‘ವಿದ್ಯಾರ್ಥಿಗಳ ಶೆಕ್ಷಣಿಕ ಅಭಿವದ್ಧಿಗೆ ಸರಕಾರದಿಂದ ಕೋಟ್ಯಂತರ ಹಣ ಬಿಡುಗಡೆ’
'Government releases crores of rupees for the educational development of students'
ಮುದ್ದೇಬಿಹಾಳ 01: ಗ್ರಾಮೀಣ ಭಾಗದ ಹಾಗೂ ಕಡು ಬಡತನದ ವಿದ್ಯಾರ್ಥಿಗಳ ಶೆಕ್ಷಣಿಕ ಅಭಿವದ್ಧಿಗೆ ಸರಕಾರ ಕೋಟ್ಯಂತರ ಹಣ ಬಿಡುಗಡೆ ಮಾಡುತ್ತಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿನಿಯರು ಬಳಸಿಕೊಂಡು ಐಎಎಸ್, ಕೆಎಎಸ್, ಎಫ್.ಡಿಎ ಇನ್ನೀತರ ಪರೀಕ್ಷೆ ಗೆ ಆಯ್ಕೆಯಾಗಿ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಶಾಸಕ, ಕೆಎಸ್.ಡಿಎಲ್ ಅಧ್ಯಕ್ಷ ಸಿ.ಎಸ್ ನಾಡಗೌಡ ಹೇಳಿದರು.
ಜಿಲ್ಲಾ ಪಂಚಾಯತ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಪಟ್ಟಣದ ಮಾರುತಿನಗರದಲ್ಲಿ 6.5 ಕೋಟಿ ರೂ ವೆಚ್ಚದಲ್ಲಿ 100 ವಿದ್ಯಾರ್ಥಿನಿಯರ ಸಾಮರ್ಥ್ಯದ ಡಾ. ಬಿ ಆರ್ ಅಂಬೇಡ್ಕರ್ ಮೆಟ್ರೀಕ್ ನಂತರದ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಶೆಕ್ಷಣಿಕ ಅಭಿವದ್ಧಿ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಹಲವಾರು ವಿನೂತನ ಯೋಜನೆಗಳನ್ನು ಜಾರಿ ಗೆ ತಂದಿದೆ. ಈ ರೀತಿಯ ಯೋಜನೆಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಶೆಕ್ಷಣೀಕ ಪ್ರಗತಿ ಸಾಧಿಸಲು ಮುಂದಾಗಬೇಕು. ವಸತಿ ನಿಲಯಗಳು ಮಕ್ಕಳ ಭವಿಷ್ಯ ರೂಪಿಸುವ ಕಲಿಕಾ ಕೇಂದ್ರಗಳು. ಇಂತಹ ಕೇಂದ್ರಗಳಲ್ಲಿ ಮಕ್ಕಳ ಓದಿಗೆ ಪೂರಕವಾಗಿ ಅವರ ಉತ್ತಮ ವ್ಯಕ್ತಿತ್ವ ರೂಪಿಸುವ ನಿಟ್ಟಿನಲ್ಲಿ ಮನೆಯ ವಾತಾವರಣ ನಿರ್ಮಿಸಲಾಗಿದ್ದು, ಇದನ್ನು ವಿದ್ಯಾರ್ಥಿಗಳು ಮುಂದಿನ ಪೀಳಿಗೆಯ ವಿದ್ಯಾರ್ಥಿಗಳಿಗೆ ಬರುವ ರೀತಿಯಲ್ಲಿ ಉಳಿಸಿಕೊಂಡು ಹೋಗಬೇಕೆಂದರು.ಸಜ್ಜನರ ಸಂಘ ಹೆಜ್ಜೇನು ಸವಿದಂತೆ ಎನ್ನುವಾಗೆ ವಿದ್ಯಾರ್ಥಿನಿಯರು ಉತ್ತಮರ ಸಂಘ ಮಾಡಿ ಅಭ್ಯಸಿಸಬೇಕು. ಅದೆಷ್ಟೋ ತಂದೆ-ತಾಯಂದಿರು ಮಕ್ಕಳ ಮೇಲೆ ನೂರಾರು ಕನಸು ಕಂಡಿರುತ್ತಾರೆ. ಯಾವುದಾದರೂ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಪಾಲಕರ ಕನಸು ವಿದ್ಯಾರ್ಥಿಗಳು ನನಸು ಮಾಡಬೇಕೆಂದು ಶಾಸಕರು ವಿದ್ಯಾರ್ಥಿನಿಯರಿಗೆ ತಿಳಿ ಹೇಳಿದರು.