ಬೆಂಗಳೂರು, ಆ 29 ಸತೀಶ್ ನೀನಾಸಂ, ಲೂಸ್ ಮಾದ ಯೋಗಿ ನಟನೆಯ "ಪರಿಮಳ ಲಾಡ್ಜ್" ಚಿತ್ರದ ಟೀಸರ್ ಬಿಡುಗಡೆಯಾಗಿದೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಟೀಸರ್ ಬಿಡುಗಡೆಗೊಳಿಸಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.
ಇತ್ತೀಚೆಗೆ ಪಾತ್ರಗಳ ಪರಿಚಯದ ಟೀಸರ್ ಬಿಡುಗಡೆಯಾದಾಗ ಲೂಸ್ ಮಾದ ಹಾಗೂ ಕ್ವಾಟ್ಲೆ ಸತೀಶನಿಗೆ ಸಲಿಂಗಕಾಮಿಗಳು ಅಂತ ಟೈಟಲ್ಸ್ ನೀಡಿದ್ದರು ಇದರಿಂದ ಪರಿಮಳ ಲಾಡ್ಜ್ನಲ್ಲಿ ನೀನಾಸಂ ಸತೀಶ್-ಲೂಸ್ ಮಾದ ಸಲಿಂಗಿಗಳಾಗಿ ಕಾಣಿಸಲಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಬಳಿಕ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸತೀಶ್ 'ಟೈಟಲ್ ಕಾಡ್ರ್ನಲ್ಲಿ ಬರುವುದು ಬರೀ ಚೇಷ್ಟೆಗಷ್ಟೆ ನನ್ನದು ಮತ್ತು ಲೂಸ್ ಮಾದ ಯೋಗಿಯದು ಸಲಿಂಗ ಕಾಮಿಗಳ ಪಾತ್ರವಲ್ಲ' ಎಂದು ತಿಳಿಸಿದ್ದರು.
ಇದೀಗ ನೀನಾಸಂ ಸತೀಶ್ ಕೂಡ ಇದು ಸಲಿಂಗ ಕಾಮಿಗಳ ಚಿತ್ರವಲ್ಲ, ತಪ್ಪಾಗಿ ಸುದ್ದಿ ಹರಿದಾಡುವುದು ಬೇಡ ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ
ಇನ್ನು ಪರಿಮಳ ಲಾಡ್ಜ್ನಲ್ಲಿ ದತ್ತಣ್ಣ, ಬುಲೆಟ್ ಪ್ರಕಾಶ್ ಸೇರಿದಂತೆ ದೊಡ್ಡ ತಾರಾಬಳಗವೇ ಕಾಣಿಸಿಕೊಂಡಿದೆ. ಈ ಟೀಸರ್ ವಿಡಿಯೋ ಇದೀಗ ಪಡ್ಡೆಗಳ ಹಾಟ್ ಫೇವರಿಟ್ ಆಗಿದ್ದು, ಮತ್ತೊಂದು ನಗುವಿನ ಕಚಗುಳಿ ಇಡುವ ಸಿನಿಮಾದೊಂದಿಗೆ 'ನೀದರ್ೊಸೆ' ನಿರ್ದೇಶಕರು ಮತ್ತೆ ಬರುವುದಂತು ಖಾತ್ರಿಯಾಗಿದೆ.
ನಗೆಯ ಡೋಸ್ ಇನ್ನಷ್ಟು ಹೆಚ್ಚಾಗಿ ಸಿಗಲಿದೆ ಚಿತ್ರದಲ್ಲಿರುವುದು ಡಬಲ್ ಮೀನಿಂಗ್ ಎನ್ನುವುದಕ್ಕಿಂತಲೂ ಚೇಷ್ಟೆ ಎನ್ನಬಹುದು ಆದರೆ ಇದು ಅತಿರೇಕವಲ್ಲ ನೋಡುವುದಕ್ಕೆ ಅಶ್ಲೀಲವಾಗಿದ್ದರೆ ಮಾತ್ರ ಅತಿರೇಕ 'ನೀರ್ ದೋಸೆ'ಯಂತೆಯೇ ಕುಟುಂಬದ ಎಲ್ಲ ಸದಸ್ಯರೂ ಕುಳಿತು ನೋಡಬಹುದಾದ ಚಿತ್ರ ಎಂದಿದ್ದಾರೆ ನಿರ್ದೇಶಕರು.
ಪ್ರತಿಯೊಂದು ಪಾತ್ರಗಳ ಹಿಂದೆಯೂ ಕಣ್ಣೀರಿನ ಕಥೆಯಿರುತ್ತದೆ ಅದನ್ನು ಹಾಗೆಯೇ ಜನರ ಮುಂದಿಟ್ಟರೆ ನೋಡಲು ಸಾಧ್ಯವಾಗುವುದಿಲ್ಲ ಹೀಗಾಗಿ ಅದಕ್ಕೊಂದಿಷ್ಟು ಚೇಷ್ಟೆಯ ಲೇಪವಿರುತ್ತದೆ ಈಗಾಗಲೇ ಚಿತ್ರದ ಸೆನ್ಸಾರ್ ಆಗಿದೆ ಎಂದಿದ್ದಾರೆ.
ಟೀಸರ್ ನಲ್ಲಿ ರಮ್ಯಾ ಅವರ ಭಾವಚಿತ್ರ ಬಳಸಿರುವ ಬಗ್ಗೆ ಪ್ರಸ್ತಾಪಿಸಿ, ಚಿತ್ರ ನೋಡಿದರೆ ಎಲ್ಲವೂ ತಿಳಿಯುತ್ತದೆ ವೈಯಕ್ತಿಕವಾಗಿ ರಮ್ಯಾ ಅವರ ವ್ಯಕ್ತಿತ್ವ ನನಗಿಷ್ಟ. ಲಾಡ್ಜ್ ಗಳಲ್ಲಿ ಕೇವಲ ರೂಮ್ ಗಳಷ್ಟೇ ಇರುವುದಿಲ್ಲ ಪ್ರತಿಯೊಂದು ಕೋಣೆಗೂ ಒಂದೊಂದು ಕಥೆಯಿರುತ್ತದೆ ಅದರಲ್ಲಿ ಗಂಭೀರತೆ, ಚೇಷ್ಟೆ ಎಲ್ಲವೂ ಮಿಳಿತವಾಗಿಉತ್ತದೆ ಎಂದು ಹೇಳಿದ್ದಾರೆ.