ಚಂದನ ವಾಹಿನಿಯಲ್ಲಿ 'ಗಾನ ಚಂದನ'

 ಬೆಂಗಳೂರು, ಅ 03:  ನಾಡಿನ ಹೆಮ್ಮೆಯ ದೂರದರ್ಶನ ಚಂದನವಾಹಿನಿಯಲ್ಲಿ ಗಾಯನ ಪ್ರತಿಭಾನ್ವೇಷಣೆಯ ವಿನೂತನ ಕಾರ್ಯಕ್ರಮ "ಗಾನ ಚಂದನ" ಪ್ರಾರಂಭವಾಗಿದೆ. ಹೆಸರಾಂತ ನಟ ರಾಘವೇಂದ್ರ ರಾಜಕುಮಾರ್ ಕಾರ್ಯಕ್ರಮ ಉದ್ಘಾಟಿಸಿ, ಹಾಡಿ,  ಶುಭ ಕೋರಿದರು.  ಕರ್ನಾಟಕದ ಪ್ರತಿ ಜಿಲ್ಲೆಗಳ ನೈಜ, ಸಹಜ ಗಾನಪ್ರತಿಭೆಗಳನ್ನು ಹೆಕ್ಕಿ, ಸೂಕ್ತ ಮಾರ್ಗದರ್ಶನಗಳೊಂದಿಗೆ ಗಾಯನಕಲೆಗೆ ಉತ್ತೇಜನ ನೀಡಲಾಗುತ್ತದೆ.  ದೂರದರ್ಶನದ ಭವ್ಯವಾದ ಸೆಟ್ ನಲ್ಲಿ, ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಬಿ.ಆರ್. ಛಾಯಾ ಹಾಗೂ ಜನಪ್ರಿಯ ಸಂಗೀತ ನಿದರ್ೆಶಕ -ಸಿನೆಮಾ ಸಾಹಿತಿ ಶ್ರೀ ತ.ಮನೋಹರ್ ರ  ಸಮಕ್ಷಮದಲ್ಲಿ, ವಿನೂತನ ಗಾನತಂತ್ರಗಳೊಂದಿಗೆ "ಗಾನ ಚಂದನ" ಎಲ್ಲರ ಮನೆ-ಮನಗಳಿಗೆ ಅಕ್ಟೋಬರ್ 2 ರಿಂದ ತಲುಪುತ್ತಿದೆ.  ಕಿರುತೆರೆಯ ಪ್ರತಿಭಾವಂತ ಕಲಾವಿದ ಜೋಡಿ ವಿಕ್ರಂ ಸೂರಿ ಮತ್ತು ನಮಿತಾರ ನಿರೂಪಣೆಯಲ್ಲಿ ರಾತ್ರಿ 8 ರಿಂದ 9ಘಂಟೆಯವರೆಗೆ ಈ ಕಾರ್ಯಕ್ರಮ ಮೂಡಿ ಬರಲಿದೆ.