ವಿದ್ಯಾರ್ಥಿಗಳು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕವಾಗಿ ಏಳಿಗೆ ಸಾಧಿಸಬೇಕು. ಆಗ ಮಾತ್ರ ಇಂತಹ ವಸತಿ ಶಾಲೆಗಳ ಆಶಯ ಸಾಕಾರಗೊಳ್ಳುತ್ತದೆ. ಸರ್ಕಾರಿ ಕೆಲ ವಿದ್ಯಾರ್ಥಿ ವಸತಿ ಶಾಲೆಗಳು ಖಾಸಗಿ ಶಿಕ್ಷಣ ಸಂಸ್ಥೆಗಳ ವಸತಿ ಶಾಲೆಗಳನ್ನು ಮೀರಿಸುವ ರೀತಿ ಅಚ್ಚುಕಟ್ಟಾಗಿ ಇವೆ. ಸರ್ಕಾರಿ ಶಾಲಾ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆದು ಸಾಧನೆ ಮಾಡಿದ್ದಾರೆ. ಇದು ಹೆಮ್ಮೆಯ ಸಂಗತಿಯಾಗಿದೆ. ಸಮಾಜದಲ್ಲಿ ಕೆಲವು ಸವಾಲುಗಳನ್ನು ಎದುರಿಸಲು ಮಕ್ಕಳನ್ನು ಪಾಲಕರು ಸಜ್ಜುಗೊಳಿಸುವ ಕೆಲಸವಾಗಬೇಕಿದೆ ಎಂದರು.ವಸತಿ ಶಾಲೆಗಳಲ್ಲಿ ಕಲಿಯಲು ಬರುವ ಮಕ್ಕಳು ಬಹುತೇಕ ಬಡವರ ಮಕ್ಕಳು ಬಡ ವಿದ್ಯಾರ್ಥಿನಿಯರು ಗುಣಮಟ್ಟದ ಶಿಕ್ಷಣದ ಕಾರಣಕ್ಕಾಗಿ ಸುಂದರ ಸುಸಜ್ಜಿತ ಶಿಸ್ತಿನಿಂದ ಇರುವ ಕಟ್ಟಡವನ್ನು ಸರಕಾರ ಪೂರೈಸಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿನಿಯರು ಪಡೆದುಕೊಂಡು ಸಮಾಜಕ್ಕೆ ಕೊಡುಗೆ ನೀಡಬೇಕೆಂದು ಸಮಾಜ ಕಲ್ಯಾಣ ಇಲಾಖೆ ತಾಲೂಕು ಅಧಿಕಾರಿ ಬಿ.ಜಿ ಮಠ ಹೇಳಿದರು.
ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಅಧಿಕಾರಿ ಎ.ಬಿ ರೆಡ್ಡಿ, ತಾ.ಪಂ ಇಓ ಸಂಗನಗೌಡ ಬಿರಾದಾರ, ಪುರಸಭೆ ಮಾಜಿ ಅಧ್ಯಕ್ಷ ಮೈಬೂಬ ಗೊಳಸಂಗಿ, ಪುರಸಭೆ ಮಾಜಿ ಸದಸ್ಯ ವಿರೇಶ ಹಡಲಗೇರಿ, ಸಿಕಂದರ್ ಜಾನ್ವೇಕರ, ಆನಂದಗೌಡ ಬಿರಾದಾರ, ಸಮಾಜ ಕಲ್ಯಾಣ ಇಲಾಖೆ ಸಿಬ್ಬಂದಿಗಳಾದ ಸಂಜು ಲಮಾಣಿ, ಗೌತಮ್ ತಳವಾರ, ಹರ್ಷವರ್ಧನ ಕಟ್ಟಿಮನಿ, ಬಸಯ್ಯ ಹಿರೇಮಠ, ವಸತಿ ನಿಲಯಗಳ ವಾರ್ಡನ್ ಗಳಾದ ಶ್ರೀಕಾಂತ್ ಸಲಗಾರ, ನಾಗರಾಜ ಗುಡಗುಂಟಿ, ಮಹಾಂತೇಶ ತಾಳಿಕೋಟಿ, ಸಾವಿತ್ರಿ ಬಿರಾದಾರ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.
ಬೆಳಗಾವಿ ಬಸ್ ನಿಲ್ದಾಣದಲ್ಲಿ ಬಾಲಕನಿಂದ ಬ್ಯಾಗ್ ಎಗ್ಗರಿಸಲು ಯತ್ನ : ಮಹಿಳೆ ಪೊಲೀಸ್ ವಶಕ್ಕೆ
ಸಂಕೇಶ್ವರ ಬಳಿ ಟಿಟಿ, ಕಾರ ನಡುವೆ ಭೀಕರ್ ಅಪಘಾತ ; ಮದುವೆಗೆ ಹೊರಟಿದ್ದ ಟೆಂಪೋ ಟ್ರಾವೆಲ್ ರ ಪಲ್ಟಿ,
ಬೆಳಗಾವಿಯಲ್ಲಿ ರಾಜ್ಯಸಭೆ ಸ್ಥಾನಕ್ಕೆ ಜೋರಾದ ಲಾಬಿ : ಕಡಾಡಿ ಅಧಿಕಾರವಧಿ ಅಂತ್ಯ : ಹಲವು ಮುಖಂಡರು ಮುಂಚೂನೆಯಲ್ಲಿ
ಬೆಳಗಾವಿಯ ಹಾರ್ಡ್ ವೇರ್ ಅಂಗಡಿಯಲ್ಲಿ ಬೆಂಕಿ ಅವಘಡ : ಲಕ್ಷಾಂತರ ಹಾನಿ
ಅಕ್ರಮ ಚಟುವಟಿಕೆ ಎಸಗಿದರೆ ಗಡಿಪಾರದ ಎಚ್ಚರಿಕೆ: ಪೊಲೀಸ ಠಾಣೆಯಲ್ಲಿ ರೌಡಿಶೀಟರ್ ಗಳ ಪರೇಡ್
5 ತಿಂಗಳಿಂದ ವೇತನವಿಲ್ಲದೆ ಪೌರ ಕಾರ್ಮಿಕರ ಪರದಾಟ : ಕುಟುಂಬ ನಿರ್ವಹಣೆಗೆ ಸಾಲಕ್ಕಾಗಿ ಹುಡುಕಾಟ 