‘ಧರ್ಮ ಸಂಸ್ಕಾರಗಳಿಂದ ಮನುಷ್ಯನಿಗೆ ಸಾತ್ವಿಕ ಚೈತನ್ಯ’
'Dharma and rituals give man a virtuous spirit'
ಧಾರವಾಡ 13 : ಧರ್ಮದ ತತ್ವ-ಸಿದ್ಧಾಂತಗಳನ್ನು ಅರಿತು ಆಚರಣೆಗೆ ತರಬೇಕು. ಧರ್ಮ ಸಂಸ್ಕಾರಗಳಿಂದ ಮನುಷ್ಯನಿಗೆ ಸಾತ್ವಿಕ ಚೈತನ್ಯ ಪ್ರಾಪ್ತವಾಗುತ್ತದೆ ಎಂದು ಹುಬ್ಬಳ್ಳಿ ತಾಲೂಕು ಸುಳ್ಳ ಪಂಚಗೃಹ ಹಿರೇಮಠದ ಶಿವಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.ಅವರು ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶ್ರೀಶೈಲ ಮಲ್ಲಿಕಾರ್ಜುನಸ್ವಾಮಿ ದೇವಾಲಯದ 2ನೆಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು. ಪ್ರತಿಯೊಂದೂ ಧರ್ಮದ ಉಪದೇಶಗಳಲ್ಲಿ ಜನಕಲ್ಯಾಣವೇ ಕೇಂದ್ರೀಕೃತವಾಗಿದೆ. ಧರ್ಮದ ಸತ್ಯ-ಶುದ್ಧ ಆಚರಣೆಗಳಿಂದ ವಿಮುಖನಾಗುವ ಮನುಷ್ಯನು ಶಾಂತಿ, ನೆಮ್ಮದಿ, ಸಮಾಧಾನಗಳನ್ನು ಕಳೆದುಕೊಂಡು ಬದುಕಿನ ರಹದಾರಿಯಲ್ಲಿ ನಿರಾಸೆ ಅನುಭವಿತ್ತಾನೆ ಎಂದರು.
ನಿತ್ಯವೂ ಆಧ್ಯಾತ್ಮಿಕ ಪ್ರವಚನ ನೀಡುತ್ತಿರುವ ಕಲ್ಬುರ್ಗಿ ಜಿಲ್ಲೆ ಶಹಬಾದ ತಾಲೂಕು ರಾವೂರ ಸಿದ್ದಲಿಂಗೇಶ್ವರ ಸಂಸ್ಥಾನಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ವೀರಶೈವ-ಲಿಂಗಾಯತ ಧರ್ಮವು ಇಷ್ಟಲಿಂಗ ಧಾರಣೆ ಮತ್ತು ನಿತ್ಯದಲ್ಲಿ ಅದರ ಅರ್ಚನೆ ಅನುಸಂಧಾನವನ್ನು ಬಲವಾಗಿ ಪ್ರತಿಪಾದಿಸುತ್ತದೆ. ಅಷ್ಟಾವರಣಗಳಲ್ಲಿ ಒಂದಾದ ಇಷ್ಟಲಿಂಗದಲ್ಲಿ ನಿಷ್ಠೆ ಇಟ್ಟು ಪೂಜಿಸಿದರೆ ನಮ್ಮ ಸಕಲ ಇಷ್ಟಾರ್ಥಗಳನ್ನು ಅದು ಈಡೇರಿಸುತ್ತದೆ ಎಂದರು. ಮಣಕವಾಡದ ಅಭಿನವ ಮೃತ್ಯುಂಜಯ ಸ್ವಾಮೀಜಿ ಶಿಷ್ಯರಾದ ಶ್ರೇಷ್ಠ ದೇವರು ವೇದಿಕೆಯಲ್ಲಿದ್ದರು. ಗಿರಿಮಲ್ಲಯ್ಯ ನಂದಿಕೋಲಮಠ ಸ್ವಾಗತಿಸಿದರು. ಶ್ರೀಶೈಲ ಲಕ್ಕಮ್ಮನವರ ನಿರೂಪಿಸಿದರು. ಶಶಿಧರ ಗರಗ ವಂದಿಸಿದರು. ಬಸವರಾಜ ಪುಟ್ಟಿನಾಯ್ಕರ, ಮಲ್ಲಿಕಾರ್ಜುನ ಲಕ್ಕಮ್ಮನವರ, ರಾಜು ದೇಸಾಯಿ, ಬಸವರಾಜ ಕರಿಕಟ್ಟಿ, ಕಲ್ಲಪ್ಪ ತೇಗೂರ, ಮಹೇಶ ಚಿಲಕವಾಡ, ಮಲ್ಲಪ್ಪ ಹೂಗಾರ ಇತರರು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 