ಶಿಕ್ಷಕರ ಶ್ರಮ ಗುರುತಿಸಿ ನೀಡುವ ಗುರುರತ್ನ ಪ್ರಶಸ್ತಿ: ಹನುಮಂತಪ್ಪ

ಶಿಕ್ಷಕರ ಶ್ರಮ ಗುರುತಿಸಿ ನೀಡುವ ಗುರುರತ್ನ ಪ್ರಶಸ್ತಿ: ಹನುಮಂತಪ್ಪ 'Gururatna' Award Recognizes Teachers' Hard Work: Hanumanthappa

ಲೋಕದರ್ಶನ ವರದಿ  

ಕಂಪ್ಲಿ, ಆ. ೨೪: ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿ ಸಾಧನೆ ಮಾಡಿದ ಶಿಕ್ಷಕರಿಗೆ ನೀಡಲಾಗುವ ಗುರುರತ್ನ ಪ್ರಶಸ್ತಿಯು ವಿಶೇಷ ಗೌರವವಾಗಿದೆ. ಶಿಕ್ಷಕರ ಪರಿಶ್ರಮವನ್ನು ಗುರುತಿಸಿ ಪ್ರಶಸ್ತಿ ನೀಡುವುದರಿಂದ ಅವರ ಕಾರ್ಯವೈಖರಿಗೆ ಮತ್ತಷ್ಟು ಪ್ರೋತ್ಸಾಹ ದೊರೆಯುತ್ತದೆ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ ಹನುಮಂತಪ್ಪ ಹೇಳಿದರು. 

ಬಳ್ಳಾರಿ ನಗರದ ಜೋಳದ ರಾಶಿ ದೊಡ್ಡನಗೌಡ ರಂಗಮAದಿರದಲ್ಲಿ ಇತ್ತೀಚೆಗೆ ನಡೆದ ಗುರುರತ್ನ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಂಪ್ಲಿ ತಾಲೂಕಿನ ನಾಲ್ವರು ಶಿಕ್ಷಕರಿಗೆ ಗುರುರತ್ನ ಪ್ರಶಸ್ತಿ ನೀಡಿ ಗೌರವಿಸಿದ ಬಳಿಕ ಅವರು ಮಾತನಾಡಿದರು. 

ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಯಾವುದೇ ಫಲಾಪೇಕ್ಷೆಯಿಲ್ಲದೆ ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿದಾಗ ಪ್ರಶಸ್ತಿಗಳು ಅವರನ್ನು ಹುಡುಕಿಕೊಂಡು ಬರುತ್ತವೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಶಿಕ್ಷಣ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಿಕ್ಷಕರಿಗೆ ಗುರುರತ್ನ ಪ್ರಶಸ್ತಿ ನೀಡುವ ಮೂಲಕ ಗೌರವಿಸಿರುವುದು ಹೆಮ್ಮೆಯ ಸಂಗತಿ ಎಂದರು. 

ಸಮಾರಂಭದಲ್ಲಿ ಪ್ರಭುಕ್ಯಾಂಪಿನ ಸರ್ಕಾರಿ ಶಾಲೆಯ ಪ್ರಭಾರಿ ಮುಖ್ಯಗುರು ಪಿ. ವೀರಕುಮಾರ, ಮೆಟ್ರಿ ಶಿವಪುರ ಶಾಲೆಯ ಬಡ್ತಿ ಮುಖ್ಯಗುರು ರಾಮಚಂದ್ರಪ್ಪ, ಕಂಪ್ಲಿ ಪಟ್ಟಣದ ಎಂ.ಡಿ.ಕ್ಯಾAಪ್ ಶಾಲೆಯ ಬಡ್ತಿ ಮುಖ್ಯಶಿಕ್ಷಕಿ ಅಗಳಿ ನಾಗರತ್ನ ಹಾಗೂ ಜೀರಿಗೆನೂರು ಶಾಲೆಯ ಸಹ ಶಿಕ್ಷಕ ಕೆ. ವಿರೇಶ್ ಅವರು ಗುರುರತ್ನ ಪ್ರಶಸ್ತಿ ಸ್ವೀಕರಿಸಿದರು. 

ಈ ಸಂದರ್ಭದಲ್ಲಿ ಕಾಂಗ್ರೆಸ್ ಹಿರಿಯ ಮುಖಂಡ ವೆಂಕಟೇಶ್ ಪ್ರಸಾದ್, ಮೇಯರ್ ಪಿ. ಗಾದೆಪ್ಪ, ಉಪಮೇಯರ್ ಮುಬಿನಾಬೀ, ಮಾಜಿ ಬುಡಾ ಅಧ್ಯಕ್ಷ ಉಮಯಾನ್ ಖಾನ್, ರಾಜ್ಯಾಧ್ಯಕ್ಷ ಚಂದ್ರಶೇಖರ ನುಗ್ಲಿ, ಉಪಾಧ್ಯಕ್ಷ ಮಾರುತೇಶ, ಪ್ರಧಾನ ಕಾರ್ಯದರ್ಶಿ ಚೇತನ್, ಸಂಘಟನಾ ಕಾರ್ಯದರ್ಶಿ ಸುಂದರೇಶ್, ಬಳ್ಳಾರಿ ಜಿಲ್ಲಾಧ್ಯಕ್ಷ ಸಿ. ನಿಂಗಪ್ಪ, ಪ್ರಧಾನ ಕಾರ್ಯದರ್ಶಿ ಗುಂಡಪ್ಪನವರ ನಾಗರಾಜ, ಸರ್ಕಾರಿ ನೌಕರರ ಸಂಘದ ಕಂಪ್ಲಿ ತಾಲೂಕು ಅಧ್ಯಕ್ಷ ಎಚ್. ದೊಡ್ಡಬಸಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕಂಪ್ಲಿ ಪ್ರಧಾನ ಕಾರ್ಯದರ್ಶಿ ಎಚ್. ಜಡಪ್ಪ, ಖಜಾಂಚಿ ಐ. ಗಂಗಮ್ಮ, ಕುರುಗೋಡು ಅಧ್ಯಕ್ಷ ತುಕಾರಾಂ ಗೋರವ ಸೇರಿದಂತೆ ಗಣ್ಯರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು. 

ಚಿತ್ರ: ಬಳ್ಳಾರಿ ನಗರದಲ್ಲಿ ನಡೆದ ಸಮಾರಂಭದಲ್ಲಿ ಶಿಕ್ಷಕರಿಗೆ ಗುರುರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.