಯ ಗುರುಗಳು ಗುರುಮಾತೆಯರು ಭಾಗವಹಿಸಿದ್ದರು.
ಎಲ್ ಆರ್ ಸಾಲಿಮಠ ಸರ್ ಸ್ವಾಗತಿಸಿದರು, ಎಸ್ ಬಿ ದರೂರ ಸರ್ ವಂದಿಸಿದರು, ಬಿ ವಾಯ ಮೋಮಿನ್ ಸರ್ ನಿರೂಪಿಸಿದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 